ನಿಜಗುಣ ದೇವರ ಷಷ್ಟ್ಯಬ್ದಿ ಸಂಭ್ರಮಕ್ಕೆ ಶ್ರೀಗಳ ದಂಡು

30..5
ಹುಣಶ್ಯಾಳ ಪಿಜಿಯಲ್ಲಿ ಜರುಗಲಿರುವ ಶ್ರೀ ನಿಜಗುಣ ದೇವರ ಷಷ್ಟ್ಯಬ್ದಿ ಸಂಭ್ರಮದ ಪ್ರಚಾರ ಪತ್ರಿಕೆಯನ್ನು ಪೂಜ್ಯರು, ಮುಖಂಡರು ಬಿಡುಗಡೆಗೊಳಿಸಿದರು. ಚಂದ್ರಶೇಖರ ಶಿವಾಚಾರ್ಯ ಶ್ರೀ, ನಿಜಗುಣ ದೇವರು, ಸರ್ಮೋತ್ತಮ ಜಾರಕಿಹೊಳಿ ಇತರರಿದ್ದರು.
Published on

ಮೂಡಲಗಿ: ತಾಲೂಕಿನ ಹುಣಶ್ಯಾಳ ಪಿಜಿ ಶ್ರೀ ಸಿದ್ಧಲಿಂಗ ಕೈವಲ್ಯಾಶ್ರಮದ ಪೀಠಾಧಿಪತಿ ಶ್ರೀ ನಿಜಗುಣ ದೇವರ ಷಷ್ಟ್ಯಬ್ದಿ ಸಂಭ್ರಮ ಕಾರ್ಯಕ್ರಮಕ್ಕೆ ನಾಡಿದ ವಿವಿಧ ಸ್ವಾಮೀಜಿಗಳು ಆಗಮಿಸಿ ಆಶೀರ್ವದಿಸಲಿದ್ದಾರೆ ಎಂದು ಹುಕ್ಕೇರಿ ಗುರುಶಾಂತೇಶ್ವರ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಶ್ರೀಗಳು ಹೇಳಿದರು.


ಹುಣಶ್ಯಾಳ ಪಿಜಿ ಗ್ರಾಮದಲ್ಲಿ ಬರುವ ಜನವರಿ 1ರಿಂದ 3ರ ವರೆಗೆ ಜರುಗಲಿರುವ ಷಷ್ಟ್ಯಬ್ದಿ ಸಂಭ್ರಮದ ಪ್ರಚಾರ ಪತ್ರಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಷಷ್ಟ್ಯಬ್ದಿ ಸಂಭ್ರಮ ಯಶಸ್ವಿಯಾಗಿಸಲು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸಹಾಯ ಹಸ್ತ ಚಾಚುವ ಮೂಲಕ ಸನ್ನದ್ಧರಾಗಿದ್ದಾರೆ ಎಂದರು.


ಕಾರ್ಯಕ್ರಮ ಉಸ್ತುವಾರಿ ಸಮಿತಿ ಅಧ್ಯಕ್ಷ ಸರ್ಮೋತ್ತಮ ಜಾರಕಿಹೊಳಿ ಮಾತನಾಡಿ, ಷಷ್ಟ್ಯಬ್ದಿ ಸಂಭ್ರಮಕ್ಕೆ ನಾಡಿನ ಪೂಜರು ಆಗಮಿಸುತ್ತಿದ್ದು, ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಮಾಡೋಣ ಎಂದರು.


ರಾಯಬಾಗದ ಮಾಜಿ ಶಾಸಕ ಬಿ.ಸಿ.ಸರಿಕರ ಮಾತನಾಡಿ, ಷಷ್ಟ್ಯಬ್ದಿ ಸಂಭ್ರಮ ಯಶಸ್ವಿಗೊಳಿಸಲು ತನು, ಮನ, ಧನ ಸಹಾಯ ಸಹಕಾರ ನೀಡುವುದಾಗಿ ಹೇಳಿದರು.


ಷಷ್ಟ್ಯಬ್ದಿ ಸಂಭ್ರಮದ ಶ್ರೀಗಳ ಮೆರವಣಿಗೆಯಲ್ಲಿ 1008 ಕುಂಭ ಮೇಳದ ಜವಾಬ್ದಾರಿಯನ್ನು ಆಶಾ ಕಾರ್ಯಕರ್ತೆಯರಿಗೆ ವಹಿಸಲಾಯಿತು. ಕಾರ್ಯಕ್ರಮದ ಸಿದ್ಧತೆ, ರೂಪುರೇಷಗಳ ಬಗ್ಗೆ ಚರ್ಚಿಸಿ ಸ್ವಾಮೀಜಿಗಳು ವಿವಿಧ ಗ್ರಾಮಗಳಿಗೆ ಭೇಟಿಯ ದಿನಾಂಕ ನಿಗದಿಪಡಿಸಲಾಯಿತು.


ನೇಸರಗಿಯ ಗಾಳೇಶ್ವರ ಮಠದ ಚಿದಾನಂದ ಶ್ರೀ, ಶ್ರೀಮಠದ ನಿಜಗುಣ ದೇವರು, ತೊಂಟಿಕಟ್ಟಿ ಗಾಳೇಶ್ವರ ಮಠದ ಶ್ರೀ ವೆಂಕಟೇಶ್ವ ಮಹಾರಾಜರು, ಅಶೋಕ ಪೂಜೇರಿ, ಬಸಗೌಡ ಪಾಟೀಲ, ಎಂ.ಆರ್.ಬೋವಿ, ಶಂಕರ ಬಿಲಕುಂದಿ, ವಿಠ್ಠಲ ಬಿಲಕುಂದಿ, ಸಿದ್ದಲಿಂಗ ಕಂಬಳಿ, ರಾಜು ಬೈರುಗೋಳ, ರವಿ ಪರುಶೆಟ್ಟಿ, ಎಸ್.ಬಿ.ಲೋಕನ್ನವರ, ರಾಮಣ್ಣ ಹುಕ್ಕೇರಿ, ರಾಮನಾಯ್ಕ ನಾಯ್ಕ, ಬಸವರಾಜ ಕಾಡಾಪುರ, ಶಾಮಾನಂದ ಪೂಜೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net