ವಂಶಿಕಾ ಹೆಸರಿನಲ್ಲಿ ವಂಚನೆ; ಜೈಲಿನಲ್ಲಿದ್ದರು ಡ್ಯಾಮೇಜ್​ ಕಂಟ್ರೋಲ್​ಗೆ ಮುಂದಾದ ನಿಶಾ ನರಸಪ್ಪ

Nisha Narasappa
Published on

ಬೆಂಗಳೂರು: ನಟ, ನಿರೂಪಕ ಮಾಸ್ಟರ್​ ಆನಂದ್​ ಪುತ್ರಿ ವಂಶಿಕಾ ಹೆಸರು ಬಳಸಿ ವಂಚನೆ ಎಸಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತಳ ಸ್ಥಾನದಲ್ಲಿರುವ ನಿಶಾ ನರಸಪ್ಪಗೆ ನ್ಯಾಯಾಲಯ 14ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

ಬಂಧಿತೆ ನಿಶಾ ನರಸಪ್ಪ ಎಸಗಿರುವ ವಂಚನೆಗಳ ದೊಡ್ಡ ಪುರಾಣವೇ ಇದ್ದು, ವಂಶಿಕಾ ಹೆಸರಲ್ಲದೆ ಗೋಲ್ಡನ್​ ಸ್ಟಾರ್​ ಗಣೇಶ್​ ಅವರ ಹೆಸರು ಬಳಸಿಯೂ ಸಹ ಹಲವರಿಗೆ ಮೋಸ ಮಾಡಿದ್ದಾರೆ ಎಂಬ ಅಂಶ ತನಿಖೆ ವೇಳೆ ಬೆಳಕಿಗೆ ಬಂದಿದೆ.

ಮತ್ತಷ್ಟು ದೂರು ದಾಖಲು

ಪೋಷಕರೊಬ್ಬರ ಜೊತೆ ಮಾತನಾಡುವ ವೇಳೆ ನಿಶಾ ತಾನು ಗೋಲ್ಡನ್​ ಸ್ಟಾರ್​ ಗಣೇಶ್​ ಅವರನ್ನು ಹಾಕಿಕೊಂಡು ಚಿತ್ರ ಒಂದನ್ನು ಮಾಡಲು ಸಜ್ಜಾಗುತ್ತಿದ್ದು, ಪ್ರದೀಪ್​ ಕರಣ್​ ಎಂಬುವವರು ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆಂದು ಹೇಳುತ್ತಿರುವ ಆಡಿಯೋ ವೈರಲ್​ ಆಗಿದೆ.

ಇತ್ತ ನ್ಯಾಯಾಂಗ ಬಂಧನದಲ್ಲಿದ್ದರು ಸಹ ಡ್ಯಾಮೇಜ್​ ಕಂಟ್ರೋಲ್​ಗೆ ಮುಂದಾಗಿರುವ ನಿಶಾ ನರಸಪ್ಪ ಸಾಮಾಜಿಕ ಜಾಲತಾಣದಲ್ಲಿ ತನಿಖೆ ಪ್ರಗತಿಯಲ್ಲಿದ್ದು, ಎಲ್ಲದ್ದಕ್ಕೂ ಉತ್ತರ ಕೊಡುತ್ತೇನೆ. ಹೊಸದಾಗಿ ಫೋಟೋ ಶೂಟ್​ಗೆ ರಿಜಿಸ್ಟ್ರೇಷನ್​ ಮಾಡಿಸುವವರು ದಯವಿಟ್ಟು ಎಲ್ಲರು ತಾಳ್ಮೆಯಿಂದ ಕಾಯಿರಿ ಎಂದು ಬರೆದುಕೊಂಡಿದ್ದಾರೆ.

ನಿಶಾ ನರಸಪ್ಪ ಸದಾಶಿವನಗರ ಹಾಗೂ ಯಲಹಂಕ ನ್ಯೂಟೌನ್​ನಲ್ಲಿ ಮೋಸ ಹೋದ ಪೋಷಕರು ಮತ್ತಷ್ಟು ವಂಚನೆ ಪ್ರಕರಣದ ದೂರು ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net