ಕೇರಳದಲ್ಲಿ ನಿಫಾ ವೈರಸ್ ಪ್ರಕರಣಗಳ ಸಂಖ್ಯೆ ಐದಕ್ಕೆ ಏರಿಕೆ, ರೋಗಿಗಳ ಸಂಪರ್ಕದಲ್ಲಿದ್ದ 700 ಮಂದಿಯ ಪೈಕಿ 77 ಜನರಿಗೆ ಅಪಾಯ ಹೆಚ್ಚು

niiii
Published on

ಕೇರಳದಲ್ಲಿ ಬುಧವಾರ ಮತ್ತೊಂದು ನಿಫಾ ವೈರಸ್ ಪ್ರಕರಣ ಕಾಣಿಸಿಕೊಂಡಿದ್ದು, ಒಟ್ಟು ಸೋಂಕಿತರ ಸಂಖ್ಯೆ 5ಕ್ಕೆ ಏರಿದೆ. ಒಬ್ಬ ವ್ಯಕ್ತಿ ಸೆಪ್ಟೆಂಬರ್ 11 ರಂದು ಸಾವನ್ನಪ್ಪಿದರೆ, ಇನ್ನೊಬ್ಬರು ಆಗಸ್ಟ್ 30 ರಂದು ಸಾವನ್ನಪ್ಪಿದ್ದಾರೆ. ಸೆಪ್ಟೆಂಬರ್ 11 ರಂದು ಸಾವನ್ನಪ್ಪಿದ ವ್ಯಕ್ತಿಯ 9 ವರ್ಷದ ಮಗು ಮತ್ತು 24 ವರ್ಷದ ಸಂಬಂಧಿಯನ್ನು ನಿಫಾ ವೈರಸ್‌ ಪರೀಕ್ಷೆಗೆ ಒಳಪಡಿಸಲಾಯಿತು. ಐದು ಮಾದರಿಗಳನ್ನು ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ ಪರೀಕ್ಷೆಗಾಗಿ ಕಳುಹಿಸಲಾಗಿದೆ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದರು.


ರೋಗಿಗಳ ಸಂಪರ್ಕಕ್ಕೆ ಬಂದ ಸುಮಾರು 700 ಜನರ ಪಟ್ಟಿಯನ್ನು ತಯಾರಿಸಲಾಗಿದ್ದು, ಅದರಲ್ಲಿ 77 ಜನರನ್ನ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ.
ಬುಧವಾರ ಮತ್ತೊಂದು ನಿಫಾ ವೈರಸ್ ಪ್ರಕರಣ ಕಾಣಿಸಿಕೊಂಡಿದ್ದು, ಒಟ್ಟು ಸೋಂಕಿತರ ಸಂಖ್ಯೆ 5ಕ್ಕೆ ಏರಿದೆ.

ಸೋಂಕು ಹರಡುವುದನ್ನು ತಡೆಯಲು ರಾಜ್ಯ ಸರ್ಕಾರ ಕಂಟೈನ್‌ಮೆಂಟ್ ವಲಯಗಳನ್ನು ರಚಿಸಿದೆ ಎಂದು ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ. ಕೋಯಿಕ್ಕೋಡ್ ಜಿಲ್ಲೆಯಲ್ಲಿ ಸಾರ್ವಜನಿಕ ಉತ್ಸವಗಳು ಮತ್ತು ಇತರ ಕಾರ್ಯಕ್ರಮಗಳನ್ನು ನಿಷೇಧಿಸಲಾಗಿದೆ. ಜಿಲ್ಲೆಯ 9 ಪಂಚಾಯತ್‌ಗಳ 58 ವಾರ್ಡ್‌ಗಳನ್ನು ಕಂಟೈನ್‌ಮೆಂಟ್ ವಲಯಗಳನ್ನಾಗಿ ಮಾಡಲಾಗಿದೆ.


ಈ ಬಾರಿ ಕೇರಳದಲ್ಲಿ ಹರಡಿರುವ ನಿಫಾ ಸೋಂಕು ಬಾಂಗ್ಲಾದೇಶದ ತಳಿಯಾಗಿದೆ. 9 ವರ್ಷದ ಬಾಲಕ ನಿಫಾ ವೈರಸ್​ನಿಂದ ಬಳಲುತ್ತಿದ್ದು, ವೆಂಟಿಲೇಟರ್ ಬೆಂಬಲದಲ್ಲಿದೆ.


ನಿಫಾ ವೈರಸ್​​ನ ಸೋಂಕಿನ ಪ್ರಮಾಣ ಕಡಿಮೆ, ಆದರೆ ಸಾವಿನ ಪ್ರಮಾಣ ಹೆಚ್ಚು. 2018ರಲ್ಲಿ ಕೇರಳದಲ್ಲಿ ನಿಫಾ ಸೋಂಕು ಮೊದಲ ಬಾರಿಗೆ ಹರಡಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net