ಪರಿಹಾರ ನೀಡುವಲ್ಲಿ ತಾರತಮ್ಯ: ಯೋಜನಾ ನಿರ್ದೇಶಕರ ವಿರುದ್ಧ ಭೂ ಮಾಲೀಕರ ಆರೋಪ

9 bidadi photo 1
Published on

ಬಿಡದಿ : ಭೂ ಮಾಲೀಕರಿಗೆ ಪರಿಹಾರ ವಿತರಣೆಯಲ್ಲಿ ರಾಷ್ಟ್ರೀಯ ಹೆದ್ದಾರಿ 275ರ ಯೋಜನಾ ನಿರ್ದೇಶಕ ಶ್ರೀಧರ್ ಅನ್ಯಾಯ ಎಸಗಿದ್ದಾರೆ ಎಂದು ಆರೋಪಿಸಿ ಮತ್ತು ಅವೈಜ್ಞಾನಿಕ ಕಾಮಗಾರಿ ವಿರೋಧಿಸಿ ಭೂ ವಾಲೀಕರು ಮತ್ತು ನೂರಾರು ಸಾರ್ವಜನಿಕರು ಕಾಮಗಾರಿ ನಡೆಯುತ್ತಿರುವ ಕೆಂಚನಗುಪ್ಪೆ ಬಳಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಭೂಮಿಯ ಮಾರುಕಟ್ಟೆ ಬೆಲೆ ಯೋಜನಾ ನಿರ್ದೇಶಕರಿಗೆ ತಿಳಿದಿದ್ದರೂ ಭೂ ಮಾಲೀಕರಿಗೆ ಉದ್ದೇಶಪೂರ್ವಕವಾಗಿ ಕಡಿಮೆ ಪರಿಹಾರ ವಿತರಿಸಲಾಗುತ್ತಿದೆ.

ಭಾರತ ಸರ್ಕಾರದ 2013 ಭೂಸ್ವಾಧೀನ ಕಾಯ್ದೆಯಂತೆ ಭೂಸ್ವಾಧೀನಗೊಂಡ ಸ್ವತ್ತುಗಳಿಗೆ ಪರಿಹಾರ ನಿಗದಿ ವಾಡದಂತೆ ಭೂ ಸ್ವಾಧೀನಾಧಿಕಾರಿಗಳ ಮೇಲೆ ಒತ್ತಡ ಹಾಕಿ ರೈತರಿಗೆ ಅನ್ಯಾಯ ವಾಡುವಲ್ಲಿ ಶ್ರೀಧರ್ ಕೈವಾಡವಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿದ ಶಾಸಕ ಎ.ಮಂಜುನಾಥ್, ಹೆದ್ದಾರಿ ಪ್ರಾಧಿಕಾರದ ರಸ್ತೆ ನಿರ್ವಾಣಕ್ಕೆ ಭೂಮಿಯ ವಿಷಯವಾಗಿ ನಾನು ಮತ್ತು ಸಂಸದರು ಅಧಿಕಾರಿಗಳ ಸಭೆ ನಡೆಸಿದೆವು. ಅಂದು ಪುರಸಭೆ ಮಟ್ಟದಲ್ಲಿ ಭೂಮಿಗೆ ಬೆಲೆ ನಿಗದಿ ವಾಡಿರುವುದು ಸಮಂಜಸವಲ್ಲ. ಮಂಚನಾಯ್ಕನಹಳ್ಳಿ, ಶೇಷಗಿರಿಹಳ್ಳಿ, ಮಾಯಗಾನಹಳ್ಳಿ ಭಾಗದಲ್ಲಿ ನೀಡಿರುವಂತೆ ಪರಿಹಾರ ನೀಡುತ್ತೇವೆ ಎಂದು ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ ಮಾತಿನಂತೆ ನಡೆಯಲಿಲ್ಲ.

