ನಿರ್ಭಯಾ ಪ್ರಕರಣ; ಮರಣದಂಡನೆ ವಿಧಿಸಿರುವ ಇಬ್ಬರು ಅಪರಾಧಿಗಳ ಕ್ಯುರೇಟಿವ್​ ಅರ್ಜಿ ವಿಚಾರಣೆ ಜನವರಿ 14ಕ್ಕೆ

SUPREME
Published on

ನವದೆಹಲಿ: ಸುಪ್ರೀಂಕೋರ್ಟ್​ನ ಐವರು ನ್ಯಾಯಮೂರ್ತಿಗಳ ಪೀಠ ನಿರ್ಭಯಾ ಪ್ರಕರಣದ ಇಬ್ಬರು ಅಪರಾಧಿಗಳು ಸಲ್ಲಿಸಿರುವ ಕ್ಯುರೇಟಿವ್​ ಅರ್ಜಿಯ ವಿಚಾರಣೆಯನ್ನು ಮಂಗಳವಾರ (ಜ.14) ಕೈಗೆತ್ತಿಕೊಳ್ಳಲಿದೆ.

ನ್ಯಾಯಮೂರ್ತಿಗಳಾದ ಎನ್​.ವಿ. ರಮಣ, ಅರುಣ್​ ಮಿಶ್ರಾ, ಆರ್​.ಎಫ್​. ನಾರಿಮನ್​, ಆರ್​. ಭಾನುಮತಿ ಮತ್ತು ಅಶೋಕ್​ ಭೂಷಣ್​ ಅವರನ್ನೊಳಗೊಂಡ ಮಂಗಳವಾರ ಮಧ್ಯಾಹ್ನ 1.35ಕ್ಕೆ ವಿಚಾರಣೆ ನಡೆಸಲಿದೆ. ಪ್ರಕರಣ ನಾಲ್ವರು ಅಪರಾಧಿಗಳಲ್ಲಿ ವಿನಯ್​ ಶರ್ಮಾ ಮತ್ತು ಮುಖೇಶ್​ ಕ್ಯುರೇಟಿವ್​ ಅರ್ಜಿ ಸಲ್ಲಿಸಿದ್ದಾರೆ.

ಕ್ಯುರೇಟಿವ್​ ಅರ್ಜಿಯು ಅಪರಾಧಿಗಳ ಕೊನೆ ಪ್ರಯತ್ನವಾಗಿದೆ. ಉಳಿದ ಇನ್ನಿಬ್ಬರು ಅಪರಾಧಿಗಳಾದ ಅಕ್ಷಯ್​ ಮತ್ತು ಪವನ್​ ಗುಪ್ತ ಅವರು ಕ್ಯುರೇಟಿವ್​ ಅರ್ಜಿ ಸಲ್ಲಿಸಿಲ್ಲ.

ಪಟಿಯಾಲ ನ್ಯಾಯಾಲಯವು ನಾಲ್ವರು ಅಪರಾಧಿಗಳಿಗೆ ಜ.22ರಂದು ಮರಣದಂಡನೆ ನೀಡಲು ಆದೇಶಿಸಿತ್ತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net