ಚೆನ್ನೈಯಲ್ಲೂ ಕೋವಿಡ್​ಗೆ ಕಡಿವಾಣ; ತಮಿಳುನಾಡಿನಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಭಾರಿ ಇಳಿಕೆ

Covid 19 Death
Published on

ಚೆನ್ನೈ: ಕರೊನಾದಿಂದಾಗಿ ದೇಶದಲ್ಲಿ ಮಹಾರಾಷ್ಟ್ರ ಹೊರತುಪಡಿಸಿದರೆ, ಅತ್ಯಂತ ಸಂಕಷ್ಟದ ಸ್ಥಿತಿಯಲ್ಲಿದ್ದ ತಮಿಳುನಾಡಿನಲ್ಲೀಗ, ಕೊಂಚ ಆಶಾಭಾವ ಮೂಡಿದೆ.

ಅದಕ್ಕಿಂತ ಮುಖ್ಯವಾಗಿ ರಾಜಧಾನಿ ಚೆನ್ನೈನಲ್ಲಿ ಹೊಸ ಕರೊನಾ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಇಳಿಕೆ ಕಂಡು ಬಂದಿದೆ. ಕೋವಿಡ್​ ರೋಗಿಗಳ ಸಂಖ್ಯೆ ದ್ವಿಗುಣಗೊಳ್ಳುವ ಅವಧಿಯಲ್ಲಿ ಭಾರಿ ಏರಿಕೆ ಕಂಡು ಬಂದಿದೆ.

ಚೆನ್ನೈಗೆ ಹೋಲಿಸಿದಲ್ಲಿ ಇತರ ಹಾಟ್​ಸ್ಪಾಟ್​ಗಳಲ್ಲಿ ಈ ಅವಧಿಯಲ್ಲಿ ಎರಡು ಪಟ್ಟಿಗಿಂತಲೂ ಹೆಚ್ಚಾಗಿದೆ. ಉದಾಹರಣೆಗೆ ರಾಯಪುರಂ ಹಾಗೂ ತೊಂಡಿಯಾರ್​ ಪೇಟ್​ ಕ್ರಮವಾಗಿ ಈ ಅವಧಿ 140 ಹಾಗೂ 28 ದಿನಗಳಾಗಿವೆ. ಇನ್ನಿ ಇಡೀ ನಗರವನ್ನು ಪರಿಗಣಿಸುವುದಾದರೆ ಈ ಸಮಯ 63 ದಿನಗಳದ್ದಾಗಿದೆ ಎಂದು ವರದಿಯಾಗಿದೆ.

ಸಾವಿನ ಸಂಖ್ಯೆಯಲ್ಲಿ ಏರಿಕೆ: ಹೊಸ ಪ್ರಕರಣಗಳ ಸಂಖ್ಯೆ ನಿಯಂತ್ರಣದಲ್ಲಿದೆ ಎಂದುಕೊಳ್ಳುತ್ತಿರುವಾಗಲೇ, ಸಾವಿನ ಸಂಖ್ಯೆ ಎರುತ್ತಿರುವುದು ಚಿಂತೆಗೀಡು ಮಾಡಿದೆ. ಕಳೆದ ಐದು ದಿನಗಳಲ್ಲಿ 500 ಜನರು ಮೃತಪಟ್ಟಿದ್ದರೆ, ಸೋಮವಾರ 109 ಜನರು ಕೋವಿಡ್​ಗೆ ಬಲಿಯಾಗಿದ್ದಾರೆ. ಆದರೆ ಸಾವಿನ ಸಂಖ್ಯೆ ಹೆಚ್ಚಾಗಲು ಕೋವಿಡ್​ನೊಂದಿಗೆ ಇತರ ದೀರ್ಘಕಾಲದ ಕಾಯಿಲೆಯಿಂದ ನರಳುತ್ತಿರುವುದೇ ಆಗಿದೆ ಎಂದು ಹೇಳಲಾಗಿದೆ.

ತಮಿಳುನಾಡಿನಲ್ಲಿ 2.68 ಲಕ್ಷ ಕೋವಿಡ್​ ರೋಗಿಗಳಿದ್ದರೆ, ಇದರಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಕೇವಲ 55,152 ಆಗಿದೆ. ಆದರೆ, ಕರ್ನಾಟಕದಲ್ಲಿ ಸಕ್ರಿಯ ಪ್ರಕರಣಗಳ 75 ಸಾವಿರ ದಾಟಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net