Prashant Kishor | ನಿತೀಶ್ ಪ್ರಾಮಾಣಿಕರು... ಇವರೆಲ್ಲಾ ಭಷ್ಟರು. ಮುಂದೆ ಬಿಹಾರದ ಚುಕ್ಕಾಣಿ ನಮಗೆ ಎಂದ ಪ್ರಶಾಂತ್​ ಕಿಶೋರ್!

Prashant Kishor
Published on

Prashant Kishor: ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಪ್ರಾಮಾಣಿಕರಾಗಿರಬಹುದು, ಆದರೆ, ಅವರ ಸಂಪುಟದ ಸಚಿವರು ರಾಜ್ಯವನ್ನು ಲೂಟಿ ಮಾಡುತ್ತಿದ್ದಾರೆ ಎಂದು ಜನ್ ಸುರಾಜ್ ಪಕ್ಷದ ಸಂಸ್ಥಾಪಕ ಪ್ರಶಾಂತ್ ಕಿಶೋರ್ ಹೇಳಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಪ್ರಶಾಂತ್, ಮುಖ್ಯಂತ್ರಿಗಳು ಪ್ರಾಮಾಣಿಕರಿರಬಹುದು, ಆದರೆ ಅವರು ಸಂಪುಟ ಸದಸ್ಯರು, ಅಧಿಕಾರಿಗಳು ರಾಜ್ಯದ ಜನರಿಂದ ಕೋಟಿಗಟ್ಟಲೆ ಲೂಟಿ ಮಾಡುತ್ತಿದ್ದಾರೆ ಎಂದರು.

ಯಾವುದೇ ಒಬ್ಬ ವ್ಯಕ್ತಿಯನ್ನು ಗುರಿಯಾಗಿಸಿ, ಕೇವಲ ಆರೋಪಗಳನ್ನು ಮಾಡುವಂತಹ ರಾಜಕೀಯದ ಬಗ್ಗೆ ನನಗೆ ನಂಬಿಕೆ ಇಲ್ಲ, ನಾನು ಕಳೆದ ಮೂರು ವರ್ಷಗಳಿಂದ ರಾಜ್ಯದಲ್ಲಿ ಸುತ್ತಾಡುತ್ತಿದ್ದೇನೆ, ಹೋದಲೆಲ್ಲಾ ಜನರು ಈ ಮಟ್ಟದ ಭ್ರಷ್ಟಾಚಾರವನ್ನು ಹಿಂದೆಂದೂ ನೋಡಿರಲಿಲ್ಲ ಎಂದು ಹೇಳುತ್ತಿದ್ದಾರೆ, ಈ ಸರ್ಕಾರ ಭ್ರಷ್ಟಾಚಾರ ಮೇಲೆ ನಡೆಯುತ್ತಿದ್ದು, ನಿತೀಶ್ ಕುಮಾರ್ ಮಾತ್ರ ಪ್ರಾಮಾಣಿಕರಾದರೆ ಸಾಲದು ಎಂದರು.

ಡಿಲೀಟ್​ ಬಂದಿದ್ದೇಗೆ..?

ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಮೇಲೆ ವಾಗ್ದಾಳಿ ನಡೆಸಿದ ಪ್ರಶಾಂತ್​​, ಅವರ ಮೇಲೆ ಕೊಲೆ ಆರೋಪವಿದ್ದು, ಜೈಲು ಶಿಕ್ಷೆಯನ್ನೂ ಅನುಭವಿಸಿದ್ದಾರೆ, ತಮ್ಮ ಅಫಿಡವಿಟ್‌ನಲ್ಲಿ ಡಿ.ಲಿಟ್ ಪದವಿಯನ್ನು ಹೊಂದಿರುವುದಾಗಿ ಘೋಷಿಸಿಕೊಂಡಿರುವ ಚೌಧರಿ, ಯಾವ ವರ್ಷ 10 ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ? ಎಂದು ಪ್ರಶ್ನಿಸಿದರು. ಈ ವಿಷಯಗಳು ಸಾರ್ವಜನಿಕರಿಗೆ ಸಂಬಂಧಿಸಿದ್ದಾಗಿದ್ದು, ಇದರ ಬಗ್ಗೆ ಅವರು ತಿಳಿದುಕೊಳ್ಳಬೇಕು, ಉತ್ತರಿಸುವುದು ಸಂಬಂಧಿಸಿದವರ ಜವಾಬ್ದಾರಿ, ಇದರಲ್ಲಿ ರಾಜಕೀಯ ಲಾಭ ಪಡೆಯುವ ಉದ್ದೇಶ ಇಲ್ಲ ಎಂದು ತಿಳಿಸಿದರು.

