ಕಲ್ಯಾಣ ಕರ್ನಾಟಕದಲ್ಲಿ ಶೋಧ ನಡೆಸುತ್ತಿರುವ ಎನ್‌ಐಎ

Rameshwaram NIA
Published on

ಬೆಂಗಳೂರು: ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣ ತನಿಖೆ ಕೈಗೊಂಡಿರುವ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಅಧಿಕಾರಿಗಳು ಮತ್ತು ಸಿಸಿಬಿ ಪೊಲೀಸರು ಶಂಕಿತನಿಗಾಗಿ ಹೈದರಾಬಾದ್(ಕಲ್ಯಾಣ ಕರ್ನಾಟಕ) ಕರ್ನಾಟಕದಲ್ಲಿ ಶೋಧ ನಡೆಸಿದ್ದಾರೆ.
ಶಂಕಿತ ಬೆನ್ನತ್ತಿರುವ ಎನ್‌ಐಎ ಅಧಿಕಾರಿಗಳು ಕಲಬುರಗಿಯಲ್ಲಿ ಬೀಡುಬಿಟ್ಟು ಶೋಧ ನಡೆಸಿದ್ದಾರೆ. ಶಂಕಿತ ಕೆಕೆಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸಿರುವ ಮಾಹಿತಿ ಸಿಕ್ಕಿರುವ ಹಿನ್ನೆಲೆಯಲ್ಲಿ ಬಸ್‌ನ ಚಾಲಕ ಮತ್ತು ನಿರ್ವಾಹಕನನ್ನು ವಿಚಾರಣೆ ನಡೆಸಿ ಮಾಹಿತಿ ಪಡೆದುಕೊಂಡಿದ್ದಾರೆ. ಕೆೆ ಸ್ಫೋಟಗೊಂಡ ದಿನವೇ ಶಂಕಿತ ಹೊರ ರಾಜ್ಯಕ್ಕೆ ಹೋಗಿದ್ದಾನೆ ಎನ್ನಲಾಗಿದೆ.
೪ ಬ್ರಾಂಚ್ ಸಿಸಿ ಕ್ಯಾಮರಾ ದೃಶ್ಯ ವಶ:
ಶಂಕಿತ ರಾಮೇಶ್ವರಂ ಕೆೆಯ ನಾಲ್ಕು ಶಾಖೆಗಳಿಗೂ ಭೇಟಿ ನೀಡಿರುವ ಶಂಕೆಯ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿರುವ ರಾಜಾಜಿನಗರ, ಇಂದಿರಾನಗರ, ಕುಂದಲಹಳ್ಳಿ ಹಾಗೂ ಜೆಪಿನಗರದ ಶಾಖೆಗಳಿಗೆ ಎನ್‌ಐಎ ಅಧಿಕಾರಿಗಳು ಭೇಟಿ ನೀಡಿ ಸುಮಾರು ೨೦ ದಿನಗಳ ದೃಶ್ಯಾವಳಿಗಳನ್ನು ವಶಕ್ಕೆ ಪಡೆದುಕೊಂಡು ಪರಿಶೀಲನೆ ನಡೆಸಿದ್ದಾರೆ.
೨೦ ದಿನದಲ್ಲಿ ಎಷ್ಟು ಬಾರಿ ಬಂದು ಹೋಗಿದ್ದಾನೆ. ಯಾವ ಯಾವ ಬ್ರಾಂಚ್‌ಗೆ ಬಂದು ಹೋಗಿರಬಹುದು. ಯಾವ ಬ್ರಾಂಚ್‌ಗೆ ಎಷ್ಟೆಷ್ಟು ಸಲ ಬಂದಿರಬಹುದು ಎಂದು ಪರಿಶೀಲನೆ ನಡೆಸಿದ್ದಾರೆ. ಶಂಕಿತ ಕುಂದಲಹಳ್ಳಿ ಬ್ರಾಂಚ್ ಟಾರ್ಗೆಟ್ ಮಾಡಲು ಕಾರಣವೇನು ಎಂದು ತನಿಖೆ ಕೈಗೊಂಡಿದ್ದಾರೆ. ಮತ್ತೊಂದೆಡೆ ಶನಿವಾರದಿಂದ ಕುಂದಲಹಳ್ಳಿಯಲ್ಲಿರುವ ರಾಮೇಶ್ವರ ಕೆಫೆ ಆರಂಭವಾಗಿದ್ದು, ಕೆೆಗೆ ಜನಪ್ರೀಯತೆ ಹೆಚ್ಚಾಗಿರುವುದರಿಂದ ಮೊದಲಿಗಿಂತಲೂ ಹೆಚ್ಚಿನ ಗ್ರಾಹಕರು ಕೆಫೆಗೆ ಭೇಟಿ ಕೊಟ್ಟು ವಿವಿಧ ಬಗೆಯ ತಿಂಡಿಗಳ ರುಚಿಯನ್ನು ಸವಿಯುತ್ತಿದ್ದಾರೆ. ಅಲ್ಲದೇ ಬಾಂಬ್ ಸ್ಫೋಟವಾದ ಸ್ಥಳಕ್ಕೆ ತೆರಳಿ ಕುತೂಹಲದಿಂದ ನೋಡಿ ಆ ಭಾಗದಲ್ಲಿ ನಿಂತು ಫೋಟೋ ಮತ್ತು ವಿಡಿಯೋಗಳನ್ನು ತೆಗೆದುಕೊಳ್ಳುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net