ಬಜೆಟ್​ ಮಂಡನೆ ಪೂರ್ವದಲ್ಲಿ ಮಾಜಿ ಹಣಕಾಸು ಸಚಿವ ಅರುಣ್​ ಜೇಟ್ಲಿಯವರಿಗೆ ಗೌರವ ಸಲ್ಲಿಸಿದ ನಿರ್ಮಲಾ ಸೀತಾರಾಮನ್​

Arun Jaitly 2 feb 20
Published on

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಅವರು ಬಜೆಟ್​ ಪೂರ್ವ ಭಾಷಣ ಪ್ರಾರಂಭದಲ್ಲಿ ಮಾಜಿ ವಿತ್ತೀಯ ಸಚಿವ, ದಿವಂಗತ ಅರುಣ್​ ಜೇಟ್ಲಿ ಅವರಿಗೆ ಗೌರವ ಸಲ್ಲಿಸಿದರು.

ಮೋದಿ ನೇತೃತ್ವದ ಮೊದಲ ಅವಧಿಯ ಕೇಂದ್ರ ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದ ಅರುಣ್​ ಜೇಟ್ಲಿ 2019ರ ಆಗಸ್ಟ್​ 24ರಂದು ಅನಾರೋಗ್ಯದಿಂದ ಮೃತಪಟ್ಟಿದ್ದಾರೆ.

ಇಂದು ಬಜೆಟ್​ ಅಧಿವೇಶನ ಪ್ರಾರಂಭದಲ್ಲಿ ಮಾತನಾಡಿದ ನಿರ್ಮಲಾ ಸೀತಾರಾಮನ್​ ಕೇಂದ್ರ ಸರ್ಕಾರದ ಸಾಧನೆಗಳನ್ನು ಪಟ್ಟಿ ಮಾಡಿ ಹೇಳಿದರು. ಈ ವೇಳೆ ಅರುಣ್​ ಜೇಟ್ಲಿ ಆಡಳಿತ ಅವಧಿಯಲ್ಲಿ ಜಾರಿಗೆ ತಂದ ಜಿಎಸ್​ಟಿ (ಗೂಡ್ಸ್​ ಆ್ಯಂಡ್ ಸರ್ವೀಸ್​ ಟ್ಯಾಕ್ಸ್​-ಸರಕು ಮತ್ತು ಸೇವಾ ತೆರಿಗೆ)ಯನ್ನು ಅತ್ಯಂತ ಮಹತ್ವದ ಐತಿಹಾಸಿಕ ಸುಧಾರಣಾ ಕ್ರಮ ಎಂದು ಹೊಗಳಿದರು. ಅದೇ ವೇಳೆ ಅರುಣ್ ಜೇಟ್ಲಿಯವರನ್ನು ನೆನಪು ಮಾಡಿಕೊಂಡು, ನಾನು ಈ ಸಂದರ್ಭದಲ್ಲಿ ಅವರಿಗೆ ಗೌರವ ಸಲ್ಲಿಸುತ್ತೇನೆ ಎಂದರು.

ಬಿಜೆಪಿ ಸರ್ಕಾರದ ಎರಡನೇ ಅವಧಿಯ ಎರಡನೇ ಬಜೆಟ್​ನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಮಂಡನೆ ಮಾಡುತ್ತಿದ್ದು, ಸದ್ಯದ ಆರ್ಥಿಕ ಕುಸಿತದ ಪರಿಸ್ಥಿತಿಯಲ್ಲಿ ಈ ಬಜೆಟ್​ ಅಧಿಕ ನಿರೀಕ್ಷೆ, ಕುತೂಹಲ ಹುಟ್ಟಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net