

ಎಲ್ಲರೂ ಬೆಳಗಿನ ಜಾವದ ಸವಿನಿದ್ರೆಯಲ್ಲಿ ಇರುವಾಗ ತಾವು ಮಾತ್ರ ಚಳಿ-ಮಳೆ ಲೆಕ್ಕಿಸದೆ ಮನೆಮನೆಗೆ ದಿನಪತ್ರಿಕೆಗಳನ್ನು ತಲುಪಿಸುವ ಶ್ರಮಜೀವಿಗಳು ಪತ್ರಿಕಾ ವಿತರಕರು. ಜಗತ್ತಿಗೆಲ್ಲ ವಾರಾಂತ್ಯ, ಹಬ್ಬ, ಹರಿದಿನಗಳೆಂಬ ಹತ್ತು-ಹಲವು ರಜೆ ಸಿಕ್ಕರೂ, ಇವರದು ಮಾತ್ರ ವರ್ಷ ಪೂರ್ತಿ ಬಿಡುವೇ ಇಲ್ಲದ
ಉಡುಪಿ ಜಿಲ್ಲೆ ಕುಂದಾಪುರದ ಜನ್ನಾಡಿಯಲ್ಲಿ 42 ವರ್ಷಗಳಿಂದ ಪತ್ರಿಕೆ ವಿತರಕರಾಗಿ ಸಾರ್ಥಕ ಜೀವನ ನಡೆಸುತ್ತಿದ್ದಾರೆ ಜಿ. ಮಂಜುನಾಥ್ ಶೆಣೈ ಜನ್ನಾಡಿ. ತಂತ್ರಜ್ಞಾನ, ವಾಹನ ಸೌಲಭ್ಯ ಇಲ್ಲದ ಕಾಲದಲ್ಲಿ ಮುಂಜಾನೆ 4ಕ್ಕೆ ಎದ್ದು ಗ್ರಾಮೀಣ ಭಾಗದ ಮೂಲೆ ಮೂಲೆಗೂ ತೆರಳಿ, ಮಳೆ-ಗಾಳಿ-ಚಳಿ ಲೆಕ್ಕಿಸದೆ ಸರಿಯಾದ ಸಮಯಕ್ಕೆ ಪತ್ರಿಕೆ ತಲುಪಿಸುತ್ತಿದ್ದವರು ಇವರು. ಸುತ್ತಲ ಕಾಡು, ಗುಡ್ಡ, ಹಳ್ಳಿ ಸೇರಿ 25-30 ಕಿ.ಮೀ. ವರೆಗೆ ಸೈಕಲ್ನಲ್ಲೇ ಸಂಚರಿಸುವ ಕಾರ್ಯವ್ಯಾಪ್ತಿ ಇವರದ್ದು. ಇಳಿ ವಯಸ್ಸಿನಲ್ಲಿ, ಎಂಥ ಕಷ್ಟದಲ್ಲೂ ಸೈಕಲ್ನಲ್ಲೇ ಮನೆಗಳಿಗೆ ತೆರಳಿ ಸುದ್ದಿ ಮುಟ್ಟಿಸುವ ಗಟ್ಟಿತನ ಶೆಣೈ ಅವರದ್ದು. ಹೈನುಗಾರಿಕೆ, ಕೃಷಿ ಇವರ ನೆಚ್ಚಿನ ಕಾಯಕ. ಪತ್ರಿಕೆ ವಿತರಣೆ ಜತೆಗೆ ವರದಿಗಾರಿಕೆ ಮೂಲಕ ಗ್ರಾಮೀಣ ಜನರ ಸಮಸ್ಯೆಗೆ ದನಿಯಾಗಿ, ಸ್ಥಳೀಯರ ಪ್ರೀತಿಗೂ ಪಾತ್ರರಾಗಿದ್ದಾರೆ. ಇಳಿ ವಯಸ್ಸಿನಿಂದಾಗಿ ಪತ್ರಿಕೆ ವಿತರಣೆಗೆ 7 ವರ್ಷಗಳಿಂದ ಈಚೆಗೆ ಇಬ್ಬರನ್ನು ಕೆಲಸಕ್ಕಿರಿಸಿಕೊಂಡಿದ್ದೇನೆ. ಪತ್ರಿಕೆ ವಿತರಣೆಗಾಗಿ ಬೆಳಗ್ಗೆ ಬೇಗ ಏಳುವುದು, ಸೈಕಲ್ ಸವಾರಿ ಉತ್ತಮ ಆರೋಗ್ಯ ನೀಡಿದೆ ಎನ್ನುತ್ತಾರೆ ಶೆಣೈ.