ಕರೊನಾ ರೋಗಿಗಳಿಗೆ ಹೊಸ ಮಾರ್ಗಸೂಚಿ

page 6 2
Published on

ನವದೆಹಲಿ: ದೇಶದಾದ್ಯಂತ ಕರೊನಾ ವೈರಸ್ ಸೋಂಕಿತ ರೋಗಿಗಳನ್ನು ಚಿಕಿತ್ಸೆಯ ನಂತರ ಬಿಡುಗಡೆ (ಡಿಸ್ಚಾರ್ಜ್) ಮಾಡುವ ಕುರಿತ ಮಾರ್ಗಸೂಚಿಯನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಪರಿಷ್ಕರಿಸಿದೆ. ಮೂರು ವಿಭಾಗಗಳಾಗಿ ವಿಂಗಡಣೆ

ಲಘು ಹಾಗೂ ಲಕ್ಷಣ ಪೂರ್ವ ಪ್ರಕರಣ

* ನಿಯಮಿತವಾಗಿ ದೇಹದ ಉಷ್ಣತೆ ಮತ್ತು ನಾಡಿ ಬಡಿತ ಪರೀಕ್ಷೆ * ಲಕ್ಷಣ ಕಂಡು ಬಂದ 10 ದಿನಗಳ ನಂತರ ಹಾಗೂ ಸತತ ಮೂರು ದಿನ ಜ್ವರ ಇಲ್ಲದ ರೋಗಿ ಬಿಡುಗಡೆ * ಡಿಸ್ಚಾರ್ಜ್ ಮುನ್ನ ತಪಾಸಣೆ ಅಗತ್ಯವಿಲ್ಲ. 7 ದಿನ ಗೃಹ ಐಸೋಲೇಷನ್​ಗೆ ಸಲಹೆ. * ಕೋವಿಡ್ ಆರೈಕೆ ಕೇಂದ್ರದಿಂದ (ಸಿಸಿಸಿ) ಡಿಸ್ಚಾರ್ಜ್ ಮಾಡುವ ಮುನ್ನ ಯಾವುದೇ ಸಂದರ್ಭದಲ್ಲಿ ಆಮ್ಲಜನಕ ಪ್ರಮಾಣ ಶೇಕಡಾ 95ಕ್ಕಿಂತ ಕಡಿಮೆಯಾದರೆ ರೋಗಿಯನ್ನು ಕೋವಿಡ್ ಚಿಕಿತ್ಸೆಗೆಂದೇ ಮೀಸಲಾದ ಆರೋಗ್ಯ ಕೇಂದ್ರಕ್ಕೆ (ಡಿಸಿಎಚ್​ಸಿ) ಸ್ಥಳಾಂತರಿಸುವುದು. * ಅಲ್ಲಿಂದ ಡಿಸ್ಚಾರ್ಜ್ ಆದ ನಂತರ ರೋಗಿಯಲ್ಲಿ ಮತ್ತೆ ಜ್ವರ, ಕೆಮ್ಮು ಹಾಗೂ ಉಸಿರಾಟದ ತೊಂದರೆಯಂಥ ಲಕ್ಷಣ ಕಾಣಿಸಿದರೆ ಅಮಥವರು ಸಿಸಿಸಿ ಅಥವಾ ರಾಜ್ಯ ಸಹಾಯವಾಣಿ ಅಥವಾ 1075 ಸಂಖ್ಯೆ ಸಂರ್ಪಸಬೇಕು. * 14ನೇ ದಿನ ರೋಗಿಯ ಆರೋಗ್ಯದ ಮೇಲೆ ಟೆಲಿಕಾನ್ಪರೆನ್ಸ್ ಮೂಲಕ ನಿಗಾ ಇಡಲಾಗುವುದು.

ಮಧ್ಯಮ ಸೋಂಕಿನ ರೋಗಿಗಳು

* ಮೂರು ದಿನದಲ್ಲಿ ಜ್ವರ ವಾಸಿಯಾದರೆ ಮತ್ತು (ಆಕ್ಸಿಜನ್ ಬೆಂಬಲವಿಲ್ಲದೆ) ಮುಂದಿನ ನಾಲ್ಕು ದಿನ ಆಮ್ಲಜನಕ ಪ್ರಮಾಣ ಶೇಕಡಾ 95ಕ್ಕಿಂತ ಮೇಲಿದ್ದರೆ ಲಕ್ಷಣ ಕಂಡ ಹತ್ತು ದಿನದ ನಂತರ ಡಿಸ್ಚಾರ್ಜ್. * ಉಸಿರಾಟದ ತೊಂದರೆ ವಾಸಿಯಾದರೆ. * ಡಿಸ್ಚಾರ್ಜ್​ಗೆ ಮುನ್ನ ತಪಾಸಣೆ ಬೇಕಿಲ್ಲ. ಏಳು ದಿನ ಹೋಂ ಐಸೋಲೇಷನ್​ಗೆ ಸಲಹೆ.ಆಮ್ಲಜನಕದ ನೆರವಿನಲ್ಲಿರುವ ರೋಗಿಯ ಜ್ವರ ಮೂರು ದಿನದಲ್ಲಿ ಗುಣವಾಗದಿದ್ದರೆ ಹಾಗೂ ಆಮ್ಲಜನಕ ಥೆರಪಿ ಮುಂದುವರಿಯುವುದು ಅಗತ್ಯವಾದ ರೋಗಿಯನ್ನು ಕ್ಲಿನಿಕಲ್ ಲಕ್ಷಣ ಪರಿಹಾರವಾದ ನಂತರ; ಸತತ ಮೂರು ದಿನ ಆಮ್ಲಜನಕ ಸ್ಯಾಚುರೇಷನ್ ನಿರ್ವಹಿಸಲು ಸಾಮರ್ಥ್ಯವಿರುವ ರೋಗಿಗಳ ಬಿಡುಗಡೆ.

ಗಂಭೀರ ರೋಗಿಗಳು

* ಎಚ್​ಐವಿ ರೋಗಿಗಳು, ಅಂಗ ಕಸಿಯಾದವರು ಮತ್ತು ಮಾರಕ ವ್ಯಾಧಿ ಹೊಂದಿದ ಕರೊನಾ ಪೀಡಿತರನ್ನು ಗಂಭೀರ ರೋಗಿಗಳು ಎಂದು ಪರಿಗಣನೆ * ಕ್ಲಿನಿಕಲ್ ರಿಕವರಿ ಬಳಿಕವೇ ಬಿಡುಗಡೆ * ರೋಗ ಲಕ್ಷಣಗಳ ಪರಿಹಾರದ ನಂತರ ಆರ್​ಟಿ-ಪಿಸಿಆರ್​ನಿಂದ ರೋಗಿಯ ಪರೀಕ್ಷೆ ನೆಗೆಟಿವ್ ಎಂದು ಬಂದ ಮೇಲೆ ಡಿಸ್ಚಾರ್ಜ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net