ಪ್ರತಿಪಕ್ಷಗಳ ಕಡೆಗಣನೆಗೆ ನಿರಾಣಿ ಆಕ್ಷೇಪ | UKP meeting tomorrow

Hanamanth Nirani
Published on

ಬೆಂಗಳೂರು: ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತದ ಮಹತ್ವದ ಸಭೆಯಿಂದ ಪ್ರತಿಪಕ್ಷಗಳ ಶಾಸಕರನ್ನು ದೂರವಿಟ್ಟಿದ್ದನ್ನು ಬಿಜೆಪಿ ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ಆಕ್ಷೇಪಿಸಿದ್ದಾರೆ.

ಸಿಎಂ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಬುಧವಾರ ಈ ಸಭೆ ಏರ್ಪಡಿಸಿದ್ದು, ಆಡಳಿತ ಪಕ್ಷದ ಶಾಸಕರಿಗೆ ಆಹ್ವಾನಿಸಿ ಪ್ರತಿಪಕ್ಷಗಳ ಶಾಸಕರನ್ನು ಕಡೆಗಣಿಸಿದ್ದು ಸರಿಯಲ್ಲವೆಂದು ಖಂಡಿಸಿದ್ದಾರೆ.

ಉತ್ತರ ಕರ್ನಾಟಕ ಭಾಗದ ಬಹುದೊಡ್ಡ ನೀರಾವರಿ ಯೋಜನೆಯಾಗಿದೆ. ಮೂರನೇ ಹಂತದ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಭೂಸ್ವಾಧೀನ, ಪುನರ್ವಸತಿ, ಪುನರ್ ನಿರ್ಮಾಣ, ಭೂ ಪರಿಹಾರ, ಹೆಚ್ಚುವರಿ ಪರಿಹಾರ ಕೋರಿ ನ್ಯಾಯಾಲಯಗಳಲ್ಲಿ ಪ್ರಕರಣಗಳ ದಾಖಲು ಕುರಿತು ಡಿಸಿಎಂ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ಒಂದು ಹಂತದ ಸಭೆಯಾಗಿದೆ.

ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಭೂಪರಿಹಾರ ಒಪ್ಪಿತ ದರದ ಬಗ್ಗೆ ಸಭೆ ಕರೆಯಲಿದ್ದು, ಪ್ರತಿಪಕ್ಷಗಳ ಶಾಸಕರಿಗೆ ಆಹ್ವಾನದ ವಾಗ್ದಾನವನ್ನು ಡಿ.ಕೆ.ಶಿವಕುಮಾರ್ ವಾಗ್ದಾನ ನೀಡಿದ್ದರು. ಈಗ ದಿಢೀರ್ ಪ್ರತಿಪಕ್ಷದವನ್ನು ಕೈಬಿಡಲಾಗಿದೆ.

ಯೋಜನೆಗಳು ತ್ವರಿತ ಗತಿ ಅನುಷ್ಠಾನಕ್ಕೆ ಆಡಳಿತ, ಪ್ರತಿಪಕ್ಷ ಜಂಟಿ ಪ್ರಯತ್ನ, ಪರಸ್ಪರ ಸಹಕಾರ ಅಷ್ಟೇ ಮುಖ್ಯವಾಗಿದೆ. ಯುಕೆಪಿ ಭಾಗದ ಜನಪ್ರತಿನಿಧಿಗಳು, ಯೋಜನೆಯಡಿ ಸಂತ್ರಸ್ತರಾಗಿದ್ದು, ಸಿಎಂ, ಡಿಸಿಎಂ ಯೋಚನಾ ಸರಣಿ ಒಪ್ಪಿತವಲ್ಲ ಎಂದಿದ್ದಾರೆ.

ರೈತರಿಗೆ ಪ್ರತಿ ಎಕರೆಗೆ 50 ಲಕ್ಷ ರೂ.ಗಿಂತ ಹೆಚ್ಚಿನ ಪರಿಹಾರ ನಿಗದಿ, ಕಾಲಕಾಲಕ್ಕೆ ಪ್ರತಿ ವರ್ಷ ಶೇ.10ರಷ್ಟು ಹೆಚ್ಚಳದ ನಿರ್ಧಾರವನ್ನು ಬುಧವಾರದ ಸಭೆಯಲ್ಲಿ ತೆಗೆದುಕೊಳ್ಳಬೇಕು ಎಂದು ಹಣಮಂತ ನಿರಾಣಿ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net