NIMHANSನಲ್ಲಿ ಡಾಟಾ ಎಂಟ್ರಿ ಆಪರೇಟರ್‌ ನೇಮಕ; ಪಿಯು ವಿದ್ಯಾರ್ಹತೆ, ಅರ್ಜಿ ಸಲ್ಲಿಕೆಗೆ ಆಗಸ್ಟ್ 10 ಕೊನೆ ದಿನ

nimhans
Published on

ಬೆಂಗಳೂರು: NIMHANS ಅಧಿಕೃತ ಅಧಿಸೂಚನೆಯ ಮೂಲಕ ಸಂಶೋಧನಾ ಸಹಾಯಕ, ಡಾಟಾ ಎಂಟ್ರಿ ಆಪರೇಟರ್‌ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಬೆಂಗಳೂರು ಭಾಗದಲ್ಲಿ ವೃತ್ತಿಯನ್ನು ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತರು ಆಗಸ್ಟ್ 10 ರೊಳಗೆ ಇಮೇಲ್ ಕಳುಹಿಸಬಹುದು.


ಸಂಸ್ಥೆಯ ಹೆಸರು : ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಅಂಡ್ ನ್ಯೂರೋ ಸೈನ್ಸಸ್ ( ನಿಮ್ಹಾನ್ಸ್ )

ಹುದ್ದೆಗಳ ಸಂಖ್ಯೆ: 2

ಉದ್ಯೋಗ ಸ್ಥಳ: ಬೆಂಗಳೂರು

ಹುದ್ದೆಯ ಹೆಸರು: ಸಂಶೋಧನಾ ಸಹಾಯಕ, ಡಾಟಾ ಎಂಟ್ರಿ ಆಪರೇಟರ್‌

ವೇತನ: ರೂ.18000-31000/- ಪ್ರತಿ ತಿಂಗಳು

ಹುದ್ದೆಯ ವಿವರಗಳು
ಸಂಶೋಧನಾ ಸಹಾಯಕ 1
ಡಾಟಾ ಎಂಟ್ರಿ ಆಪರೇಟರ್‌ (DEO) 1

ವಿದ್ಯಾರ್ಹತೆ 
ಸಂಶೋಧನಾ ಸಹಾಯಕ-ಪದವಿ
ಡಾಟಾ ಎಂಟ್ರಿ ಆಪರೇಟರ್‌ (DEO)-12 ನೇ

ವಯಸ್ಸಿನ ಮಿತಿ: ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ಗರಿಷ್ಠ ವಯಸ್ಸು 40 ವರ್ಷ.

ವಯೋಮಿತಿ ಸಡಿಲಿಕೆ: ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಅಂಡ್ ನ್ಯೂರೋ ಸೈನ್ಸಸ್  ಮಾನದಂಡಗಳ ಪ್ರಕಾರ

ಆಯ್ಕೆ ಪ್ರಕ್ರಿಯೆ
ಲಿಖಿತ ಪರೀಕ್ಷೆ ಮತ್ತು ಸಂದರ್ಶನ

ವೇತನ (ತಿಂಗಳಿಗೆ)
ಸಂಶೋಧನಾ ಸಹಾಯಕ ರೂ.31000/-
ಡಾಟಾ ಎಂಟ್ರಿ ಆಪರೇಟರ್‌ (DEO) ರೂ.18000/

ಅರ್ಜಿ ಸಲ್ಲಿಸುವುದು ಹೇಗೆ?
ಅರ್ಹ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ನಿಗದಿತ ನಮೂನೆಯಲ್ಲಿ ಇ-ಮೇಲ್ ಐಡಿ  gbk5000@rediffmail.com ಇಲ್ಲಿಗೆ ಆ.10 ರ ಒಳಗೆ ಎಲ್ಲಾ ಅಗತ್ಯ ದಾಖಲೆಗಳೊಂದಿಗೆ ಕಳುಹಿಸಬಹುದು.

ಅಧಿಕೃತ ವೆಬ್‌ಸೈಟ್: nimhans.ac.in

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net