

ಎಲ್ಲರೂ ಬೆಳಗಿನ ಜಾವದ ಸವಿನಿದ್ರೆಯಲ್ಲಿ ಇರುವಾಗ ತಾವು ಮಾತ್ರ ಚಳಿ-ಮಳೆ ಲೆಕ್ಕಿಸದೆ ಮನೆಮನೆಗೆ ದಿನಪತ್ರಿಕೆಗಳನ್ನು ತಲುಪಿಸುವ ಶ್ರಮಜೀವಿಗಳು ಪತ್ರಿಕಾ ವಿತರಕರು. ಜಗತ್ತಿಗೆಲ್ಲ ವಾರಾಂತ್ಯ, ಹಬ್ಬ, ಹರಿದಿನಗಳೆಂಬ ಹತ್ತು-ಹಲವು ರಜೆ ಸಿಕ್ಕರೂ, ಇವರದು ಮಾತ್ರ ವರ್ಷ ಪೂರ್ತಿ ಬಿಡುವೇ ಇಲ್ಲದ
ಪದ್ಮನಾಭ ನಗರದ ಮನೆಮನೆಗೆ ಬೆಳಗಾಗುವುದರೊಳಗೆ ಪತ್ರಿಕೆ ತಲುಪಿಸುವಲ್ಲಿ ಹಂಚಿಕೆದಾರ ಸತ್ಯ ಅವರ ಇಡೀ ಕುಟುಂಬವೇ ತೊಡಗಿರುವುದು ವಿಶೇಷ. ಕಳೆದ 27 ವರ್ಷಗಳಿಂದ ಪತ್ರಿಕೆ ಹಂಚಿದಾರರಾಗೇ ಸತ್ಯ ದಂಪತಿ ಕಾರ್ಯನಿರ್ವಹಿಸುತ್ತಿದ್ದಾರೆ. 14ನೇ ವಯಸ್ಸಿನಲ್ಲಿ ಈ ವೃತ್ತಿ ಆರಂಭಿಸಿದ ಇವರಿಗೆ, 500ಕ್ಕೂ ಅಧಿಕ ಮನೆಗೆ ಪತ್ರಿಕೆ ಹಾಕಲು ಹುಡುಗರ ಕೊರತೆ ಆದಾಗ ಸಾಥ್ ನೀಡಿದ್ದೇ ಪತ್ನಿ ಶ್ರೀಲಕ್ಷ್ಮೀ. ಮುಂಜಾನೆ ವಿತರಕ ಕೇಂದ್ರದಿಂದ ಪತ್ರಿಕೆಗಳನ್ನು ಪಡೆದು 200ಕ್ಕೂ ಅಧಿಕ ಮನೆಗಳಿಗೆ ಹಾಕಿ ಮನೆಗೆ ಹಿಂದಿರುಗಿ ಮನೆ ಕೆಲಸದಲ್ಲೂ ತೊಡಗಿಸಿಕೊಂಡು ಬಂದಿದ್ದಾರೆ. ಪತ್ನಿಗೆ ಹುಷಾರಿಲ್ಲದಾಗ ದ್ವಿತೀಯ ಪಿಯುಸಿ ಓದುತ್ತಿರುವ ಪುತ್ರಿಯೂ ಪತ್ರಿಕೆ ಹಂಚಿಕೆಯಲ್ಲಿ ಸಾಥ್ ನೀಡುತ್ತಾರೆ. ಪತ್ರಿಕೆ ಹಂಚಿದ ಬಳಿಕ ಸತ್ಯ ಆಟೋ ಚಲಾಯಿಸುತ್ತಾರೆ. ಪತ್ರಿಕೆ ಹಂಚಿಕೆ, ಚಂದಾರರ ಹಣದಿಂದಲೇ ಜೀವನ ನಡೆಸುತ್ತಿದ್ದೇವೆ. ಈ ಕೆಲಸದಲ್ಲಿ ತೃಪ್ತಿ ಮತ್ತು ಹೆಮ್ಮೆ ಇದೆ ಎನ್ನುತ್ತಾರೆ ಸತ್ಯ ದಂಪತಿ.