

ಬೆಂಗಳೂರು: ಹಿಂದಿನ ಟೆಕ್ ಸಮ್ಮೇಳನದಲ್ಲಿ ಕಲಿತಿದ್ದನ್ನು ಈ ಬಾರಿ ಬಳಸಿಕೊಂಡಿದ್ದೇವೆ. ಈ ಬಾರಿ ಕಲಿತಿದ್ದನ್ನು ಮುಂದಿನ ಬಾರಿ ಅಳವಡಿಸಿಕೊಂಡು ಇನ್ನೂ ದೊಡ್ಡ ಮಟ್ಟದಲ್ಲಿ ಸ್ಟಷ್ಟ ಗುರಿಯೊಂದಿಗೆ ಟೆಕ್ ಶೃಂಗಸಭೆಯನ್ನು ಮುಂದಿನ ಸಾಲಿನಲ್ಲಿ ಆಯೋಜಿಸಲಾಗುತ್ತದೆ ಎಂದು ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಮ್ಮೇಳನದ ಸಮಾರೋಪಕ್ಕೆ ಮುನ್ನ ವಿವರಣೆ ನೀಡಿದ ಅವರು, ವಿಶೇಷ ಹಾಗೂ ವಿಭಿನ್ನವಾಗಿ ಶೃಂಗಸಭೆ ನಡೆದಿದೆ. ಈ ಹಿಂದಿಗಿಂತ ಹೆಚ್ಚು ದೇಶಗಳು ಪಾಲ್ಗೊಂಡಿವೆ. 21 ದೇಶಗಳ ಅಧಿಕಾರಿಗಳು, ಉದ್ಯಮಿಗಳು, ಸಂಶೋಧಕರನ್ನೊಳಗೊಂಡ ನಿಯೋಗಗಳು ಹಾಜರಿದ್ದಿದ್ದು ಈ ಕಾರ್ಯಕ್ರಮದ ಮಹತ್ವವನ್ನು ಎತ್ತಿ ತೋರಿಸಿದೆ ಎಂದರು.
30ಕ್ಕೂ ಹೆಚ್ಚು ದೇಶಗಳೊಂದಿಗೆ ಕರ್ನಾಟಕದ ಅಂತರಾಷ್ಟ್ರೀಯ ಪಾಲುದಾರಿಕೆಯನ್ನು ಮಾಡಿಕೊಂಡಿತು. ಇದರಿಂದ ನಾವೀನ್ಯತೆ, ಸಂಶೋಧನೆ ಮತ್ತು ತಂತ್ರಜ್ಞಾನದಲ್ಲಿ ಸಹಯೋಗವನ್ನು ಪಡೆಯಬಹುದಾಗಿದೆ. ಸ್ವೀಡನ್-ಇಂಡಿಯಾ ಬ್ಯುಸಿನೆಸ್ ಕೌನ್ಸಿಲ್ ನಿಯೋಗವು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಡೀಪ್‌ಟೆಕ್, ಬಯೋಟೆಕ್ ಮತ್ತು ಮೆಡ್‌ಟೆಕ್, ಮತ್ತು ಹೆಲ್ತ್‌ಕೇರ್ ಸೇರಿದಂತೆ ವಲಯಗಳಿಂದ ವೈವಿಧ್ಯಮಯ ಶ್ರೇಣಿಯ ಸ್ಟಾರ್ಟ್‌ಅಪ್‌ಗಳನ್ನು ತಂದಿತ್ತು. ಫಿನ್‌ಲ್ಯಾಂಡ್ ಮತ್ತು ಸ್ವಿಟ್ಜರ್‌ಲ್ಯಾಂಡ್‌ನೊಂದಿಗೆ ಎಂಒಯುಗಳಿಗೆ ಸಹಿ ಹಾಕಲಾಯಿತು. ್ರಾನ್ಸ್ ಹಾಗೂ ಯೂರೋಪಿಯನ್ ಯೂನಿಯನ್ ಜತೆಗಿನ ಸಹಭಾಗಿತ್ವ ಸಂಬಂಧ ನಿರ್ಣಯಗಳಾದವು ಎಂದು ವಿವರಿಸಿದರು.
ಕಳೆದ ಟೆಕ್ ಸಮ್ಮೇಳನದಲ್ಲಿ ನೀತಿಗಳ ಕುರಿತು ಚರ್ಚೆ ನಡೆಯಿತು. ಅದನ್ನು ಈ ಬಾರಿ ಅಳವಡಿಕೊಂಡು ಜಿಸಿಸಿ ಪಾಲಿಸಿ ಪ್ರಸ್ತಾಪಿಸಲಾಗಿದೆ, ಬಾಹ್ಯಾಕಾಶ ನೀತಿ ೋಷಿಸಲಾಗಿದೆ. ರೌಂಡ್ ಟೇಬಲ್ ಸಭೆಗೆ ಆದ್ಯತೆ ನೀಡಲಾಗಿದೆ. ಅದೇ ರೀತಿ ಮುಂದಿನ ವರ್ಷದಿಂದ ಸ್ಟಾರ್ಟಪ್ ಪ್ರಶಸ್ತಿ ನೀಡಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
ಡಿಸೆಂಬರ್‌ನಲ್ಲಿ ಇಂಡಸ್ ಉದ್ಯಮಿಗಳ ಜಾಗತಿಕ ಶೃಂಗಸಭೆ ಬೆಂಗಳೂರು ಹಾಗೂ ಮೈಸೂರಿನಲ್ಲಿ ನಡೆಯುತ್ತಿದೆ. 10 ಸಾವಿರಕ್ಕೂ ಅಧಿಕ ಸ್ಟಾರ್ಟ್‌ಅಪ್‌ಗಳಿಗೆ ಈ ಕಾರ್ಯಕ್ರಮ ವೇದಿಕೆಯಲಾಗಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಇಲಾಖೆ ಕಾರ್ಯದರ್ಶಿ ಏಕರೂಪ್ ಕೌರ್, ನಿರ್ದೇಶಕ ದರ್ಶನ್, ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ ಹಾಜರಿದ್ದರು.