

ಎಲ್ಲರೂ ಬೆಳಗಿನ ಜಾವದ ಸವಿನಿದ್ರೆಯಲ್ಲಿ ಇರುವಾಗ ತಾವು ಮಾತ್ರ ಚಳಿ-ಮಳೆ ಲೆಕ್ಕಿಸದೆ ಮನೆಮನೆಗೆ ದಿನಪತ್ರಿಕೆಗಳನ್ನು ತಲುಪಿಸುವ ಶ್ರಮಜೀವಿಗಳು ಪತ್ರಿಕಾ ವಿತರಕರು. ಜಗತ್ತಿಗೆಲ್ಲ ವಾರಾಂತ್ಯ, ಹಬ್ಬ, ಹರಿದಿನಗಳೆಂಬ ಹತ್ತು-ಹಲವು ರಜೆ ಸಿಕ್ಕರೂ, ಇವರದು ಮಾತ್ರ ವರ್ಷ ಪೂರ್ತಿ ಬಿಡುವೇ ಇಲ್ಲದ
ರಾಮನಗರ ಜಿಲ್ಲೆ ಕನಕಪುರ ಸಾತನೂರಿನ ಎಸ್. ನಾಗೇಂದ್ರ 25 ವರ್ಷಗಳಿಂದ ಬೆಂಗಳೂರಿನ ವಿಜಯನಗರ ಕೇಂದ್ರದಲ್ಲಿ ಪತ್ರಿಕಾ ವಿತರಕರಾಗಿದ್ದು, ‘ಇದೇ ನನ್ನ ಜೀವನ, ಇದೇ ನನ್ನ ಸರ್ವಸ್ವ’ ಎಂದು ನಂಬಿದ್ದಾರೆ. 18ನೇ ವಯಸ್ಸಿಗೆ ಈ ವೃತ್ತಿಯಲ್ಲಿ ತೊಡಗಿಸಿಕೊಂಡ ನಾಗೇಂದ್ರ, ‘ಇದರಲ್ಲೇ ಇಷ್ಟು ದಿನ ಕೆಲಸ ಮಾಡಿದ್ದೇವೆ. ಯಾರು ಏನೇ ಹೇಳಲಿ, ಪತ್ರಿಕೆ ವಿತರಕನಾಗಿ ಕಾರ್ಯನಿರ್ವಹಿಸುತ್ತಿರುವುದಕ್ಕೆ ಸಂತೋಷವಿದೆ’ ಎನ್ನುತ್ತಾರೆ. 52ನೇ ವಯಸ್ಸಲ್ಲೂ ಚಟುವಟಿಕೆಯಿಂದ ಕಾರ್ಯನಿರ್ವಹಿಸುವ ಇವರು, ಪತ್ರಿಕಾ ವಲಯದಲ್ಲಿ ಗುರುತಿಸಿ ಕೊಂಡಿದ್ದರಿಂದ ಸಮಾಜದಲ್ಲಿ ಗೌರವ ಹೆಚ್ಚಾಗಿದೆ ಎಂಬ ಸಂತೋಷ ವ್ಯಕ್ತಪಡಿಸಿದ್ದಾರೆ. ಕರೊನಾ ವೇಳೆ ಕೆಲವರು ಪ್ರತಿ ಬೇಡ ಎಂದಿದ್ದರು, ಈಗ ಮತ್ತೆ ಕೇಳುತ್ತಿದ್ದಾರೆ. ಒಟ್ಟು 92 ಹಂಚಿಕೆದಾರರು ಇದ್ದಾರೆ, ಮೊದಲು ಸೈಕಲ್ ನಿಂದ ಆರಂಭವಾದ ಈ ವೃತ್ತಿ ಇದೀಗ ಟಿವಿಎಸ್ ವಾಹನದ ಮೂಲಕ ನಡೆಯುತ್ತಿದೆ ಎನ್ನುತ್ತಾರೆ ನಾಗೇಂದ್ರ.