ನವವಿವಾಹಿತೆ ಆತ್ಮಹತ್ಯೆ; ನೋವಿನ ಕಾರಣವನ್ನು ತಂದೆ-ತಾಯಿಗೆ ಹೇಳಿದ್ದಳಾಕೆ...

Newly wedding 19 may 20
Published on

ಚಿಕ್ಕೋಡಿ: ಇತ್ತೀಚೆಗಷ್ಟೇ ಮದುವೆಯಾಗಿ ಹೊಸ ಬದುಕಿಗೆ ಕಾಲಿಟ್ಟಿದ್ದ ಯುವತಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ದೇವನಕಟ್ಟಿ ಗ್ರಾಮದಲ್ಲಿ ನಡೆದಿದೆ.

ಉಮಾಶ್ರೀ (20) ಮೃತೆ. ಇತ್ತೀಚೆಗಷ್ಟೇ ಕೃಷ್ಣಾ ಹೊಸೂರೆ ಎಂಬ ಯುವಕನ ಜತೆ ವಿವಾಹವಾಗಿತ್ತು. ಆದರೆ ಪತಿಯ ಮನೆಯಲ್ಲಿ ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆ ಎಂದು ನೊಂದುಕೊಂಡು ನಿನ್ನೆಯಷ್ಟೇ ತವರು ಮನೆಗೆ ಬಂದಿದ್ದರು.

ತಂದೆ-ತಾಯಿಯ ಬಳಿ ತನ್ನ ಕಷ್ಟವೆನ್ನಲ್ಲ ಹೇಳಿಕೊಂಡಿದ್ದರು. ಇಂದು ಬಾವಿಗೆ ಹಾರಿ ಜೀವಬಿಟ್ಟಿದ್ದಾರೆ. ಮಾನಸಿಕವಾಗಿ ತೀವ್ರ ಕುಗ್ಗಿ ಹೋಗಿದ್ದರು ಎಂದು ಆಕೆಯ ಕುಟುಂಬಸ್ಥರು ತಿಳಿಸಿದ್ದಾರೆ. ಸ್ಥಳಕ್ಕೆ ರಾಯಭಾಗ ಪೊಲೀಸರು ಭೇಟಿ ನೀಡಿ, ಪರಿಶೀಲನೆ ಮಾಡಿದ್ದಾರೆ. ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net