ಚುನಾವಣೆಯಲ್ಲಿ ಸೋತ ಮಾತ್ರಕ್ಕೆ ನಾನು ಮನೆ ಸೇರುವ ವ್ಯಕ್ತಿಯಲ್ಲ:ನಿಖಿಲ್ ಕುಮಾರಸ್ವಾಮಿ

nikhil kumaraswamy
Published on

ರಾಮನಗರ: ಚುನಾವಣೆಯಲ್ಲಿ ಯಾರಾದರೂ ಒಬ್ಬರು ಗೆಲ್ಲಬೇಕು. ಸೋತ ಮಾತ್ರಕ್ಕೆ ನಾನು ಮನೆ ಸೇರುವ ವ್ಯಕ್ತಿಯಲ್ಲ. ಕಾರ್ಯಕರ್ತರು ಎದೆಗುಂದಲು ನಾನು ಬಿಡುವುದಿಲ್ಲ ಎಂದು ನಟ ನಿಖಿಲ್ ಕುಮಾರಸ್ವಾಮಿ ಹೇಳಿಕೆ.

ಚನ್ನಪಟ್ಟಣದಲ್ಲಿ ಮಾತನಾಡಿದ ಅವರು, ಪಂಚರತ್ನ ಯೋಜನೆ ಬಗ್ಗೆ ರಾಜ್ಯದ ಜನತೆಗೆ ತಿಳಿಸುವ ಒತ್ತಡದಲ್ಲಿದ್ದರು. ಆದರು ಕೂಡಾ ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಅವರನ್ನ ಗೆಲ್ಲಿಸಿದ್ದಾರೆ. ಚುನಾವಣೆಯಲ್ಲಿ ಯಾರಾದರೂ ಒಬ್ಬರು ಗೆಲ್ಲಬೇಕು. ಸೋತ ಮಾತ್ರಕ್ಕೆ ನಾನು ಮನೆ ಸೇರುವ ವ್ಯಕ್ತಿಯಲ್ಲ. ಕಾರ್ಯಕರ್ತರು ಎದೆಗುಂದಲು ನಾನು ಬಿಡುವುದಿಲ್ಲ ಎಂದಿದ್ದಾರೆ.

ನನಗೆ ರಾಮನಗರದಲ್ಲಿ 76 ಸಾವಿರಕ್ಕೂ ಹೆಚ್ಚು ಮತಗಳನ್ನ‌ ನೀಡಿದ್ದಾರೆ. ತಾಂತ್ರಿಕವಾಗಿ ನಾನು ವಿಧಾನಸಭಾ ಚುನಾವಣೆಯಲ್ಲಿ‌ನಾನು ಸೋತಿರಬಹುದು. ಆದರೆ ಕ್ಷೇತ್ರದ ಜನರು ಸಾಕಷ್ಟು ಪ್ರೀತಿ ಕೊಟ್ಟಿದ್ದಾರೆ. ಆದರೂ ನನಗೂ ನೋವು ಉಂಟಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

2004 ರಿಂದ ಕುಮಾರಸ್ವಾಮಿ ಅವರು ರಾಮನಗರದಿಂದ ಸ್ಪರ್ಧೆ ಮಾಡಿದ್ದಾರೆ. ಅಂದಿನಿಂದ ಇಂದಿನವರೆಗೂ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಈ ಬಾರಿ ಜನರು ಬೇರೆ ರೀತಿ ತಿರ್ಮಾನ ತೆಗೆದುಕೊಂಡಿದ್ದಾರೆ.ಮಂಡ್ಯದ ರೀತಿಯೇ ಇಲ್ಲಿಯೂ ಆಗಿರುವ ಬಗ್ಗೆ ನಿಮ್ಮ‌ ಬಳಿ ಹಂಚಿಕೊಂಡಿದ್ದೆ. ಇಲ್ಲಿ ಮಧ್ಯರಾತ್ರಿ ಕೂಪನ್ ಓಚರ್ ಕೊಟ್ಟು ಆರ್ಥಿಕವಾಗಿ ಹಿಂದೂಳಿದವರ ಮತ ಪಡೆದು ಅವರನ್ನ ದಾರಿ ತಪ್ಪಿಸಿದ್ದಾರೆ. ಮುಂದಿನ ದಿನಗಳಲ್ಲಿ ಕ್ಷೇತ್ರದ ಜನರಿಗೆ ಅರಿವಾಗುತ್ತದೆ ಎಂದು ತಿಳಿಸಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲಿ ಆಗುವ ಬೆಳವಣಿಗೆಗೆ ನಾನು ಉತ್ತರ ಕೊಡಲು ಆಗುವುದಿಲ್ಲ. ಅಂತಿಮವಾಗಿ ರಾಜ್ಯದ ಜನರು ಒಂದು ತಿರ್ಮಾನ ಮಾಡಿದ್ದಾರೆ. ಸ್ವತಂತ್ರದ ಸರ್ಕಾರ ನಡೆಸಲು ಕಾಂಗ್ರೆಸ್​​ಗೆ ರಾಜ್ಯದ ಜನರು ಬೆಂಬಲ‌ ನೀಡಿದ್ದಾರೆ. ಅವರೆ ಉತ್ತರ ನೀಡಬೇಕು ಎಂದು ಹೇಳಿದ್ದಾರೆ.

ನಾನು ಯಾವುದೇ ಕಾರಣಕ್ಕೂ ರಾಮನಗರ ಬಿಟ್ಟು ಹೋಗುವುದಿಲ್ಲ. ಜನರನ್ನ ಕೈ ಬಿಡುವ ಪ್ರಶ್ನೆ ಇಲ್ಲ‌.ಜನರಿಗೆ ಅಧಿಕಾರ ಇಲ್ಲದಿದ್ದರೂ ಸೇವೆ ಮಾಡುತ್ತೇವೆ ಎನ್ನುವ ಭರವಸೆ ನೀಡಿದ್ದಾರೆ.

ಲೋಕಸಭೆಯಲ್ಲಿ ಸರ್ಧೆ ಮಾಡುವ ವಿಚಾರವಾಗಿ ಮಾತನಾಡಿ, ಈ ಬಗ್ಗೆ ನನ್ನಲ್ಲಿ ಪ್ರಶ್ನೆ ಇಲ್ಲ.ರಾಜಕೀಯದ ಬಗ್ಗೆ ನಾನು ಚಿಂತನೆ ನಡೆಸಲ್ಲ. ದೇವೇಗೌಡರು ಕಟ್ಟಿರುವ ಪಕ್ಷವನ್ನ ಬಲಿಷ್ಠಗೊಳಿಸುವ ಚಿಂತನೆ ನಡೆಸುತ್ತಿದ್ದೇನೆ. ಲೋಕಸಭೆ ಆಗಲಿ, 2028ರ ವಿಧಾನ ಸಭಾ ಚುನಾವಣೆ ಬಗ್ಗೆ ನಾನು ಯಾವುದೇ ತಿರ್ಮಾನ ತೆಗೆದುಕೊಳ್ಳುವುದಿಲ್ಲ. ನಾನು ಜಿಲ್ಲೆಯನ್ನ ಬಿಡುವ ಪ್ರಶ್ನೆ ಇಲ್ಲ. 2028 ಕ್ಕೆ ರಾಮನಗರದಲ್ಲಿ ನನಗಿಂತ ಪ್ರಬಲ ಅಭ್ಯರ್ಥಿ ಬಂದ್ರೆ ಕಾರ್ಯಕರ್ತರಲ್ಲಿ ಚರ್ಚಿಸುತ್ತೇನೆ ಎಂದು ನುಡಿದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net