ನಿತ್ಯ ಭವಿಷ್ಯ | ಈ ರಾಶಿಯವರಿಗಿಂದು ಹಣ ಸಂಪಾದನೆಗೆ ಹೊಸ ದಾರಿ ಗೋಚರ

Nitya Bhavisya Vijayavani
Published on

ಮೇಷ: ಹಿತೈಷಿಗಳಿಂದ ಸಲಹೆ. ಆರ್ಥಿಕ ಪರಿಸ್ಥಿತಿ ಸುಧಾರಣೆ. ಕಚೇರಿಯಲ್ಲಿ ತಾಳ್ಮೆಯಿಂದ ವರ್ತಿಸಿ. ಮಹಿಳೆಯರಿಗೆ ಶ್ರಮಕ್ಕೆ ತಕ್ಕ ಫಲ. ಶುಭಸಂಖ್ಯೆ: 9

ವೃಷಭ: ದೃಢ ನಿರ್ಧಾರಕ್ಕೆ ಹಿರಿಯರ ಸಲಹೆ ಪಡೆಯುವುದು ಸೂಕ್ತ. ವ್ಯಾಪಾರದಲ್ಲಿ ಲಾಭ. ಕೃಷಿಯಲ್ಲಿ ಹೊಸ ಪ್ರಯೋಗ ಸಫಲ. ಶುಭಸಂಖ್ಯೆ:5

ಮಿಥುನ: ನೂತನ ಕೆಲಸ ಕಾರ್ಯಗಳಲ್ಲಿ ಯಶಸ್ಸು. ಕಚೇರಿಯ ಸ್ಥಳ ಬದಲಾವಣೆಯಾಗಬಹುದು. ಆಪ್ತರಿಂದ ಆರ್ಥಿಕ ಸಹಾಯ ಸಿಗಲಿದೆ. ಶುಭಸಂಖ್ಯೆ:8

ಕಟಕ: ಸಂಪಾದನೆ ಮಾಡಿರುವ ಹಣದ ಹೂಡಿಕೆಗೆ ಸೂಕ್ತ ಸಮಯ. ವಾಹನ ಖರೀದಿಗೂ ಸುಸಮಯ. ವಿದ್ಯಾರ್ಥಿಗಳಿಗೆ ಮುನ್ನಡೆ. ಶುಭಸಂಖ್ಯೆ:4

ಸಿಂಹ: ಹಣ ಸಂಪಾದನೆಗೆ ಹೊಸ ದಾರಿ ಗೋಚರ. ಬೇಡದ ವಿಷಯಗಳಲ್ಲಿ ಆಸಕ್ತಿ ತಾಳುವಿರಿ. ದುಡುಕುತನದಿಂದ ಅವಕಾಶ ಕೈ ತಪ್ಪಲಿದೆ. ಶುಭಸಂಖ್ಯೆ: 6

ಕನ್ಯಾ: ಕಾಫಿ ಬೇಸಾಯಗಾರರಿಗೆ ಅನಿರೀಕ್ಷಿತ ದ್ರವ್ಯಲಾಭವಾಗಲಿದೆ. ನಿವೇಶನ ನೋಂದಣಿಯ ಕಾರ್ಯಾನುಕೂಲ. ಸಜ್ಜನ ವಿರೋಧ. ಶುಭಸಂಖ್ಯೆ: 8

ತುಲಾ: ಪ್ರಭಾವಿ ವ್ಯಕ್ತಿಗಳ ಸಂಪರ್ಕ ಸಾಧಿಸುವಿರಿ. ನಿಮ್ಮ ಪ್ರತಿಭೆಯಿಂದ ಅನ್ಯರ ಮನಸ್ಸನ್ನು ಗೆಲ್ಲುವಿರಿ. ನಿವೇಶನ ಕೊಳ್ಳುವ ಯೋಗ. ಶುಭಸಂಖ್ಯೆ:1

ವೃಶ್ಚಿಕ: ಕೆಲಸದಲ್ಲಿ ಏಕಾಗ್ರತೆ ಸಿದ್ಧಿಯಾಗಲಿದೆ. ಸ್ತ್ರೀಯರಿಗೆ ವಸ್ತ್ರಾಭರಣ ಪ್ರಾಪ್ತಿಯಾಗುವುದು. ಕ್ರಯ- ವಿಕ್ರಯಗಳಲ್ಲಿ ಲಾಭ ಬರುವುದು. ಶುಭಸಂಖ್ಯೆ:3

ಧನಸ್ಸು: ಬರಹಗಾರರಿಂದ ಯತ್ನ ಗುರಿ ಸಾಧನೆ. ಕೆಲಸಗಾರರ ಮೇಲೆ ಸಹಾನುಭೂತಿ ತೋರುವಿರಿ. ವಿದೇಶಿ ಉದ್ಯೋಗ ಲಭ್ಯ. ಶುಭಸಂಖ್ಯೆ:7

ಮಕರ: ದುಶ್ಚಟದಿಂದ ಹೊರ ಬರುವಿರಿ. ಕಾರ್ಯಗಳಲ್ಲಿ ಜಯ. ಪ್ರಭಾವಿ ಧಾರ್ವಿುಕ ಗುರುವಿನ ಭೇಟಿ. ಜೇನು,ರೇಷ್ಮೆ ಕೃಷಿಕರಿಗೆ ಲಾಭ. ಶುಭಸಂಖ್ಯೆ:1

ಕುಂಭ: ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಸ್ಪರ್ಧೆ. ತಾಂತ್ರಿಕ ಕ್ಷೇತ್ರದವರಿಗೆ ಕಾರ್ಯ ಬದಲಾವಣೆ ಸಾಧ್ಯತೆ. ಸ್ನೇಹಿತರಿಂದ ಹಿತನುಡಿ. ಶುಭಸಂಖ್ಯೆ:4

ಮೀನ: ರಾಜಕೀಯದವರಿಗೆ ಜನಪ್ರಿಯತೆ ಹೆಚ್ಚಲಿದೆ. ನಾಟ್ಯ ಕಲಾವಿದರಿಗೆ ವಿದೇಶ ಪ್ರಯಾಣ ಯೋಗ. ಸಂಜೆ ಆತ್ಮೀಯರ ಭೇಟಿ. ಶುಭಸಂಖ್ಯೆ:3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net