ಸಂಬಂಧಿಕರಿಗೂ ಆಸ್ತಿ..?

ಜೆಡಿಯು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯ ಸಚಿವ ಅಶೋಕ್ ಚೌಧರಿ, ಕಳೆದ ಮೂರು ವರ್ಷಗಳಿಂದ ಭ್ರಷ್ಟಾಚಾರದಲ್ಲಿ ತೊಡಗಿದ್ದು, ಕಾನೂನುಬಾಹಿರ ವಿಧಾನಗಳ ಮೂಲಕ 200 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿ ಖರೀದಿಸಿದ್ದಾರೆ, ಅವರನ್ನು ಪ್ರಶ್ನಿಸುವವರೇ ಯಾರೂ ಇಲ್ಲ, ಲೋಕಸಭಾ ಸಂಸದೆಯಾಗಿರುವ ತಮ್ಮ ಮಗಳು ಮತ್ತು ಅವರ ಪತ್ನಿಯ ಹೆಸರಿನಲ್ಲಿ ಭೂಮಿಯನ್ನು ಖರೀದಿಸಿದ್ದಾರೆ ಎಂದು ಕಿಶೋರ್, ಚೌಧರಿ ತಮ್ಮ ಪತ್ನಿಯ ಖಾತೆಗಳ ಮೂಲಕ ಪಾಟ್ನಾ ಮೂಲದ ಅವರ ಮಗಳ ಅತ್ತೆ ಮಾವಂದಿರಿಗೆ ಸಂಬಂಧಿಸಿದ ಟ್ರಸ್ಟ್‌ಗೆ ಕೂಡ ಹಣ ವರ್ಗಾಯಿಸಿದ್ದಾರೆ ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ, ಅವರ ಮಗಳ ನಿಶ್ಚಿತಾರ್ಥದ ಬಳಿಕ ಟ್ರಸ್ಟ್‌ಗೆ ಹಣವನ್ನು ರವಾನಿಸುವ ಪ್ರಕ್ರಿಯೆ ಪ್ರಾರಂಭವಾಗಿದೆ ಎಂದು ಆರೋಪಿಸಿದರು.

ಧೈರ್ಯವಿದ್ದರೆ ಬಂಧಿಸಿ..

ಪಶ್ಚಿಮ ಚಂಪಾರಣ್‌ನ ಬಿಜೆಪಿ ಸಂಸದ ಸಂಜಯ್ ಜೈಸ್ವಾಲ್ ವಿರುದ್ಧವೂ ಕಿಶೋರ್ ವಾಗ್ದಾಳಿ ನಡೆಸಿದ್ದು, ನನ್ನನ್ನು ಜೈಲಿಗೆ ಕಳುಹಿಸುವುದೇ ಅವರ ಅಂತಿಮ ಗುರಿ ಎಂದು ಅವರು ಹೇಳಿದ್ದಾರೆ, ದೆಹಲಿ ಮತ್ತು ಬಿಹಾರದಲ್ಲಿ ಅವರದ್ದೆ ಪಕ್ಷದ ಸರ್ಕಾರ ಇದೆ, ನಿಮಗೆ ಧೈರ್ಯವಿದ್ದರೆ ನನ್ನನ್ನು ಬಂಧಿಸಿ ಎಂದರು

ನಾವೇ ಮೊದಲು..

ನಮ್ಮ ಪಕ್ಷವು ಎಲ್ಲಾ 233 ಅಭ್ಯರ್ಥಿಗಳ ಪಟ್ಟಿಯನ್ನು ಉಳಿದ ಪಕ್ಷಗಳಿಗಿಂತ ಮೊದಲು ಬಿಡುಗಡೆ ಮಾಡುತ್ತೇವೆ ಎಂದ ಪ್ರಶಾಂತ, ಅತಂತ್ರ ವಿಧಾನಸಭೆ ಉಂಟಾದರೆ ಯಾವ ಪಕ್ಷವನ್ನು ಬೆಂಬಲಿಸುತ್ತೀರಿ ಎಂಬ ಪ್ರಶ್ನೆಗೆ, ಆ ರೀತಿ ಆಗುವುದಿಲ್ಲ, ಬಿಹಾರದಲ್ಲಿ ಜನ ಸುರಾಜ್ ಪಕ್ಷ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಉತ್ತರಿಸಿದರು.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net