

ಮಧ್ಯಪ್ರದೇಶ: ಗ್ವಾಲಿಯರ್ನಲ್ಲಿ ಹೊಸದಾಗಿ ಮದುವೆಯಾದ ಯುವತಿಯೊಬ್ಬಳು ತನ್ನ ಪತಿ ಮಾಡಿದ ಪೋಹಾ ತಿನ್ನುವ ಆಸೆಯನ್ನು ವ್ಯಕ್ತಪಡಿಸಿದಳು, ಆದರೆ ಅವನು ಒಪ್ಪಲಿಲ್ಲ. ಇದರಿಂದ ಕೋಪಗೊಂಡ ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ನಲ್ಲಿ ನಡೆದಿದೆ.
ಬಾಲ್ಕಿಶನ್ ಜದೌನ್ ಎಂಬ ವ್ಯಕ್ತಿ ಫಾಫಾ ಕಾಲೋನಿಯಲ್ಲಿ ವಾಸಿಸುತ್ತಿದ್ದಾರೆ. ಬಾಲ್ಕಿಶನ್ ಒಂದು ವರ್ಷದ ಹಿಂದೆ ಕವಿತಾ ಎಂಬ ಹುಡುಗಿಯನ್ನು ಮದುವೆಯಾಗಿದ್ದ. ಕವಿತಾ ಪತಿ ಮಾಡಿದ ಪೋಹಾ( ಒಗ್ಗರಣೆ ಅವಲಕ್ಕಿ) ತಿನ್ನಬೇಕೆಂದು ಪತಿಗೆ ಹೇಳಿದಳು. ಗಂಡನಿಗೆ ಪೋಹ ಮಾಡಿ ಉಣಬಡಿಸುವಂತೆ ಕೇಳಿಕೊಂಡರೂ ಆತ ಕೇಳಲಿಲ್ಲ. ಪೋಹದ ಬದಲು ಅವಳ ಪತಿ ಅವಳಿಗೆ ತಿನ್ನಲು ( ಡ್ರೈಪ್ರೂಟ್ಸ್) ಒಣ ಹಣ್ಣುಗಳನ್ನು ಕೊಟ್ಟನು. ಇದರಿಂದ ಕೋಪಗೊಂಡ ಆಕೆ ಗಂಡನೊಂದಿಗೆ ಜಗಳವಾಡಿದಳು.
ಈ ವಿಚಾರವಾಗಿ ಕವಿತಾ ತನ್ನ ಪತಿಯೊಂದಿಗೆ ಜಗಳವಾಡತೊಡಗಿದಳು. ಇದಾದ ನಂತರ ಬೇರೆ ಕೋಣೆಗೆ ಹೋದವಳು ಬಹಳ ಹೊತ್ತಾದರೂ ಕೋಣೆಯಿಂದ ಹೊರಗೆ ಬರಲಿಲ್ಲ. ಪತಿ ಹೋಗಿ ನೋಡಿದಾಗ ಬೆಚ್ಚಿಬಿದ್ದಿದ್ದಾನೆ. ಕವಿತಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಬಳಿಕ ಪೊಲೀಸರು ಹಾಗೂ ಕುಟುಂಬಸ್ಥರಿಗೆ ಘಟನೆ ಕುರಿತು ಮಾಹಿತಿ ನೀಡಿದ್ದಾರೆ.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಿರಂಜನ್ ಶರ್ಮಾ ಅವರ ಪ್ರಕಾರ, ಬಾಲ್ಕಿಶನ್ ಮುರಾರ್ ಠಾಣೆಗೆ ಆಗಮಿಸಿ ಪೋಲಿಸರಿಗೆ ಪೋಹ ಮಾಡದ ಕೋಪದಿಂದ ಪತ್ನಿ ನೇಣು ಬಿಗಿದುಕೊಂಡಿದ್ದಾರೆ ಎಂದು ತಿಳಿಸಿದರು. ಈ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಶವವನ್ನು ವಶಕ್ಕೆ ಪಡೆದಿದ್ದಾರೆ. ಮರಣೋತ್ತರ ಪರೀಕ್ಷೆ ವರದಿ ಬಂದ ನಂತರವಷ್ಟೇ ಸಾವಿಗೆ ನಿಜವಾದ ಕಾರಣ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.