ಅ.26, 27ರಂದು ನೀನಾಸಂ ನಾಟಕೋತ್ಸವ: ಹೊನ್ನಾಳಿ ಚಂದ್ರಶೇಖರ್

honnali chandrushekar
ನಮ್ ಟೀಮ್‌ನ ಪ್ರಧಾನ ಕಾರ್ಯದರ್ಶಿ ಹೊನ್ನಾಳಿ ಚಂದ್ರಶೇಖರ್
Published on

ಶಿವಮೊಗ್ಗ: ನಗರದ ಕುವೆಂಪು ರಂಗಮಂದಿರದಲ್ಲಿ ಅ.26 ಮತ್ತು 27ರಂದು ಶಿವಮೊಗ್ಗದ ನಮ್ ಟೀಮ್‌ನಿಂದ ನೀನಾಸಂ ನಾಟಕೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಟೀಮ್‌ನ ಪ್ರಧಾನ ಕಾರ್ಯದರ್ಶಿ ಹೊನ್ನಾಳಿ ಚಂದ್ರಶೇಖರ್ ಹೇಳಿದರು.

ಪ್ರತಿ ವರ್ಷದಂತೆ ಈ ಬಾರಿಯೂ ನಮ್ ಟೀಮ್‌ನಿಂದ ನಾಟಕೋತ್ಸವ ಆಯೋಜಿಸುತ್ತಿದ್ದು, ಈಗಾಗಲೇ ರಾಜ್ಯಾದ್ಯಂತ ಪ್ರದರ್ಶನವಾಗಿ ವೀಕ್ಷಕರ ಮೆಚ್ಚುಗೆ ಪಡೆದಿರುವ ಎರಡು ನಾಟಕಗಳು ಶಿವಮೊಗ್ಗದಲ್ಲಿ ಪ್ರದರ್ಶನಗೊಳ್ಳಲಿವೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

24 ವರ್ಷಗಳಿಂದ ಶಿವಮೊಗ್ಗವನ್ನು ಕೇಂದ್ರಿಕರಿಸಿ ನಮ್ ಟೀಮ್ ರಂಗ ಚಟುವಟಿಕೆ ಮಾಡುತ್ತಿದ್ದು, ಈವರೆಗೆ ಶಿವಮೊಗ್ಗದಲ್ಲಿ 37 ನಾಟಕೋತ್ಸವ ಆಯೋಜಿಸಿದೆ. ಸ್ವನಿರ್ಮಿತ 46 ನಾಟಕಗಳನ್ನು ರಂಗದ ಮೇಲೆ ತಂದಿದೆ. ರಾಜ್ಯ ಮತ್ತು ಹೊರರಾಜ್ಯದಲ್ಲಿ ಈವರೆಗೆ 245 ನಾಟಕಗಳ ಪ್ರದರ್ಶನ ಮಾಡಿದೆ ಎಂದರು.

ಅ. 26ರಂದು ಸಂಜೆ 6.45ಕ್ಕೆ ಮಾಲತೀಮಾಧವ ನಾಟಕ ಪ್ರದರ್ಶನಗೊಳ್ಳಲಿದ್ದು, ಕೆ.ವಿ.ಅಕ್ಷರ ನಿರ್ದೇಶಿಸಿದ್ದಾರೆ. ಅ. 27ರಂದು ಸಂಜೆ 6.45ಕ್ಕೆ ಅಂಕದ ಪರದೆ ನಾಟಕ ಪ್ರದರ್ಶನಗೊಳ್ಳಲಿದ್ದು, ವಿದ್ಯಾನಿಧಿ ವನಾರಸೆ ನಿರ್ದೇಶನ ಮಾಡಿದ್ದಾರೆ ಎಂದರು. ನಮ್‌ಟೀಮ್ ಖಜಾಂಚಿ ಸಮನ್ವಯ ಕಾಶಿ ಸುದ್ದಿಗೋಷ್ಠಿಯಲ್ಲಿದ್ದರು.a

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net