

ಬೆಂಗಳೂರು: ರಿಲಯನ್ಸ್ ಇಂಡಸ್ಟ್ರೀಸ್ ಮಾಲೀಕರಾದ ನೀತಾ ಅಂಬಾನಿ ಯಾರಿಗೆ ಗೊತ್ತಿಲ್ಲ ಹೇಳಿ? ನೀತಾ ತಮ್ಮ ದುಬಾರಿ ಬಟ್ಟೆಗಳು, ಅಮೂಲ್ಯವಾದ ಆಭರಣಗಳು ಮತ್ತು ಅತ್ಯುತ್ತಮ ಸ್ಟೈಲ್ ನಿಂದಾಗಿ ಸುದ್ದಿಯಲ್ಲಿರುತ್ತಾರೆ. ಆದರೆ ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದ ನೀತಾ ಅವರು ಅಂಬಾನಿ ಕುಟುಂಬದ ಸೊಸೆಯಾದದ್ದು ಹೇಗೆ ಗೊತ್ತಾ? ನೀತಾ ಅವರೇ ಹಳೆಯ ಸಂದರ್ಶನವೊಂದರಲ್ಲಿ ಈ ಕಥೆಯನ್ನು ಹೇಳಿದ್ದರು.
ಕರೆ ಮಾಡಿದ್ದರು ಧೀರೂಭಾಯಿ ಅಂಬಾನಿ
ನೀತಾ ಅಂಬಾನಿ ಮತ್ತು ಮುಖೇಶ್ ಅಂಬಾನಿ ಟಿವಿ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ತಮ್ಮ ಮೊದಲ ಭೇಟಿಯ ಕಥೆಯನ್ನು ಹಂಚಿಕೊಂಡಿದ್ದಾರೆ. ಈ ಸಮಯದಲ್ಲಿ, ಧೀರೂಭಾಯಿ ಅಂಬಾನಿಯಿಂದ ಕರೆ ಬಂದಾಗ ತುಂಬಾ ಕೋಪಗೊಂಡಿದ್ದೆ ಎಂದು ನೀತಾ ಹೇಳಿದರು. ನೀತಾಗೆ ಯಾರೋ ತನ್ನೊಂದಿಗೆ ಜೋಕ್ ಮಾಡುತ್ತಿದ್ದಾರೆ ಎಂದು ಅನಿಸಿತು. ಹೀಗಿರುವಾಗ ಕೋಪಗೊಂಡ ನೀತಾ ಫೋನ್ ಡಿಸ್ಕನೆಕ್ಟ್ ಮಾಡಿದ್ದಾರೆ. ಮತ್ತೆ ಕರೆ ಮಾಡಿದಾಗ, ನೀತಾ ಧೀರೂಭಾಯಿ ಅಂಬಾನಿಗೆ ಬಯ್ದಿದ್ದಾರೆ.
ಫೋನ್ ಡಿಸ್ಕನೆಕ್ಟ್ ಮಾಡಿದೆ..
