ದಳಪತಿ ವಿಜಯ್ ನಟನೆಯ 'ಲಿಯೋ' ಚಿತ್ರತಂಡದಿಂದ ಹೊರಬಿತ್ತು ಹೊಸ ಅಪ್ಡೇಟ್​

Untitled design - 2023-09-20T194817.762
Published on

ತಮಿಳುನಾಡು: ಕಾಲಿವುಡ್​ನ ಸ್ಟಾರ್​ ನಟ, ದಳಪತಿ ವಿಜಯ್​ ಮತ್ತು ನಟಿ ತ್ರಿಶಾ ಕೃಷ್ಣನ್ ಮುಖ್ಯಭೂಮಿಕೆಯಲ್ಲಿ ಅಭಿನಯದ ಬಹುನಿರೀಕ್ಷಿತ 'ಲಿಯೋ ಸಿನಿಮಾ ಇದೇ ಅಕ್ಟೋಬರ್ 19 ರಂದು ಬಿಡುಗಡೆಗೊಳ್ಳಲು ಸಜ್ಜಾಗಿದ್ದು. ಈ ಮಧ್ಯೆ ವಿಜಯ್​ ಅಭಿಮಾನಿಗಳಿಗೆಂದೇ ಚಿತ್ರತಂಡ ಒಂದರ ಹಿಂದೆ ಒಂದು ಹೊಚ್ಚ ಹೊಸ ಪೋಸ್ಟರ್​ಗಳನ್ನು ರಿಲೀಸ್​ ಮಾಡುತ್ತಿದೆ.

ಇತ್ತೀಚೆಗೆ ಕನ್ನಡ ಭಾಷೆಯಲ್ಲಿ ಪೋಸ್ಟರ್ ಬಿಡುಗಡೆಗೊಳಿಸುವ ಮುಖೇನ ಕನ್ನಡ ಸಿನಿಪ್ರೇಕ್ಷಕರ ಗಮನ ಸೆಳೆದಿದ್ದ ಚಿತ್ರತಂಡ, ಇದೀಗ ನಟನ ಮತ್ತೊಂದು ರಗಡ್​ ಪೋಸ್ಟರ್​ವೊಂದನ್ನು ಬಹಿರಂಗಪಡಿಸಿದೆ. ವಿಜಯ್​ ಅವರನ್ನು ಒಳಗೊಂಡ ಪೋಸ್ಟರ್​ನಲ್ಲಿ 'ಕೀಪ್​ ಕಾಮ್​ ಅಂಡ್​ ಪ್ರಿಪೇರ್​ ಫಾರ್​ ದಿ ಬ್ಯಾಟಲ್'​ ಎಂದು ಆಂಗ್ಲ ಭಾಷೆಯಲ್ಲಿ ಬರೆದು ಪೋಸ್ಟ್​ ಮಾಡಲಾಗಿದೆ.

ಸದ್ಯ ಸಿನಿಮಾದ ಬಗ್ಗೆ ದಿನದಿಂದ ದಿನಕ್ಕೆ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚುತ್ತಿದ್ದು, ಚಿತ್ರದ ಆಡಿಯೋ ಲಾಂಚ್​ ಶೀಘ್ರದಲ್ಲೇ ಚೆನ್ನೈನಲ್ಲಿ ನಡೆಯಲಿದೆ ಎಂಬ ವದಂತಿ ಹರಿದಾಡುತ್ತಿದೆ. ಆದ್ರೆ, ಈ ಬಗ್ಗೆ ಚಿತ್ರತಂಡ ಇನ್ನೂ ಅಧಿಕೃತ ಮಾಹಿತಿ ಘೋಷಿಸಿಲ್ಲ. ಲೋಕೇಶ್ ಕನಕರಾಜ್ ನಿರ್ದೇಶನದ ಈ ಚಿತ್ರದಲ್ಲಿ ಸಂಜಯ್ ದತ್ ಮತ್ತು ಅರ್ಜುನ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net