ನ.9ರಂದು ಶಿವಮೊಗ್ಗಕ್ಕೆ ನಿರ್ಮಲ ತುಂಗಭದ್ರಾ ಅಭಿಯಾನ ಪಾದಯಾತ್ರೆ

Tungabhadra Campaign
ನಿರ್ಮಲ ತುಂಗಭದ್ರಾ ಅಭಿಯಾನದ ಸಂಚಾಲಕ ಪ್ರೊ. ಬಿ.ಎಂ.ಕುಮಾರಸ್ವಾಮಿ ಮಾತನಾಡಿದರು. ಪ್ರಮುಖರಾದ ಡಾ. ಎಲ್.ಕೆ.ಶ್ರೀಪತಿ, ಗಿರೀಶ್ ಪಟೇಲ್ ಸುದ್ದಿಗೋಷ್ಠಿಯಲ್ಲಿದ್ದರು.
Published on

ಶಿವಮೊಗ್ಗ: ಮೊದಲ ಹಂತದ ನಿರ್ಮಲ ತುಂಗಭದ್ರಾ ಅಭಿಯಾನವು ನ.6ರಿಂದ 14ವರೆಗೆ ಶೃಂಗೇರಿಯಿಂದ ಹರಿಹರದವರೆಗೆ ನಡೆಯಲಿದ್ದು ಪಾದಯಾತ್ರೆಯು ನ.9ರಂದು ಶಿವಮೊಗ್ಗ ನಗರವನ್ನು ಪ್ರವೇಶಿಸಲಿದೆ ಎಂದು ಅಭಿಯಾನದ ಸಂಚಾಲಕ ಪ್ರೊ. ಬಿ.ಎಂ.ಕುಮಾರಸ್ವಾಮಿ ಹೇಳಿದರು.

6ರಂದು ಶೃಂಗೇರಿಯಲ್ಲಿ ಶೃಂಗೇರಿ ಮಠದ ಜಗದ್ಗುರು ಶ್ರೀ ಭಾರತೀ ತೀರ್ಥ ಸ್ವಾಮೀಜಿ ಚಾಲನೆ ನೀಡುವರು. 9ರ ಸಂಜೆ ನಗರಕ್ಕೆ ಆಗಮಿಸಲಿದ್ದು 10ರಂದು ಅಭಿಯಾನ ನಡೆಸಿ ಎರಡನೇ ಸಭೆ ನಡೆಸಲಾಗುವುದು. 11ರಂದು ಬೆಳಗ್ಗೆ 9ಕ್ಕೆ ಶಾಲಾ ಕಾಲೇಜಿಗಳಲ್ಲಿ ಸಭೆ ನಡೆಸಿ ಮಧ್ಯಾಹ್ನ ಗೋಂಧಿಚಟ್ನಳ್ಳಿಯಿಂದ ಹೊಳಲೂರುವರೆಗೆ ಪಾದಯಾತ್ರೆ ನಡೆಸಲಾಗುವುದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಅಭಿಯಾನದ ಪ್ರಮುಖರಾದ ಗಿರೀಶ್ ಪಟೇಲ್ ಮಾತನಾಡಿ, ನಗರದಲ್ಲಿ ಸಚಿವ ಮಧು ಬಂಗಾರಪ್ಪ, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅಭಿಯಾನಕ್ಕೆ ಕೈಜೋಡಿಸಲಿದ್ದಾರೆ. ಶಾಸಕರು, ಮಾಜಿ ಶಾಸಕರು, ಎಂಎಲ್‌ಸಿಗಳು ಪಾಲ್ಗೊಳ್ಳಲಿದ್ದು ಶಾಸಕ ಎಸ್.ಎನ್.ಚನ್ನಬಸಪ್ಪ ನೇತೃತ್ವದಲ್ಲಿ ನಗರದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಕರಪತ್ರ ವಿತರಣೆ, ಬ್ಯಾನರ್ ಕಟ್ಟುವ ಕೆಲಸಗಳು ನಡೆದಿದ್ದು ಮೊದಲ ಹಂತದದಲ್ಲಿ ಶೃಂಗೇರಿಯಿಂದ ಹರಿಹರವರೆಗೆ 200 ಕಿ.ಮೀ. ಪಾದಯಾತ್ರೆ, ಎರಡನೇ ಹಂತದಲ್ಲಿ ಹರಿಹರದಿಂದ ಕಿಷ್ಕಿಂಧೆವರೆಗೆ 230 ಕಿ.ಮೀ. ಪಾದಯಾತ್ರೆ ಇರಲಿದೆ ಎಂದರು. ಮೂರನೇ ಹಂತದ ಪಾದಯಾತ್ರೆ ಆಂಧ್ರಪ್ರದೇಶದಲ್ಲಿ ಮುಂದಿನ ವರ್ಷ ನಡೆಯಲಿದೆ ಎಂದರು. ಪ್ರಮುಖರಾದ ಡಾ. ಎಲ್.ಕೆ.ಶ್ರೀಪತಿ, ಕಿರಣ್‌ಕುಮಾರ್, ಎಸ್.ಬಿ.ಅಶೋಕಕುಮಾರ್, ಬಿ.ಎ.ರಮೇಶ್ ಹೆಗ್ಡೆ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net