ಬೀಜಿಂಗ್: ಚೀನಾದಲ್ಲಿ ಕರೊನಾ ನಂತರದ ಅವಧಿಯಲ್ಲಿ ಜನಜೀವನ ಸಾಮಾನ್ಯ ಸ್ಥಿತಿಗೆ ಮರಳಲಾರಂಭಿಸಿದೆ. ಇದರೊಂದಿಗೆ ಅಲ್ಲಿ ಶಾಲಾಕಾಲೇಜುಗಳು ಕೂಡ ಆರಂಭವಾಗಿದೆ. ಆದರೆ, ಕರೊನಾ ಪೂರ್ವದಲ್ಲಿ ಇದ್ದಂಥ ಸ್ಥಿತಿಯಲ್ಲಿ ಅಜಗಜ ವ್ಯತ್ಯಾಸವಾಗಿದೆ.
ದೈಹಿಕ ಅಂತರ ಕಾಯ್ದುಕೊಳ್ಳಲು ವಿದ್ಯಾರ್ಥಿಗಳು ಒಂದು ಮೀಟರ್ ಉದ್ದದ ಕೋಲು ಇರುವ ಟೋಪಿ ಧರಿಸುವುದು ಕಡ್ಡಾಯವಾಗಿದೆ. ಈ ಹಿಂದೆ ಚೀನಾದ ಸಾಂಗ್ ಸಾಮ್ರಾಜ್ಯದಲ್ಲಿ ದರ್ಬಾರು ನಡೆಯುವ ಸಂದರ್ಭದಲ್ಲಿ ದರ್ಬಾರಿನಲ್ಲಿ ಇರುವವರು ಪರಸ್ಪರ ಮಾತನಾಡಿಕೊಂಡು ರಾಜನ ವಿರುದ್ಧ ಪಿತೂರಿ ನಡೆಸದಂತೆ ತಡೆಯಲು ದರ್ಬಾರಿನಲ್ಲಿ ಇಂಥ ಟೋಪಿಗಳನ್ನು ಧರಿಸುವುದನ್ನು ಕಡ್ಡಾಯಗೊಳಿಸಲಾಗಿತ್ತು. ಈ ಟೋಪಿಗಳಿಂದ ಪ್ರೇರಣೆಗೊಂಡು ಇದೀಗ ವಿದ್ಯಾರ್ಥಿಗಳಿಗೂ ಅಂಥದ್ದೇ ಟೋಪಿ ರೂಪಿಸಿ, ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

ಊಟಕ್ಕೆ ಪಾರದರ್ಶಕ ಪರದೆ: ಪ್ರತಿಯೊಂದು ಶಾಲೆಯಲ್ಲೂ ನಾಲ್ಕು ತರಗತಿಗಳನ್ನು ಊಟ ಮಾಡಲೆಂದೇ ನಿಗದಿಪಡಿಸಲಾಗಿದೆ. ಅಲ್ಲಿರುವ ಟೇಬಲ್ಗಳ ಮೇಲೆ ಪಾರದರ್ಶಕ ಪರದೆಯನ್ನು ಇರಿಸಲಾಗಿರುತ್ತದೆ.
ಊಟ ಮಾಡಲು ಬರುವ ವಿದ್ಯಾರ್ಥಿಗಳು ಊಟಕ್ಕೂ ಮೊದಲು ಆ ಪರದೆಗಳನ್ನು ಸ್ಯಾನಿಟೈಸರ್ ಬಳಸಿ ಸ್ಯಾನಿಟೈಸ್ ಮಾಡಬೇಕು. ಊಟವಾದ ಬಳಿಕ ಮತ್ತೊಮ್ಮೆ ಅದನ್ನು ಸ್ಯಾನಿಟೈಸ್ ಮಾಡಿ, ಮಡಚಿಡಬೇಕು.
ಕರೊನೋತ್ತರ ವಾತಾವರಣದಲ್ಲಿ ಭಾರತದಲ್ಲಿ ಕೂಡ ಇಂಥ ವ್ಯವಸ್ಥೆಯೊಂದಿಗೆ ಶಾಲೆ-ಕಾಲೇಜುಗಳನ್ನು ನಡೆಸುವ ಅನಿವಾರ್ಯತೆ ಸೃಷ್ಟಿಯಾಗಬಹುದು ಎಂದು ಹೇಳಲಾಗುತ್ತಿದೆ.