ಉತ್ತರ ಪ್ರದೇಶ ಸರ್ಕಾರದ 5.12 ಲಕ್ಷ ಕೋಟಿ ರೂಪಾಯಿ ಬಜೆಟ್: ಅಯೋಧ್ಯೆ ಕೇಂದ್ರಿತ ಯೋಜನೆಗಳಿಗೆ ಆದ್ಯತೆ

Ayodhya vvani
Published on

ಲಖನೌ: ಉತ್ತರ ಪ್ರದೇಶ ಸರ್ಕಾರ ಮಂಗಳವಾರ 2020-21ನೇ ಸಾಲಿನ ಮುಂಗಡಪತ್ರವನ್ನು ಮಂಡಿಸಿದ್ದು, ಒಟ್ಟು ಗಾತ್ರ 5.12 ಲಕ್ಷ ಕೋಟಿ ರೂಪಾಯಿ ಆಗಿದ್ದು, ಅಯೋಧ್ಯೆಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಇದರಲ್ಲಿ 500 ಕೋಟಿ ರೂಪಾಯಿಗಳನ್ನು ಅಯೋಧ್ಯೆಯ ವಿಮಾನ ನಿಲ್ದಾಣಕ್ಕೆ ಹಂಚಿಕೆ ಮಾಡಲಾಗಿದೆ.

ಪ್ರಸಕ್ತ ಹಣಕಾಸು ವರ್ಷದ ಬಜೆಟ್​ಗೆ ಹೋಲಿಸಿದರೆ ಸರ್ಕಾರ ಈಗ ಮಂಡಿಸಿರುವ ಬಜೆಟ್​ನ ಗಾತ್ರ 33, 159 ಕೋಟಿ ರೂಪಾಯಿ ಹೆಚ್ಚಿನದ್ದು. ಹೊಸ ಯೋಜನೆಗಳಿಗೆ ಇದರಲ್ಲಿ 10,967.87 ಕೋಟಿ ರೂಪಾಯಿ ಮೀಸಲಿಡಲಾಗಿದೆ.

ಅಯೋಧ್ಯೆ ಪಟ್ಟಣವನ್ನು ಪ್ರವಾಸಿ ಸ್ಥಳವನ್ನಾಗಿ ಅಭಿವೃದ್ಧಿ ಪಡಿಸುವುದಕ್ಕೆ 85 ಕೋಟಿ ರೂಪಾಯಿ ಹಂಚಿಕೆ ಮಾಡಲಾಗಿದೆ. ಇದಕ್ಕೆ ಹೊರತಾಗಿ 10 ಕೋಟಿ ರೂಪಾಯಿಯನ್ನು ತುಳಸಿ ಸ್ಮಾರಕ ಭವನಕ್ಕೆ ಮೀಸಲಿಡಲಾಗಿದೆ. ಕೆಲವೇ ತಿಂಗಳಲ್ಲಿ ರಾಮ ಮಂದಿರ ನಿರ್ಮಾಣವಾಗಲಿರುವ ಅಯೋಧ್ಯೆಗೆ ವಿಮಾನ ನಿಲ್ದಾಣಕ್ಕಾಗಿ 500 ಕೋಟಿ ರೂಪಾಯಿ ಹಂಚಿಕೆ ಮಾಡಲಾಗಿದೆ.

ವಾರಾಣಸಿಯಲ್ಲಿ ಸಾಂಸ್ಕೃತಿ ಕೇಂದ್ರ ಸ್ಥಾಪನೆಗಾಗಿ 180 ಕೋಟಿ ರೂಪಾಯಿ, ಕಾಶೀ ವಿಶ್ವನಾಥ ದೇವಸ್ಥಾನದ ಅಂದ ಹೆಚ್ಚಿಸಲು ಮತ್ತು ವಿಸ್ತರಣೆಗಾಗಿ 200 ಕೋಟಿ ರೂಪಾಯಿ ಹಂಚಿಕೆ ಮಾಡಲಾಗಿದೆ. ಹಣಕಾಸು ಸಚಿವ ಸುರೇಶ್ ಕುಮಾರ್ ಖನ್ನಾ ಬಜೆಟ್ ಮಂಡಿಸಿದರು. ಯೋಗಿ ಸರ್ಕಾರದ ನಾಲ್ಕನೇ ಬಜೆಟ್ ಇದಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net