

ನವದೆಹಲಿ: ಇಲ್ಲಿನ ನೀತಿ ಆಯೋಗ (ನ್ಯಾಷನಲ್ ಇನ್ಸ್ಟಿಟ್ಯೂಟಷನ್ ಫಾರ್ ಟ್ರಾನ್ಸ್ ಫಾರ್ಮಿಂಗ್ ಇಂಡಿಯಾ) ದ ಕಟ್ಟಡವನ್ನು ಸಂಪೂರ್ಣ ಸೀಲ್ ಮಾಡಲಾಗಿದೆ. ಇದಕ್ಕೆ ಕಾರಣ ಹಿರಿಯ ಅಧಿಕಾರಿಯೋರ್ವರಲ್ಲಿ ಕಾಣಿಸಿಕೊಂಡ ಕರೊನಾ ವೈರಸ್.
ನಿರ್ದೇಶಕರ ಹುದ್ದೆಗೆ ಸಮಾನ ಆಗಿರುವ ಅಧಿಕಾರಿಯೋರ್ವರಲ್ಲಿ ಕರೊನಾ ವೈರಸ್ ಕಾಣಿಸಿಕೊಂಡಿದ್ದರಿಂದ ಅಲ್ಲಿ ಆತಂಕ ಪ್ರಾರಂಭವಾಗಿದೆ. ಇಡೀ ಕಟ್ಟಡ ಮತ್ತು ಅದರ ಆವರಣವನ್ನು ಸೋಂಕು ನಿವಾರಕದಿಂದ ಶುದ್ಧ ಮಾಡಬೇಕಾಗಿರುವ ಕಾರಣ 48 ಗಂಟೆಗಳ ಕಾಲ ಅಲ್ಲಿ ಸಂಪೂರ್ಣ ಬಂದ್ ಮಾಡಲಾಗಿದೆ ಎಂದು ನೀತಿ ಆಯೋಗದ ಉಪ ಕಾರ್ಯದರ್ಶಿ ಅಜಿತ್ ಕುಮಾರ್ ತಿಳಿಸಿದ್ದಾರೆ. (ಏಜೆನ್ಸೀಸ್),