ಅಷ್ಟೆ ಅಲ್ಲದೆ ಪ್ರಭಾವಿಗಳಿಗೆ ಎಕರೆಗೆ 17 ಕೋಟಿ ರೂ. ನೀಡಿ ಮತ್ತೆ ಹೆಚ್ಚುವರಿಯಾಗಿ 28 ಕೋಟಿ ರೂ. ನೀಡಿರುವ ಉದಾಹರಣೆಗಳಿವೆ. ಬಿಲ್ಡರ್‌ಗಳಿಗೆ ಒಂದು ದರ, ರೈತರಿಗೆ ಒಂದು ದರ ನಿಗದಿವಾಡಿ ಅನ್ಯಾಯ ಎಸಗಿದ್ದಾರೆ ಎಂದರು.

ಪುರಸಭೆ ಮಾಜಿ ಸದಸ್ಯರಾದ ಬಿ.ಎಂ.ರಮೇಶ್‌ಕುವಾರ್, ಟಿ.ಕುಮಾರ್, ದೇವರಾಜು, ರಮೇಶ್, ತಾಪಂ ವಾಜಿ ಅಧ್ಯಕ್ಷ ಡಿ.ನಾಗರಾಜು, ಚಿಕ್ಕಣ್ಣಯ್ಯ, ಕೆಂಪಣ್ಣ, ರವಿಕುಮಾರ್, ನರಸಿಂಹಯ್ಯ, ಶೇಷಪ್ಪ, ಬಾಲಾಜಿ, ಯೋಗಾನಂದ, ನಾಗರಾಜು, ಧನಂಜಯ್ಯ, ರಮೇಶ್, ಕೆಂಚನಕುಪ್ಪೆ ರಾಮಣ್ಣ, ನಿಖಿಲ್‌ಸಜ್ಜೆಲಿಂಗಯ್ಯ, ನಾರಾಯಣಪ್ಪ, ಶಿವಣ್ಣ, ನರಸಿಂಹಯ್ಯ, ಮರಿಯಪ್ಪ, ಮಲ್ಲಪ್ಪ, ಗುರುಮಲ್ಲಯ್ಯ ಸೇರಿ ಹೆದ್ದಾರಿ ರಸ್ತೆ ಹಾದು ಹೋಗಿರುವ ಕೇತಿಗಾನಹಳ್ಳಿ, ಆವರಗೆರೆ, ಕೆಂಚನಕುಪ್ಪೆ, ನರಸೇಗೌಡನದೊಡ್ಡಿ, ದಾಸಪ್ಪನದೊಡ್ಡಿ, ಕಲ್ಲುಗೋಪಹಳ್ಳಿಯ ಅನ್ಯಾಯಕ್ಕೆ ಒಳಗಾದ ನೂರಾರು ಗ್ರಾಮಸ್ಥರು ಪ್ರತಿಭಟನೆಯಲ್ಲಿ ಭಾಗವಹಿಸಿ ಅಧಿಕಾರಿಗಳ ವಿರುದ್ಧ ೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕೋಟ್ಯಂತರ ಹಣ ವಂಚನೆ : ರೈತರಿಂದ ಭೂಸ್ವಾಧೀನ ಮಾಡಿಕೊಂಡ ಸ್ವತ್ತಿಗೆ ಪರಿಹಾರ ನೀಡದೆ ಪೊಲೀಸ್ ಬಲ ಬಳಸಿ ಕಾಮಗಾರಿ ಮಾಡುತ್ತಿದ್ದಾರೆ. ಯೋಜನಾ ನಿರ್ದೇಶಕರ ಶಿಾರಸಿನಂತೆ ಸ್ವಾಧೀನಪಡಿಸಿಕೊಂಡಿರುವ ಒಂದೊಂದು ಸ್ವತ್ತಿಗೆ ಒಂದೊಂದು ಮಾನದಂಡ ಅಳವಡಿಸಿಕೊಂಡು ಪರಿಹಾರ ನೀಡುವ ಮೂಲಕ ರೈತರಿಗೆ ಮೋಸ ಮಾಡಿ, ಬಿಲ್ಡರ್‌ಗಳಿಗೆ ಅನುಕೂಲ ಮಾಡಿದ್ದಾರೆ. ಸರ್ವೇ ನಂಬರ್ ಜಮೀನನ್ನು ನಿವೇಶನಗಳಾಗಿ ಪರಿವರ್ತನೆ ಮಾಡಿ ಪರಿಹಾರ ನೀಡಿದ್ದಾರೆ. ಇದು ಕಾನೂನುಬಾಹಿರವಾಗಿದೆ. ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಶಾಸಕರು, ಸಂಸದರು ಮತ್ತು ಸರ್ಕಾರವನ್ನೇ ದಾರಿ ತಪ್ಪಿಸಿ ಸಾವಿರಾರು ಕೋಟಿ ಹಣ ಲಪಟಾಯಿಸಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ವಾಡುವಂತೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಪತ್ರ ಬರೆಯಲಾಗಿದೆ ಎಂದು ಶಾಸಕ ಮಂಜುನಾಥ್ ತಿಳಿಸಿದರು.

