ಎನ್‌ಐಎ ತಂಡ ಆಗಮನ ಸಾಧ್ಯತೆ

vijayanagara pallavi
ವಿಜಯನಗರದ ಮಂಜುನಾಥ ರಾವ್ ಪತ್ನಿ ಪಲ್ಲವಿ
Published on

ಶಿವಮೊಗ್ಗ: ಕಾಶ್ಮೀರದ ಪಹಲ್ಗಾಮ್‌ನಲ್ಲಿನ ಉಗ್ರರ ಕೃತ್ಯಕ್ಕೆ ಸಂಬಂಧಿಸಿ ನಮ್ಮ ಮನೆಗೆ ಎನ್‌ಐಎ(ರಾಷ್ಟ್ರೀಯ ತನಿಖಾ ದಳ) ಅಧಿಕಾರಿಗಳ ತಂಡ ಭೇಟಿ ನೀಡಲಿದೆ ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ ಎಂದು ವಿಜಯನಗರದ ಮಂಜುನಾಥ ರಾವ್ ಪತ್ನಿ ಪಲ್ಲವಿ ಹೇಳಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಇಬ್ಬರು ಪೊಲೀಸರು ಮನೆಗೆ ಬಂದು ಎನ್‌ಐಎ ತಂಡ ಬರುವುದಾಗಿ ತಿಳಿಸಿದ್ದಾರೆ. ಆದರೆ ಎಷ್ಟೊತ್ತಿಗೆ ಬರುತ್ತಾರೆಂಬ ಮಾಹಿತಿ ತಿಳಿಸಿಲ್ಲ ಎಂದರು.

ಉಗ್ರಗಾಮಿಗಳು ತೆರಳುವಾಗ ನಾನು ಹಮೇ ಭಿ ಮಾರ್ ದೋ ಎಂದು ಹೇಳಿದೆ. ಆಗ ನನ್ನ ಮಗ ಅವರ ಬಳಿ ಕುತ್ತೆ ಹಮೇ ಮಾರೋ ಎಂದು ಹೇಳಿದ್ದು ನಿಜ. ಇದನ್ನು ನಿಜ ಎಂದು ಸಾಬೀತುಪಡಿಸಲು ನಾನು ವಿಡಿಯೋ ಮಾಡಬೇಕಿತ್ತು ಅಷ್ಟೇ ಎಂದು ಬೇಸರ ವ್ಯಕ್ತಪಡಿಸಿದರು. ಈಗಾಗಲೇ ಹಲವಾರು ನೆಗೆಟಿವ್ ಕಾಮೆಂಟ್ಸ್‌ಗಳು ವಿನಾಕಾರಣ ಬಂದಿವೆ ಎಂದು ಮೌನಕ್ಕೆ ಜಾರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net