

ಎಲ್ಲರೂ ಬೆಳಗಿನ ಜಾವದ ಸವಿನಿದ್ರೆಯಲ್ಲಿ ಇರುವಾಗ ತಾವು ಮಾತ್ರ ಚಳಿ-ಮಳೆ ಲೆಕ್ಕಿಸದೆ ಮನೆಮನೆಗೆ ದಿನಪತ್ರಿಕೆಗಳನ್ನು ತಲುಪಿಸುವ ಶ್ರಮಜೀವಿಗಳು ಪತ್ರಿಕಾ ವಿತರಕರು. ಜಗತ್ತಿಗೆಲ್ಲ ವಾರಾಂತ್ಯ, ಹಬ್ಬ, ಹರಿದಿನಗಳೆಂಬ ಹತ್ತು-ಹಲವು ರಜೆ ಸಿಕ್ಕರೂ, ಇವರದು ಮಾತ್ರ ವರ್ಷ ಪೂರ್ತಿ ಬಿಡುವೇ ಇಲ್ಲದ
ವಯಸ್ಸು 65 ವರ್ಷವಾದರೂ ಓದುಗರಿಗೆ ಪತ್ರಿಕೆ ತಲುಪಿಸುವ ಕೆಲಸ ಮಾತ್ರ ಬಿಟ್ಟಿಲ್ಲ. ಇವರಿಗೆ ಹೆಚ್ಚು ಓದಲು ಸಾಧ್ಯವಾಗಲಿಲ್ಲವಾದರೂ 16ನೇ ವರ್ಷಕ್ಕೆ ಪತ್ರಿಕೆಗಳನ್ನು ಮನೆಮನೆಗೆ ತಲುಪಿಸುವ ಕಾಯಕ ಆಯ್ದುಕೊಂಡು ಜನರನ್ನು ಓದಿಗೆ ಹಚ್ಚುವುದರಲ್ಲೇ ಸಂತೃಪ್ತಿ ಕಂಡರು. ಇವರೇ ಹುಬ್ಬಳ್ಳಿ ರಾಮನಗರದ ನಿವಾಸಿ ವಾಸುದೇವ ವಿಷ್ಣುರಾವ್ ಢಗೆ. ಆರಂಭದಲ್ಲಿ ಸಹೋದರರು ಸೇರಿ 400 ಪತ್ರಿಕೆಯೊಂದಿಗೆ ಶುರು ಮಾಡಿದ ಈ ವೃತ್ತಿ ಈಗಲೂ ಮುಂದುವರಿಸಿದ್ದಾರೆ. ಪತ್ನಿ ಸರ್ಕಾರಿ ಶಾಲೆ ಶಿಕ್ಷಕಿ. ಇಬ್ಬರು ಪುತ್ರರು, ಓರ್ವ ಪುತ್ರಿಯರಿಗೆ ಇಂಜಿನಿಯರಿಂಗ್ ಓದಿಸಿದ್ದಾರೆ. ಅವರೀಗ ಉನ್ನತ ಸ್ಥಾನಕ್ಕೂ ಏರಿದ್ದಾರೆ. ಇಡೀ ಕುಟುಂಬ ಆರ್ಥಿಕವಾಗಿಯೂ ಸಾಕಷ್ಟು ಸುಧಾರಿಸಿದೆ. ಆದರೂ, ಅನ್ನ ನೀಡಿದ ಪತ್ರಿಕೆ ವಿತರಣೆ ಮೇಲಿನ ಅಭಿಮಾನ ಹಾಗೇ ಇದೆ. ಐದು ದಶಕಗಳಿಂದ ಪತ್ರಿಕೆ ವಿತರಣೆ ನಿಯತ್ತಿನಿಂದ ಮಾಡುತ್ತಿದ್ದೇನೆ. ಪತ್ರಿಕೆ ನನಗೆ ಅನ್ನ ನೀಡಿದ ದೇವರು. ಹಾಗಾಗಿ ಈಗಲೂ ಪತ್ರಿಕೆಯೊಂದಿಗೇ ನನ್ನ ದಿನಚರಿ ಆರಂಭವಾಗುತ್ತದೆ ಎಂದು ಹೆಮ್ಮೆಯಿಂದ ಹೇಳುತ್ತಾರೆ ವಾಸುದೇವ ಢಗೆ.