

ಬಳ್ಳಾರಿ ಜಿಲ್ಲೆ ಕೊಟ್ಟೂರಿನ ಉತ್ತಂಗಿ ಕೊಟ್ರೇಶ 37 ವರ್ಷಗಳಿಂದ ಪತ್ರಿಕಾ ವಿತರಕ-ಏಜೆಂಟರಾಗಿದ್ದು, ಅದರಲ್ಲೇ ಇವರ ಕುಟುಂಬದ ಜೀವನ ನಿರ್ವಹಣೆ ಸಾಗಿದೆ. 1983ರಲ್ಲಿ 60 ರೂ. ವೇತನ ಮೂಲಕ ವಿತರಕರಾಗಿ ಕೆಲಸ ಆರಂಭಿಸಿದರು. ಇದೀಗ ಇವರ ಬಳಿ 10 ವಿತರಕರಿದ್ದಾರೆ. ಸ್ಪಿನ್ನಿಂಗ್ ಮಿಲ್ನ ಕೆಲಸದ ಜತೆಗೆ ಪತ್ರಿಕೆ ವಿತರಣೆ ಜವಾಬ್ದಾರಿ ನಿರ್ವಹಿಸುತ್ತಿದ್ದರು. ಹತ್ತು ವರ್ಷಗಳ ಹಿಂದೆ ಮಿಲ್ ಮುಚ್ಚಿದ ಬಳಿಕ ಪತ್ರಿಕೆಗಳ ಏಜೆನ್ಸಿಯೇ ಜೀವನಾಧಾರವಾಗಿದೆ. 57 ವರ್ಷ ವಯಸ್ಸಿನ ಕೊಟ್ರೇಶ ಅವರ ಜತೆ ಹತ್ತು ಜನ ವಿತರಕರು ಕೆಲಸ ಮಾಡುತ್ತಿದ್ದರೂ ಯಾರಾದರೂ ಪೇಪರ್ ತಲುಪಿಲ್ಲ ಎಂದು ಕರೆ ಮಾಡಿದರೆ ಸ್ವತಃ ಹೋಗಿ ಕೊಟ್ಟು ಬರುತ್ತಾರೆ. ಕೇವಲ 10 ಪತ್ರಿಕೆಗಳ ಮೂಲಕ ಏಜೆನ್ಸಿ ಆರಂಭಿಸಿದ ಕೊಟ್ರೇಶ ಇದೀಗ ವಿಜಯವಾಣಿಯದ್ದೇ 680 ಪತ್ರಿಕೆಗಳನ್ನು ವಿತರಿಸುತ್ತಾರೆ.
ಎಲ್ಲರೂ ಬೆಳಗಿನ ಜಾವದ ಸವಿನಿದ್ರೆಯಲ್ಲಿ ಇರುವಾಗ ತಾವು ಮಾತ್ರ ಚಳಿ-ಮಳೆ ಲೆಕ್ಕಿಸದೆ ಮನೆಮನೆಗೆ ದಿನಪತ್ರಿಕೆಗಳನ್ನು ತಲುಪಿಸುವ ಶ್ರಮಜೀವಿಗಳು ಪತ್ರಿಕಾ ವಿತರಕರು. ಜಗತ್ತಿಗೆಲ್ಲ ವಾರಾಂತ್ಯ, ಹಬ್ಬ, ಹರಿದಿನಗಳೆಂಬ ಹತ್ತು-ಹಲವು ರಜೆ ಸಿಕ್ಕರೂ, ಇವರದು ಮಾತ್ರ ವರ್ಷ ಪೂರ್ತಿ ಬಿಡುವೇ ಇಲ್ಲದ