ಚೆಕ್‌ಪೋಸ್ಟ್‌ಗೆ ಬಂದವರು ಕ್ವಾರಂಟೈನ್ ಕೇಂದ್ರಕ್ಕೆ

IMG20200520064415
Published on


ವಿಜಯವಾಣಿ ಸುದ್ದಿಜಾಲ ಬೈಲಕುಪ್ಪೆ
ದೆಹಲಿಯ ನಿಜಾಮುದ್ದೀನ್‌ಗೆ ತೆರಳಿ ಬಂದಿರುವ 18 ಜನರನ್ನು ಚೆಕ್‌ಪೋಸ್ಟ್ ನಲ್ಲಿ ತಪಾಸಣೆಗೆ ಒಳಪಡಿಸಿ ಕ್ವಾರಂಟೈನ್ ನಲ್ಲಿ ಇರಿಸಲಾಗಿದೆ.
ಪಿರಿಯಾಪಟ್ಟಣ 6, ತಿರುಮಲಾಪುರದ 4, ಬೈಲಕುಪ್ಪೆಯ 2, ದೊಡ್ಡಹೊಸರಿನ 2, ಕೊಡಗಿನ 4 ಜನರು ಕೆಲ ದಿನಗಳ ಹಿಂದಷ್ಟೆ ದೆಹಲಿಗೆ ತೆರಳಿದ್ದರು. ಕರೊನಾ ಹಿನ್ನೆಲೆ ಇವರನ್ನು ಅಲ್ಲಿ ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು.
ಬಳಿಕ ತವರಿಗೆ ಕಳುಹಿಸಿಕೊಡುವ ವ್ಯವಸ್ಥೆ ಕಲ್ಪಿಸಿದ ಹಿನ್ನೆಲೆಯಲ್ಲಿ ಬುಧವಾರ ಖಾಸಗಿ ಬಸ್ ಮೂಲಕ ಬೈಲಕುಪ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕೊಪ್ಪ ಗ್ರಾಮದ ಚೆಕ್‌ಪೋಸ್ಟ್‌ಗೆ ಬಂದಿದ್ದಾರೆ. ವಿಚಾರಣೆ ನಡೆಸಿ ಕೊಡಗು ಹಾಗೂ ಮೈಸೂರಿನ ಕ್ವಾರಂಟೈನ್ ಕೇಂದ್ರಕ್ಕೆ ಬಿಡಲಾಗಿದೆ ಎಂದು ಬೈಲಕುಪ್ಪೆ ಪೊಲೀಸ್ ಠಾಣಾಧಿಕಾರಿ ಸವಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net