ವೇದಿಕೆಯಲ್ಲಿ ಹಾಡುತ್ತಲೇ ಎಡವಿ ಬಿದ್ದ ಪ್ರಿಯಾಂಕ ಪತಿ ನಿಕ್​, ವಿಡಿಯೋ ವೈರಲ್​​

nf
Published on

ಬಾಲಿವುಡ್​​​​ ಬ್ಯೂಟಿ ಪ್ರಿಯಾಂಕ ಪತಿ ನಿಕ್​​ ಜೋನಸ್​​ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ಆ್ಯಕ್ಟಿವ್​ ಆಗಿರುತ್ತಾರೆ. ಇನ್ನು ಇವರಿಬ್ಬರ ಜೋಡಿ ಸದಾ ಟ್ರೆಂಡಿಂಗ್​​​ನಲ್ಲಿರುತ್ತೆ. ಯಾಕಂದ್ರೆ ಇವರಿಬ್ಬರೂ ತಮ್ಮ ಮಗುವಿನ ಫೋಟೋವನ್ನ ಆಗಾಗ ಹಂಚಿಕೊಳ್ಳುತ್ತಿರ್ತಾರೆ.

ನಿಕ್​ ಬ್ರದರ್ಸ್​​​​ ಜೊತಯಾಗಿ ಮ್ಯೂಸಿಕಲ್​ ನೈಟ್​​ಗಳನ್ನ ಕೂಡಾ ಮಾಡುತ್ತಾರೆ. ನಿಕ್​ ಜೋನಸ್​ ಅವರ ಮ್ಯೂಸಿಕ್​​ ಬ್ಯಾಂಡ್​​ ಇದೆ. ಇನ್ನು ಇವರಿಬ್ಬರೂ ನಡೆಸುವ ಮ್ಯೂಸಿಕ್​ ಬ್ಯಾಂಡ್​​ಗೆ ವಿಶೇಷ ಫ್ಯಾನ್​​ ಬೇಸ್​​ ಕೂಡಾ ಇದೆ. ಕಾರ್ಯಕ್ರಮವನ್ನ ವೀಕ್ಷಿಸೋದಕ್ಕಾಗಿ ಜನರು ನಾ ಮುಂದು ತಾಮುಂದು ಎನ್ನುವಂತೆ ಮುಗಿ ಬೀಳ್ತಾರೆ.


ಜೋನಸ್​​ ಬ್ರದರ್ಸ್​​ ಇತ್ತೀಚೆಗಷ್ಟೆ ಹೊಸದಾದ ಮ್ಯೂಸಿಕ್​ ಟೂರ್​​ ಕೈಗೊಂಡಿದ್ದು, ಈಗಾಗಲೇ ಸಾಕಷ್ಟು ಕಾರ್ಯಕ್ರಮಗಳನ್ನ ನೀಡಿದ್ದಾರೆ. ನಿಕ್​​​ ಕಾರ್ಯಕ್ರಮವೊಂದನ್ನ ನಡೆಸುತ್ತಿದ್ದಾಗ ವೇದಿಕೆಯಲ್ಲಿ ಎಡವಿ ಬಿದ್ದ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.


ತಮ್ಮ ಕಾರ್ಯಕ್ರಮವನ್ನ ನಡೆಸುವಾಗ ಹಾಡುತ್ತಲೇ ವೇದಿಕೆಯ ತುದಿಗೆ ಬಂದಿದ್ದಾರೆ. ಹಾಡುತ್ತಿರುವಾಗ ಅವರ ಗಮನಕ್ಕೆ ಬಾರದೇ ಎಡವಿ ಬಿದ್ದಿದ್ದಾರೆ. ಆದರೂ ಏನೂ ಆಗೇ ಇಲ್ಲ ಎಂಬಂತೆ ಕೆಲವೇ ಸೆಕೆಂಡ್​​​ಗಳಲ್ಲಿ ಮತ್ತೆ ಹಾಡೋಕೆ ಪ್ರಾರಂಭಿಸಿದ್ದಾರೆ.


ಇತ್ತೀಚೆಗಷ್ಟೆ ಪತಿಯ ಹೊಸ ಮ್ಯೂಸಿಕ್​ ಟೂರ್​ಗೆ ಅಭಿನಂದನೆ ಸಲ್ಲಿಸಿದ ಪ್ರಿಯಾಂಕ ಚೋಪ್ರಾ ''ನಾನು ನಿಮ್ಮನ್ನು ಪಡೆಯಲು ಅದೃಷ್ಟಶಾಲಿ. ಹೊಸ ಮ್ಯೂಸಿಕ್​ ಟೂರ್​ ಪ್ರಾರಂಭಕ್ಕೆ ಅಭಿನಂದನೆಗಳು'' ಎಂದು ಬರೆದುಕೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net