

ಬೆಂಗಳೂರು: ನಟಿ ನಿವೇದಿತಾ ಸೋಶಿಯಲ್ ಮೀಡಿಯಾದಲ್ಲಿ ತನ್ನದೇ ಆಗಿರುವ ಫಾಲೋವರ್ಸ್ ಹೊಂದಿದ್ದಾರೆ. ನಿವೇದಿತಾ ಗೌಡ ಹೆಚ್ಚಾಗಿ ಷಾರ್ಟ್ಸ್ ಧರಿಸಿ ರೀಲ್ಸ್ ಮಾಡುತ್ತಾರೆ. ಹೀಗೆ ಹಾಟ್ ಆಗಿ ಕಾಣಿಸಿಕೊಂಡಿರುವ ವಿಡಿಯೋವೊಂದು ವೈರಲ್ ಆಗಿದೆ.
ಅಷ್ಟಕ್ಕೂ, ಬಾರ್ಬಿಡಾಲ್ ಎಂದೇ ಫೇಮಸ್ ಆಗಿರೋ ನಿವೇದಿತಾ ಗೌಡ ಇತ್ತೀಚಿಗೆ ರೀಲ್ಸ್ ಮಾಡುವುದು ಹೆಚ್ಚುತ್ತಲೇ ಇದೆ. ದಿನಕ್ಕೊಂದರಂತೆ ಡ್ರೆಸ್ ಮಾಡಿಕೊಂಡು ರೀಲ್ಸ್ ಮಾಡುತ್ತಾರೆ. ಇವರ ಸೌಂದರ್ಯಕ್ಕಾಗಿಯೇ ಫ್ಯಾನ್ಸ್ ಸಂಖ್ಯೆ ಸಕತ್ ಹೆಚ್ಚಿದೆ.
Don't Go Insane ಎನ್ನುವ ಇಂಗ್ಲಿಷ್ ಹಾಡಿಗೆ ರೀಲ್ಸ್ ಮಾಡಿದ್ದಾರೆ. ಕೆಂಪು ಸೈಡ್ ಸ್ಲಿಟ್‌ನಲ್ಲಿ ನಟಿ ಎಂದಿನಂತೆ ಹಾಟ್ ಆಗಿ ಕಾಣಿಸುತ್ತಿದ್ದಾರೆ. ಸೊಂಟ ಬಳಕಿಸುತ್ತಾ ರೀಲ್ಸ್ ಮಾಡುತ್ತಿದ್ದಾರೆ. ಇದೀಗ ನಿವೇದಿತಾ ರೀಲ್ಸ್ಗೆ ನೆಟ್ಟಿಗರು ಗರಂ ಆಗಿದ್ದಾರೆ. ಟ್ರೋಲ್ ಮೂಲಕವೇ ನಟಿ ಇನ್ನಷ್ಟು ಖ್ಯಾತಿ ಪಡೆಯುತ್ತಿದ್ದಾರೆ.
ಚಂದನ್ ಶೆಟ್ಟಿ ಎಲ್ಲಿದ್ದೀಯಪ್ಪ? ನಿನ್ನ ಹೆಂಡ್ತಿ ಅವತಾರ ನೋಡೋಕಾಗ್ತಿಲ್ಲ, ಕಾಮಪ್ರಚೋದಕವಾಗಿದೆ.., ನೀವು ಟಾಲಿವುಡ್ನಲ್ಲಿ ಇರಬೇಕಿತ್ತು, ಡ್ರೆಸ್ ಯಾಕೆ ಹೀಗೆ ಇದೆ ಎಂದು ವಿಧಿವಿಧವಾಗಿ ಕಾಮೆಂಟ್ ಮಾಡುತ್ತಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಸಕತ್ ಆ್ಯಕ್ಟೀವ್ ಇರುವ ನಿವೇದಿತಾ ಸಿಂಗಲ್ ಆಗಿ, ಕೆಲವೊಮ್ಮೆ ಪತಿ ಚಂದನ್ ಶೆಟ್ಟಿ ಜೊತೆ ಈಕೆ ಇನ್ಸ್ಟಾಗ್ರಾಮ್ನಲ್ಲಿ ರೀಲ್ಸ್ ಹಾಕುತ್ತಿರುತ್ತಾರೆ. ಇನ್ಸ್ಟಾಗ್ರಾಮ್ನಲ್ಲಿ ವಾರಕ್ಕೆ ಏನಿಲ್ಲವೆಂದರೂ ನಾಲ್ಕೈದು ವಿಡಿಯೋ ಅಪ್ಲೋಡ್ ಮಾಡುತ್ತಾರೆ. ಇವರು ಹಾಕುವ ಎಲ್ಲಾ ವಿಡಿಯೋಗಳು ಸಕತ್ ಸುದ್ದಿ ಮಾಡುತ್ತೆ. ಜೊತೆ ಅಷ್ಟೇ ಟ್ರೋಲ್ಗಳೂ ಬರುತ್ತವೆ. ಕಮೆಂಟ್ಗಳು ಏನೇ ಇದ್ದರೂ ನಟಿ ಮಾತ್ರ ಸೋಷಿಯಲ್ ಮೀಡಿಯಾದಲ್ಲಿ ಸಕತ್ ಆ್ಯಕ್ಟೀವ್ ಆಗಿದ್ದಾರೆ.