ಎಡಿಜಿಪಿ ಪತ್ರದ ಹಿಂದೆ 'ಕೈ'ವಾಡ ಎಂದು ಆರೋಪ

nikhil kumaraswamy
Published on

ಬೆಂಗಳೂರು ; ಎಡಿಜಿಪಿ ಎಂ.ಚಂದ್ರಶೇಖರ್‌ ಬರೆದಿರುವ ಪತ್ರಕ್ಕೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರು ತಿರುಗೇಟು ನೀಡಿದರು.

ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮಗಳ ಜತೆ ಮಾತಾಡಿದ ಅವರು ; ಎಡಿಜಿಪಿ ಎಂ.ಚಂದ್ರಶೇಖರ್‌ ಬರೆದಿರುವ ಪತ್ರದ ಹಿಂದೆ ಸಾಕಷ್ಟು ಕೈವಾಡವಿದೆ.ಅವರ ಬೆನ್ನಿಂದೆ ನಿಂತು ಈ ರೀತಿ ಪತ್ರ ಬರೆಯುವುದಕ್ಕೆ ಪ್ರೇರಣೆಕೊಟ್ಟಿದ್ದಾರೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ವಾಗ್ದಾಳಿ ನಡೆಸಿದರು.

ಅಧಿಕಾರಿಗಳು ಸರ್ಕಾರದ ಕೈಗೊಂಬೆ

ರಾಜ್ಯ ಸರ್ಕಾರ ಇವತ್ತು ಯಾವ ರೀತಿ ನಡೆಯುತ್ತಿದೆ. ಅಧಿಕಾರಿಗಳು ಸರ್ಕಾರದ ಕೈಗೊಂಬೆ ರೀತಿ ವರ್ತಿಸುತ್ತಿದ್ದಾರೆ. ಇದು ಬಹಳ ದಿನ ನಡೆಯುವುದಿಲ್ಲ. ಭವಿಷ್ಯ ಹಿಂದಿನ ಸಾಕಷ್ಟು ಸರ್ಕಾರಗಳು ರಾಜ್ಯದಲ್ಲಿ ಆಡಳಿತ ಮಾಡಿದ್ದವು, ಆದರೆ ಈ ರೀತಿಯಾಗಿ ಅಧಿಕಾರಿಗಳನ್ನ ದುರುಪಯೋಗ ಪಡೆಸಿಕೊಂಡು ಈ ರೀತಿ ಆಡಳಿತ ಮಾಡುತ್ತಿರುವುದು ರಾಜ್ಯದ ಇತಿಹಾಸದಲ್ಲೇ ಇದೇ ಮೊದಲು ಎಂದು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು ಅವರು.

ಆಗಾಗಿ ಇದ್ಯಾವುದಕ್ಕೂ ಭಯಪಡುವ ಅಗತ್ಯ ಇಲ್ಲ. ಅವರ ಈ ಇಂತಹ ನೂರು ಪತ್ರಗಳನ್ನ ಬರೆಯಲಿ, ಅಧಿಕಾರ ಶಾಶ್ವತ ಅಲ್ಲ, ಇವರು ತೋರಿಸಿಕೊಟ್ಟಿರುವ ದಾರಿ ದ್ವೇಷದ ರಾಜಕಾರಣ ಮುಂದುವರೆಸಬೇಕಾ ? ಅಧಿಕಾರದಲ್ಲಿದ್ದಾಗ ಮಾಜಿ ಪ್ರಧಾನಿ ದೇವೇಗೌಡರು ಮತ್ತು ಕುಮಾರಣ್ಣ ಅವರು ಈ ರೀತಿ ಮಾಡಿದರಾ.? ಎಂದು ಕಿಡಿಕಾರಿದರು.

ನಿನ್ನೆ ಬರೆದಿರುವ ಪತ್ರದಲ್ಲಿ ಆ ಪತ್ರದಲ್ಲಿ ಏನೇನು ಉಲ್ಲೇಖಿಸಿದ್ದರೆ ಇವೆಲ್ಲವನ್ನು ನೋಡಿದಾಗ ಅದರ ಹಿಂದೆ ಯಾವ್ಯಾವ ವ್ಯಕ್ತಿಗಳು ಅವರಿಗೆ ಪ್ರೇರೆಪಣೆ ಕೊಟ್ಟಿದ್ದಾರೆ ಅನ್ನುವುದು ಸ್ಪಷ್ಟವಾಗಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net