ಪಿಇಎಸ್ ವೈದ್ಯಕೀಯ ಕಾಲೇಜಿಗೆ ಎನ್‌ಎಂಸಿ ಅನುಮತಿ

Dr. M. R. Doreswamy - Chancellor, PES University
Published on

ಬೆಂಗಳೂರು ಪಿಇಎಸ್ ವಿಶ್ವವಿದ್ಯಾಲಯದ ವೈದ್ಯಕೀಯ ವಿಜ್ಞಾನಗಳು ಮತ್ತು ಸಂಶೋಧನಾ ಸಂಸ್ಥೆಗೆ ರಾಷ್ಟ್ರೀಯ ವೈದ್ಯಕೀಯ ಆಯೋಗವು ಅನುಮತಿ ನೀಡಿದೆ.

2024-25ನೇ ಶೈಕ್ಷಣಿಕ ಸಾಲಿಗೆ 100 ಇನ್‌ಟೇಕ್ (ಸೀಟು) ಅನುಮತಿ ನೀಡಿರುವುದರಿಂದ ರಾಜ್ಯಕ್ಕೆ ಹೆಚ್ಚುವರಿಯಾಗಿ 100 ವೈದ್ಯಕೀಯ ಸೀಟುಗಳು ದೊರೆಯಲಿವೆ.

ಈ ಕುರಿತು ಸಂತಸ ವ್ಯಕ್ತಪಡಿಸಿದರು ವಿವಿ ಕುಲಾಧಿಪತಿ ಡಾ. ಎಂ.ಆರ್. ದೊರೆಸ್ವಾಮಿ, ಈ ಅನುಮತಿಯು ಪಿಇಎಸ್ ವಿಶ್ವವಿದ್ಯಾಲಯವು ಹೆಮ್ಮೆಪಡುವ ಕ್ಷಣವಾಗಿದೆ. ಕಳೆದ ಮೂರು ವರ್ಷಗಳಿಂದ ವೈದ್ಯಕೀಯ ಕಾಲೇಜು ಮತ್ತು ಬೋಧನಾ ಆಸ್ಪತ್ರೆಯ ಮೂಲಸೌಕರ್ಯ ಕಲ್ಪಿಸಲು ದಣಿವರಿಯದೆ ಶ್ರಮವಹಿಸಿ ಕೆಲಸ ಮಾಡಿದ್ದಕ್ಕೆ ಸಾರ್ಥಕತೆ ದೊರೆತಿದೆ ಎಂದು ತಿಳಿಸಿದ್ದಾರೆ.

ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಮತ್ತು ಹೆಚ್ಚು ಆರಾಮದಾಯಕ ಕಲಿಕಾ ವಾತಾವರಣವನ್ನು ಕಲ್ಪಿಸಲಾಗಿದೆ. ಹಾಗೆಯೇ ನಮ್ಮ ತಂಡವು ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು, ಶ್ರೇಷ್ಠತೆಯ ಕ್ಲಿನಿಕಲ್ ಪ್ರಾಕ್ಟೀಸ್, ಸಂಶೋಧನೆ ಮತ್ತು ಶೈಕ್ಷಣಿಕ ವಿಷಯಗಳಿಗೆ ಸಂಬಂಧಿಸಿದಂತೆ ಮತ್ತು ರಾಜ್ಯದ ವೈದ್ಯಕೀಯ ಶಿಕ್ಷಣದಲ್ಲಿ ಸಂಸ್ಥೆಯು ಮಹತ್ವದ ಪಾತ್ರ ವಹಿಸಲಿದೆ ಎಂಬ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net