

Murdered:ವ್ಯಕ್ತಿಯೊಬ್ಬನನ್ನು ಕುಳ್ಳ ಎಂಬ ನೆಪವೊಡ್ಡಿ ಮದುವೆಯಾದ ಕೇವಲ 10 ದಿನಗಳಲ್ಲೇ ಬರ್ಬರವಾಗಿ ಕೊಲೆ ಮಾಡಲಾಗಿದ ಘಟನೆ ಆಂಧ್ರದ ಗುಂಟೂರಿನಲ್ಲಿ ನಡೆದಿದೆ. ಈ ಕೊಲೆ ರಾಜ್ಯದ್ಯಂತ ಸಂಚಲನ ಮೂಡಿಸಿದೆ.
ಬಾಪಟ್ಲಾ ಜಿಲ್ಲೆಯ ವೇಮುರು ಮಂಡಲದ ಎಡವೂರು ಗ್ರಾಮದ ಕುರ್ರ ಗಣೇಶ್ ಮೃತ ಎಂದು ಗುರುತಿಸಲಾಗಿದೆ. ಇನ್ನು ಕುರ್ರ ಗಣೇಶ್ ಎಂಬಾತ ದೂರದ ಸಂಬಂಧಿ ತೆನಾಲಿಯ ಕೀರ್ತಿ ಅಂಜನಿ ದೇವಿ ಎಂಬ ಯುವತಿಯನ್ನು ಮದುವೆಯಾಗಲು ಪ್ರಯತ್ನಿಸಿದ್ದ. ಆದರೆ, ಗಣೇಶ್ ಕುಳ್ಳ ಆಗಿದ್ದರಿಂದ ಹುಡುಗಿಯ ಪೋಷಕರು ಸಂಬಂಧವನ್ನು ನಿರಾಕರಿಸಿದರು. ಆದರೆ ಗಣೇಶ್ ಮತ್ತು ಕೀರ್ತಿ ಮೊದಲ ನೋಟದಲ್ಲೇ ಪರಸ್ಪರ ಪ್ರೀತಿಸುತ್ತಿದ್ದರು. ಹೀಗಾಗಿ, ಇಬ್ಬರು ಓಡಿ ಹೋಗಿ ದೇವಸ್ಥಾನದಲ್ಲಿ ಮದುವೆಯಾಗಿದ್ದರು.
ಮದುವೆಯಾದ 10 ದಿನಗಳ ಬಳಿಕ ಹುಡುಗಿಯ ಕುಟುಂಬದವರು ಮನೆಗೆ ಕರೆಯಿಸಿದ್ದಾರೆ. ಇತ್ತ ಕೀರ್ತಿಯ ಸಹೋದರ ದುರ್ಗಾ ರಾವ್, ಗಣೇಶ್ ಕುಳ್ಳನಾಗಿರುವುದನ್ನು ನೋಡಿ ಅಸಹ್ಯಗೊಂಡ ಇತ ಈ ಮೊದಲೇ ನವದಂಪತಿಗೆ ವಾರ್ನಿಂಗ್ ಕೊಟ್ಟಿದ್ದ.
ಆರೋಪಿ ದುರ್ಗಾ ರಾವ್ ಮದುವೆ ಸಂಭ್ರಮದ ನೆಪ ಹೇಳಿ, ಗಣೇಶ್ನನ್ನು ಹೊರ ಕರೆದುಕೊಂಡು ಹೋಗಿ ಚಾಕುವಿನಿಂದ ಮನಬಂದಂತೆ ಚುಚ್ಚಿ ಕೊಲೆ ಮಾಡಿದ್ದಾನೆ. ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ(ಏಜೆನ್ಸೀಸ್)