ಡಾರ್ಲಿಂಗ್​ ಪ್ರಭಾಸ್​ ಅಭಿಮಾನಿಗಳಿಗೆ ಇದು ಸಿಹಿ ಸುದ್ದಿ!

Untitled design - 2023-08-07T125140.036
Published on

ಆಂಧ್ರಪ್ರದೇಶ: ಟಾಲಿವುಡ್​ನ ರೆಬೆಲ್ ಸ್ಟಾರ್​, ಡಾರ್ಲಿಂಗ್​ ಪ್ರಭಾಸ್​ ಅಭಿನಯದ ಬಹುನಿರೀಕ್ಷಿತ 'ಕಲ್ಕಿ 2898 AD' ಚಿತ್ರದ ಬಗ್ಗೆ ಇದೀಗ ಹೊಸ ಮಾಹಿತಿ ಲಭಿಸಿದ್ದು, ಈ ಸಂಗತಿ ಪ್ರಭಾಸ್​ನ ಅಪಾರ ಸಂಖ್ಯೆಯ ಅಭಿಮಾನಿಗಳಿಗೆ ಸಂತಸ ನೀಡಿದೆ.

ಈ ಹಿಂದೆ 'ಪ್ರಾಜೆಕ್ಟ್​ ಕೆ' ಎಂದು ಹೇಳಲಾಗಿದ್ದ ಪ್ರಭಾಸ್​ ಚಿತ್ರವನ್ನು ಇದೀಗ 'ಕಲ್ಕಿ 2898 AD' ಎಂಬ ಶೀರ್ಷಿಕೆಯಡಿ ಸಿನಿಮಾವನ್ನು ಚಿತ್ರಿಸಲಾಗುತ್ತಿದೆ. ನಾಗ್ ಅಶ್ವಿನ್-ಪ್ರಭಾಸ್​ ಕಾಂಬಿನೇಷನ್​ನಲ್ಲಿ ಮೂಡಿಬರುತ್ತಿರುವ ಸೈನ್ಸ್​-ಫಿಕ್ಷನ್​ ಚಿತ್ರದ ಚಿತ್ರೀಕರಣ ಇದೀಗ ಪುನಾರಂಭಗೊಂಡಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ. ಸದ್ಯ ಈ ಸುದ್ದಿ ಅಭಿಮಾನಿಗಳಿಗೆ ಸಿನಿಮಾದ ಬಗ್ಗೆ ಮತ್ತಷ್ಟು ಕುತೂಹಲವನ್ನು ಹೆಚ್ಚಿಸಿದೆ.

ಕಲ್ಕಿ 2898 AD ಚಿತ್ರದಲ್ಲಿ ಬಾಲಿವುಡ್ ಬೆಡಗಿ, ನಟಿ ದೀಪಿಕಾ ಪಡುಕೋಣೆ ವಿಶೇಷ ಪಾತ್ರದಲ್ಲಿ ನಟಿಸಿದ್ದು, ಚಿತ್ರದ ಹೊಸ ಶೂಟಿಂಗ್ ವೇಳಾಪಟ್ಟಿ ಭಾನುವಾರ ರಾತ್ರಿ ಹೈದರಾಬಾದ್‌ನಲ್ಲಿ ಪ್ರಾರಂಭವಾಗಿದೆ. ಚಿತ್ರದಲ್ಲಿ ಪ್ರಭಾಸ್, ದೀಪಿಕಾ ಪಡುಕೋಣೆ, ದಿಶಾ ಪಟಾನಿ, ಅಮಿತಾಬ್ ಬಚ್ಚನ್, ಕಮಲ್ ಹಾಸನ್ ಸೇರಿದಂತೆ ಮುಂತಾದ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ವೈಜಯಂತಿ ಮೂವೀಸ್ ಚಿತ್ರವನ್ನು ದೊಡ್ಡ ಮಟ್ಟದಲ್ಲಿ ನಿರ್ಮಿಸುತ್ತಿದ್ದು, ಸಂತೋಷ್ ನಾರಾಯಣನ್ ಸಂಗೀತ ಸಂಯೋಜಿಸಿದ್ದಾರೆ. ಈ ಹಿಂದೆಯೇ ತಿಳಿಸಿದಂತೆ ಚಿತ್ರವು 2024ರ ಪ್ರಾರಂಭದಲ್ಲಿ ರಿಲೀಸ್ ಆಗಲಿದೆ ಎಂದು ಹೇಳಲಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net