ಮೇಷ: ಕೈಗೊಂಡ ಕೆಲಸಗಳನ್ನು ಕಾರ್ಯರೂಪಕ್ಕೆ ತರುವ ಪ್ರಯತ್ನ ಫಲ ಕೊಡಲಿದೆ. ತಾಂತ್ರಿಕ ಕ್ಷೇತ್ರದ ವಿದ್ಯಾರ್ಥಿನಿಯರಿಗೆ ಯಶಸ್ಸು. ಶುಭಸಂಖ್ಯೆ: 8.ವೃಷಭ: ನಿಮ್ಮ ಮೇಲಿನ ಆಪಾದನೆಗಳಿಂದ ಹೊರಬರುವಿರಿ. ಮೇಲಧಿಕಾರಿಗಳಿಂದ ಪ್ರಶಂಸೆ. ನಂಬಿಕಸ್ಥರಿಂದ ಮೋಸ ಹೋಗುವ ಸಾಧ್ಯತೆ. ಶುಭಸಂಖ್ಯೆ: 6.ಮಿಥುನ: ನಿಮ್ಮ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಪರಿಣಿತರ ಸಲಹೆ ಪಡೆಯಿರಿ. ತೆಂಗಿನಕಾಯಿ ಮಾರಾಟದಲ್ಲಿ ಲಾಭ. ಶುಭಸಂಖ್ಯೆ: 8.ಕಟಕ: ಬಹು ವರ್ಷಗಳ ನಂತರದಲ್ಲಿ ಮಗಳಿಗೆ ವಿವಾಹಸಿದ್ಧಿ. ಹೊಸ ವ್ಯಾಪಾರದಲ್ಲಿ ಸ್ಪರ್ಧೆ ಏರ್ಪಡಲಿದೆ. ವಿದೇಶದಿಂದ ಸಂಶೋಧಕರಿಗೆ ಆಹ್ವಾನ. ಶುಭಸಂಖ್ಯೆ: 9.ಸಿಂಹ: ಹಿತಶತ್ರುಗಳಿಂದಾಗಿ ಪದವಿಗಾಗಿ ಹೋರಾಟ. ಕಾನೂನು ವಿದ್ಯಾರ್ಥಿಗಳು ನಿಶ್ಚಿತ ಗುರಿ ತಲುಪುವಿರಿ. ಹಣ ಹೂಡಿಕೆಗೆ ಸೂಕ್ತ ಸಮಯ. ಶುಭಸಂಖ್ಯೆ: 1.ಕನ್ಯಾ: ಜಟಿಲ ಸಮಸ್ಯೆಗಳನ್ನು ತಂತ್ರಜ್ಞಾನದ ಸಹಾಯದಿಂದ ಬಗೆಹರಿಸಿಕೊಳ್ಳುವಿರಿ. ವ್ಯಾಪಾರಸ್ಥರಿಗೆ ಲಾಭ. ವೈವಾಹಿಕ ಜೀವನದಲ್ಲಿ ಸುಖ ನೆಮ್ಮದಿ. ಶುಭಸಂಖ್ಯೆ: 3.ತುಲಾ: ಮಹಿಳಾ ಉದ್ಯಮಿಗಳಿಗೆ ಶುಭದಿನ. ಸಂಬಂಧಪಡದ ವಿಷಯದಲ್ಲಿ ಮೂಗು ತೂರಿಸಬೇಡಿ. ಅಪರಿಚಿತರಿಂದ ಆರ್ಥಿಕ ಸಹಾಯ. ಶುಭಸಂಖ್ಯೆ: 5.ವೃಶ್ಚಿಕ: ಸಾಮಾಜಿಕ ಹೋರಾಟಗಾರರಿಗೆ ಗೌರವ ಸನ್ಮಾನ. ಅಲಂಕಾರಿಕ ವಸ್ತುಗಳ ಮಾರಾಟದಲ್ಲಿ ಲಾಭ. ಮೆಡಿಕಲ್ ಶಾಪ್ ಮಾಲೀಕರಿಗೆ ಅಭಿವೃದ್ಧಿ. ಶುಭಸಂಖ್ಯೆ: 6.ಧನಸ್ಸು: ಅರಣ್ಯ ಇಲಾಖೆಯ ನೌಕರರಿಗೆ ವರ್ಗಾವಣೆ. ಆಸ್ತಿ ವಿವಾದ ಬಗೆಹರಿಯಲಿದೆ. ಬಂಧುವರ್ಗದವರಿಂದ ಆರ್ಥಿಕ ಸಹಾಯ. ಶುಭಸಂಖ್ಯೆ: 2.ಮಕರ: ಗುತ್ತಿಗೆ ಕೆಲಸ ಮಾಡುವವರಿಗೆ ಆರ್ಥಿಕ ಸದೃಢತೆ ಸಿಗಲಿದೆ. ದಿನದ ಅಂತ್ಯದಲ್ಲಿ ಶುಭ ಸಮಾಚಾರ ಕೇಳುವಿರಿ. ಶುಭಸಂಖ್ಯೆ: 5.ಕುಂಭ: ದಾಂಪತ್ಯ ಜೀವನದಲ್ಲಿದ್ದ ಅಪನಂಬಿಕೆ ದೂರವಾಗಲಿದೆ. ನೂತನ ನಿವೇಶನ ಖರೀದಿ. ಹಣ ಹೂಡಿಕೆಗೆ ಸೂಕ್ತ ಸಮಯ. ಶುಭಸಂಖ್ಯೆ: 4.ಮೀನ: ಆಭರಣಗಳ ಖರೀದಿಯಲ್ಲಿ ಮೋಸ ಹೋಗುವ ಸಾಧ್ಯತೆ. ಸೌಂದರ್ಯವರ್ಧಕಗಳ ಮಾರಾಟಗಾರರಿಗೆ ಲಾಭ. ಶುಭಸಂಖ್ಯೆ: 5