

ಆಂಧ್ರಪದೇಶ: ಕಳೆದ ಕೆಲವು ದಿನಗಳಿಂದ ನಟಿ ನಿಹಾರಿಕಾ ಕೊನಿಡೇಲಾ ತಮ್ಮ ಪತಿ ಚೈತನ್ಯ ಜೊನ್ನಲಗಡ್ಡ ಅವರಿಂದ ವಿಚ್ಛೇದನ ಪಡೆದುಕೊಂಡಿದ್ದಾರೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣದಲ್ಲಿ (Social Media) ಹರಿದಾಡಿತ್ತು. ಸದ್ಯ ನಟಿ ನಿಹಾರಿಕಾ ಈ ಎಲ್ಲಾ ಊಹಾಪೋಹಗಳಿಗೂ ಅಧಿಕೃತ ಮಾಹಿತಿ ನೀಡುವ ಮೂಲಕ ತೆರೆ ಎಳೆದಿದ್ದಾರೆ.
ಈ ಬಗ್ಗೆ ಉತ್ತರ ನೀಡಲು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಬರೆದು ಪೋಸ್ಟ್ ಮಾಡಿರುವ ನಟಿ ನಿಹಾರಿಕಾ, "ನಾನು ಮತ್ತು ಚೈತನ್ಯ ದೂರ ಉಳಿಯಲು ನಿರ್ಧರಿಸಿದ್ದೇವೆ. ನಮ್ಮ ನಡೆಗೆ ನಿಮ್ಮ ಪ್ರೀತಿ, ಕಾಳಜಿ ಜೊತೆಗಿರಲಿ ಎಂಬುದು ನನ್ನ ಆಶಯ. ನನಗೆ ಆಧಾರ ಸ್ತಂಭವಾಗಿರುವ ನನ್ನ ಕುಟುಂಬ ಮತ್ತು ಸ್ನೇಹಿತರಿಗೆ ಧನ್ಯವಾದಗಳು. ನಮ್ಮ ಮುಂದಿನ ಹೆಜ್ಜೆಯಲ್ಲಿ ಏಕಾಂತವನ್ನು ಬಯಸುತ್ತೇವೆ, ಅದಕ್ಕೆ ನಿಮ್ಮ ಸಹಕಾರವಿರಲಿ ಎಂದು ವಿನಂತಿಸಿಕೊಳ್ಳುತ್ತೇನೆ. ನನ್ನನ್ನು ಅರ್ಥ ಮಾಡಿಕೊಂಡಿದ್ದಕ್ಕೆ ಥ್ಯಾಂಕ್ಯೂ" ಎಂದು ಬರೆದು ಪೋಸ್ಟ್ ಮಾಡಿದ್ದಾರೆ,(ಏಜೆನ್ಸೀಸ್).