ಮುಜರಾಯಿ ಇಲಾಖೆಗೆ ಹೊಸ ಧಾರ್ಮಿಕ ಪರಿಷತ್ ರಚನೆ

Ramalinga Reddy
Published on

ಬೆಂಗಳೂರು: ಮುಜರಾಯಿ ಇಲಾಖೆಗೆ ಹೊಸದಾಗಿ ಧಾರ್ಮಿಕ ಪರಿಷತ್ ರಚಿಸಿ ಕಂದಾಯ ಇಲಾಖೆ ಆದೇಶ ಹೊರಡಿಸಿದೆ. ಸಚಿವ ರಾಮಲಿಂಗಾರೆಡ್ಡಿ ಅಧ್ಯಕ್ಷತೆಯಲ್ಲಿ ಎಂಟು ಮಂದಿ ನಾಮನಿರ್ದೇಶಿತ ಸದಸ್ಯರನ್ನು ಒಳಗೊಂಡ ಪರಿಷತ್ ರಚಿಸಲಾಗಿದೆ.

ಕಳೆದ ಮೇ 22ರಂದು ಹಿಂದಿನ ಸರ್ಕಾರದಲ್ಲಿ ನೇಮಕಗೊಂಡಿದ್ದ ಧಾರ್ಮಿಕ ಪರಿಷತ್ತಿನ ನಾಮ ನಿರ್ದೇಶಿತರ ಸದಸ್ಯತ್ವವನ್ನು ರದ್ದುಪಡಿಸಲಾಗಿತ್ತು. ಇದೀಗ ಮುಜರಾಯಿ ಮತ್ತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರನ್ನು ಅಧ್ಯಕ್ಷರಾಗಿ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ (ಮುಜರಾಯಿ) ಅವರನ್ನು ಉಪಾಧ್ಯಕ್ಷರಾಗಿ, ಹಿಂದೂ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು ಪದ ನಿಮಿತ್ತ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ.

ಉಳಿದಂತೆ ನಿವೃತ್ತ ಜಿಲ್ಲಾ ನ್ಯಾಯಾಧೀಶ ಎನ್. ಶ್ರೀವತ್ಸ ಕೇದಿಲಾಯ ಅವರು ನ್ಯಾಯಿಕ ಸದಸ್ಯರು, ಡಾ. ಮುರುಳಸಿದ್ದ ಪಂಡಿತಾರಾಧ್ಯ ಶಿವಾಚಾರ್ಯರು, ಬಿ.ಎಸ್. ದ್ವಾರಕನಾಥ್, ಡಾ.ಎ. ರಾಧಾಕೃಷ್ಣ ರಾಜು, ಡಾ.ಎ. ರಾಧಾಕೃಷ್ಣರಾಜು, ಕೆ.ಎಂ. ನಾಗರಾಜು, ಡಾ. ಮಹಂತೇಶ ಶಾಸ್ತ್ರಿ, ಮಲ್ಲಿಕಾ ಪ್ರಶಾಂತ ಪಕ್ಕಲಾ, ಚಂದ್ರಶೇಖರ್ ಅವರನ್ನು ನಾಮನಿರ್ದೇಶಿತ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net