ಧೀರೂಭಾಯಿ ಅಂಬಾನಿಯವರ ಮೊದಲ ಫೋನ್ ಕರೆ ಬಗ್ಗೆ ಉಲ್ಲೇಖಿಸಿದ ನೀತಾ ಅಂಬಾನಿ "ನನಗೆ ಪರೀಕ್ಷೆಯಿತ್ತು. ಅಧ್ಯಯನದಲ್ಲಿ ನಿರತಳಾಗಿದ್ದೆ. ಅಷ್ಟರಲ್ಲಿ ಫೋನ್ ರಿಂಗಣಿಸಿತು. ಫೋನ್ ಎತ್ತಿದಾಗ ನಾನು ಧೀರೂಭಾಯಿ ಅಂಬಾನಿ ಎಂದು ಅಲ್ಲಿಂದ ಧ್ವನಿ ಬಂತು. ಯಾರೋ ತಮಾಷೆ ಮಾಡುತ್ತಿದ್ದಾರೆ ಎಂದುಕೊಂಡೆ. ಪ್ರಾಂಕ್ ಕಾಲ್ ಎಂದುಕೊಂಡು ಕಾಲ್ ಡಿಸ್ಕನೆಕ್ಟ್ ಮಾಡಿ ಮತ್ತೆ ಓದಲು ಕುಳಿತೆ. ಅಷ್ಟರಲ್ಲಿ ಮತ್ತೆ ಕರೆ ಬಂತು. ನಾನು ಮತ್ತೆ ಫೋನ್ ತೆಗೆದುಕೊಂಡೆ ಮತ್ತು ನಾನು ಧೀರೂಭಾಯಿ ಅಂಬಾನಿ ಕರೆ ಮಾಡುತ್ತಿದ್ದೇನೆ ಎಂದು ಅವರು ಪುನರುಚ್ಚರಿಸಿದರು. ನನಗೆ ತುಂಬಾ ಕೋಪ ಬಂತು, ಇದೆಲ್ಲ ನಿಲ್ಲಿಸಿ, ನನ್ನನ್ನು ಮರುಳು ಮಾಡುವುದನ್ನು ನಿಲ್ಲಿಸಿ ಎಂದು ಡಿಸ್ಕನೆಕ್ಟ್ ಮಾಡಲು ಹೇಳಿದೆ" ಎಂದರು
ಫೋನ್ ಎತ್ತಿದ ತಂದೆ
"ಮೂರನೇ ಬಾರಿಗೆ ನನ್ನ ಫೋನ್ ಮತ್ತೆ ರಿಂಗಣಿಸಿತು ಮತ್ತು ಈ ಬಾರಿ ನಾನು ಫೋನ್ ಸ್ವೀಕರಿಸುವುದಿಲ್ಲ ಎಂದು ಹೇಳಿದೆ. ಆಗ ನನ್ನ ತಂದೆ ಫೋನ್ ಎತ್ತಿದರು. ನಾನು ಅವರನ್ನು ಸೂಕ್ಷ್ಮವಾಗಿ ನೋಡುತ್ತಿದ್ದೆ. ಇದ್ದಕ್ಕಿದ್ದಂತೆ ಅವರ ಮುಖಭಾವ ಬದಲಾಯಿತು. ಅವರು ನನಗೆ ಹೇಳಿದರು, ನೀತಾ, ಇದು ನಿಜವಾಗಿಯೂ ಧೀರೂಭಾಯಿ ಅಂಬಾನಿ. ಅವರೊಂದಿಗೆ ಸ್ವಲ್ಪ ಪ್ರೀತಿಯಿಂದ ಮಾತನಾಡುತ್ತೀಯಾ?" ಎಂದರು. ಈ ಕಥೆ ಹೀಗೆ ಪ್ರಾರಂಭವಾಯಿತು.
ಷರತ್ತು ಹಾಕಿದ ನೀತಾ
ಅಂಬಾನಿ ಕುಟುಂಬದ ಸೊಸೆಯಾಗಲು ನೀತಾ ಅಂಬಾನಿ ಕೆಲವು ಷರತ್ತುಗಳನ್ನು ಹಾಕಿದ್ದರು. ವಿದ್ಯಾಭ್ಯಾಸ ಮುಗಿಸಿದ ನೀತಾ ಮದುವೆಯ ನಂತರ ಭರತನಾಟ್ಯ ಮತ್ತು ಕೆಲಸ ಮಾಡುವ ಆಸೆಯನ್ನು ವ್ಯಕ್ತಪಡಿಸಿದ್ದು, ಅದನ್ನು ಅಂಬಾನಿ ಮನೆಯವರು ಸುಲಭವಾಗಿ ಒಪ್ಪಿಕೊಂಡಿದ್ದಾರೆ. ಇದರ ನಂತರ, 1985 ರಲ್ಲಿ, ನೀತಾ ಅಂಬಾನಿ ಮುಖೇಶ್ ಅಂಬಾನಿಯನ್ನು ವಿವಾಹವಾದರು ಮತ್ತು ಅಂಬಾನಿ ಕುಟುಂಬದ ಹಿರಿಯ ಸೊಸೆಯಾದರು.