ಹೆಚ್ಚುವರಿ 900 ಕೋಟಿ ರೂ.: ಅಂಡರ್‌ಪಾಸ್ ಅವ್ಯವಸ್ಥೆ, ಹಳ್ಳದ ನೀರು ರಸ್ತೆಯಲ್ಲಿ ಹರಿಯುವಂತೆ ಅವೈಜ್ಞಾನಿಕವಾಗಿ ಕಾಮಗಾರಿ ನಡೆಸಲಾಗಿದೆ. ಈಗಾಗಲೇ 900 ಕೋಟಿ ರೂ. ಹೆಚ್ಚುವರಿ ಖರ್ಚಾಗಿದೆ. ಇದಕ್ಕೆ ಯಾರು ಹೊಣೆ? ಇತ್ತ ರೈತರಿಗೆ ಹಣ ನೀಡಿಲ್ಲ. ಸರ್ವೀಸ್ ರಸ್ತೆ, ಚರಂಡಿ, ಹಳ್ಳದ ನೀರು ಹರಿಯಲು ಅನನುಕೂಲ, ಹಳ್ಳಿಗಳಿಗೆ ಸಂಪರ್ಕ ರಸ್ತೆ, ಅನುಮತಿ ಪಡೆಯದೆ ಕೆರೆಗಳ ಒತ್ತುವರಿ ಹೀಗೆ ಹಲವು ಸಮಸ್ಯೆಗಳಿದ್ದು, ಕೂಡಲೇ ಸಂಸದರು, ಕೇಂದ್ರ ಸಚಿವರು, ಸರ್ಕಾರದ ಕಾರ್ಯದರ್ಶಿಗಳು, ಜಿಲ್ಲಾಮಟ್ಟದ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಶಾಸಕ ಮಂಜುನಾಥ್ ಒತ್ತಾಯಿಸಿದರು.

ರೈತರಿಂದ ಭೂ ಸ್ವಾಧೀನಗೊಂಡ ಸ್ವತ್ತಿಗೆ ಸಮರ್ಪಕ ಪರಿಹಾರ ನೀಡುವಂತೆ ಹೋರಾಟ ನಡೆಸಲಾಗುತ್ತಿದೆ. ಹೆದ್ದಾರಿ ಪ್ರಾಧಿಕಾರದ ಎಸ್‌ಎಲ್‌ಒಗಳು ಸರ್ಕಾರಿ ಭೂಮಿಗೆ ದಾಖಲೆ ಸೃಷ್ಟಿಸಿ ಇನ್ನೂರು ಕೋಟಿ ರೂ. ಲೂಟಿ ಹೊಡೆದಿದ್ದಾರೆ. ಆ ಭ್ರಷ್ಟ ಅಧಿಕಾರಿಗಳ ವಿರುದ್ಧ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ವಿಧಾನಸೌಧ ಮುತ್ತಿಗೆ ಹಾಕಲಾಗುವುದು. ಬಿ.ಎಂ.ರಮೇಶ್ ಕುವಾರ್ ಪುರಸಭೆ ಮಾಜಿ ಸದಸ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net