ಕರ್ನಾಟಕ‌ ಪತ್ರಕರ್ತೆಯರ ಸಂಘಕ್ಕೆ ಅವಿರೋಧವಾಗಿ ನೂತನ ಪದಾಧಿಕಾರಿಗಳ ಆಯ್ಕೆ

KWJA
Published on

ಬೆಂಗಳೂರು: ಕರ್ನಾಟಕ ಪತ್ರಕರ್ತೆಯರ ಸಂಘಕ್ಕೆ ಇಂದು ನೂತನ ಪದಾಧಿಕಾರಿಗಳ ಆಯ್ಕೆ ಆಗಿದ್ದು, ಪತ್ರಕರ್ತೆ ಪದ್ಮಾ ಶಿವಮೊಗ್ಗ ಅಧ್ಯಕ್ಷೆ ಆಗಿ ಆಯ್ಕೆ ಆಗಿದ್ದಾರೆ. ಕರ್ನಾಟಕ ಪತ್ರಕರ್ತೆಯರ ಸಂಘದ ಕಾರ್ಯಕಾರಿ ಸಮಿತಿಗೆ ಇಂದು ನಡೆದ ಚುನಾವಣೆಯಲ್ಲಿ ಎಲ್ಲ ಸ್ಥಾನಗಳಿಗೆ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

ಉಪಾಧ್ಯಕ್ಷೆ ಆಗಿ ಜೆ.ಎನ್.ವಾಣಿಶ್ರೀ-ಸಂಯುಕ್ತ ಕರ್ನಾಟಕ, ಪ್ರಧಾನ ಕಾರ್ಯದರ್ಶಿ ಆಗಿ ಮಂಜುಶ್ರೀ ಎಂ. ಕಡಕೋಳ-ಪ್ರಜಾವಾಣಿ, ಸಹ ಕಾರ್ಯದರ್ಶಿ ಆಗಿ ಪಂಕಜಾ ಗೊರೂರು-ಸ್ವತಂತ್ರ ಹಾಗೂ ಖಜಾಂಚಿಯಾಗಿ ಉದಯವಾಣಿಯ ಹಲಿಮತ್ ಸಾದಿಯಾ ಆಗಿದ್ದಾರೆ.

ಕಾರ್ಯಕಾರಿ ಸಮಿತಿ ಸದಸ್ಯರಾಗಿ ಚೇತನಾ ಬೆಳಗೆರೆ-ಸೌತ್ ಫಸ್ಟ್​, ಶೀಲಾ ಸಿ. ಶೆಟ್ಟಿ-ವಿಸ್ತಾರ, ಮಿನಿ ತೇಜಸ್ವಿ-ದ ಹಿಂದು, ಕೀರ್ತಿ ಶೇಖರ್-ಸಂಯುಕ್ತ ಕರ್ನಾಟಕ, ಶ್ರೀಜಾ ವಿ.ಎನ್.-ಅವಧಿ ಹಾಗೂ ದೂರದರ್ಶನದ ಶಾಂತಾ ತಮ್ಮಯ್ಯ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿ ಹಿರಿಯ ಪತ್ರಕರ್ತೆ ಎಂ.ಪಿ. ಸುಶೀಲಾ ಕಾರ್ಯನಿರ್ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net