

ಮುಂದುವರಿದ ಭಾಗ...
ಜೀವ ವೈವಿದ್ಯತೆ ನಾಶ:
ಹುಳ - ಹುಪ್ಪಟ್ಟೆಗಳು, ಸೂಕ್ಷ್ಮಜೀವಿಗಳು ಈ ಮರದಲ್ಲಿ ಮನೆ ಮಾಡಲಿಲ್ಲ, ಪಕ್ಷಿಗಳು ಹಣ್ಣು ಹಂಪಲು ತಿನ್ನಲಿಲ್ಲ, ಜೇನು ನೊಣಗಳು ಗೂಡು ಕಟ್ಟಲಾಗಲಿಲ್ಲ, ರೈತನ ಬೆಳೆಯ ಹೂವಿನ ಪರಾಗಸ್ಪರ್ಶದ ಕೊರತೆಯಾಯಿತು, ಕೋಟ್ಯಂತರ ಸೂಕ್ಷ್ಮ ಜೀವಿಗಳು ನಶಿಸಿಹೋದವು, ಜೀವ ವೈವಿಧ್ಯತೆಯಲ್ಲಿ ಏರುಪೇರಾಗಿ ಸಂಪೂರ್ಣ ಪರಿಸರ ಚಕ್ರ ಹಾಳಾಗಿ ಜೀವ ಸಂಕುಲಗಳಲ್ಲಿ ವೈಪರೀತ್ಯವುಂಟಾಯಿತು. ಬೆಳೆ ತಿನ್ನುವ ಕೀಟಗಳನ್ನು ತಿನ್ನುತ್ತಿದ್ದ ಪಕ್ಷಿಗಳು ಮತ್ತು ಇತರ ಕೀಟಗಳು ಮಾಯವಾದವು. ಆಗ ಕೀಟನಾಶಕ ಔಷಧಗಳು ಬಳಕೆಯಾದವು. ಬೇಳೆಕಾಳುಗಳು, ಹಣ್ಣು, ತರಕಾರಿಗಳು ಔಷಧಮಯವಾದವು, ಮಾನವರಿಗೆ ಹೊಸ ಹೊಸ ರೋಗಗಳು ಬರಲಾರಂಭಿಸಿದವು, ಜನರು ಔಷಧಕ್ಕಾಗಿ ಲಕ್ಷಾಂತರ ರೂ. ಖರ್ಚು ಮಾಡಲಾರಂಬಿಸಿದರು, ಹೆಲ್ದಿ ಸಿಟಿಗಳಲ್ಲಿ ಆಸ್ಪತ್ರೆಗಳು ಹೆಚ್ಚಾಗಿ ಹೆಲ್ತ್ ಸಿಟಿ ಎನಿಸಿಕೊಂಡವು.
ಮುಂದುವರಿಯುತ್ತದೆ...