ರೇವತಿಯಂತಹ ಹುಡುಗಿ ಸಿಗಲು ನಾನು ಪುಣ್ಯ ಮಾಡಿದ್ದೆ, ಅವರು ಖಂಡಿತ ಹೊಂದಿಕೊಂಡು ಹೋಗುತ್ತಾರೆ: ನಿಖಿಲ್​ ಕುಮಾರಸ್ವಾಮಿ

Nikhil 10 Feb 20
Published on

ಬೆಂಗಳೂರು: ನನಗಿವತ್ತು ತುಂಬ ಸಂತೋಷದ ದಿನ. ಹಿರಿಯರ ಆಶಯದಂತೆ ನಿಶ್ಚಿತಾರ್ಥ ಮಾಡಿಕೊಂಡಿದ್ದೇನೆ ಎಂದು ನಿಖಿಲ್​ ಕುಮಾರಸ್ವಾಮಿ ಹೇಳಿದರು.

ತಾಜ್​ವೆಸ್ಟ್​ ಎಂಡ್​ ಹೋಟೆಲ್​ನಲ್ಲಿ ನಡೆದ ಅದ್ದೂರಿ ಸಮಾರಂಭದ ಬಳಿಕ ಮಾತನಾಡಿದ ಅವರು, ನಮ್ಮ ಅಜ್ಜಿ-ತಾತ, ಅಪ್ಪ-ಅಮ್ಮನಂತೆ ನಾವೂ ಇರುತ್ತೇವೆ. ಮದುವೆ ಎನ್ನುವುದು ಎಲ್ಲರ ಜೀವನದಲ್ಲಿ ಒಂದು ಮಹತ್ತರವಾದ ಘಟ್ಟ. ಈ ಸಂದರ್ಭದಲ್ಲಿ ನನ್ನನ್ನು ಪ್ರೀತಿಸುವ ಎಲ್ಲರಿಗೂ ಊಟ ಹಾಕಿಸಬೇಕು ಎಂಬ ಆಸೆ ಇತ್ತು. ಅದು ಈಡೇರುತ್ತಿದೆ ಎಂದರು.

ಕಳೆದ ಕೆಲವು ದಿನಗಳಿಂದ ನಾನು ರೇವತಿಯವರೊಂದಿಗೆ ಮಾತನಾಡುತ್ತಿದ್ದೇನೆ. ಸಂಪ್ರದಾಯಸ್ಥ, ಸುಸಂಸ್ಕೃತ ಗುಣಗಳಿರುವ ಹುಡುಗಿ. ತುಂಬ ಚೆನ್ನಾಗಿ ನಮ್ಮೊಂದಿಗೆ ಹೊಂದಿಕೊಂಡು ಹೋಗುತ್ತಾರೆ ಎಂಬ ನಂಬಿಕೆ ಇದೆ. ಇಂತಹ ಹುಡುಗಿ ಸಿಗಲು ನಾನು ಪುಣ್ಯ ಮಾಡಿದ್ದೆ ಎಂದು ನಿಖಿಲ್ ಹೇಳಿದರು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net