ತಾನೇ ನೀಡಿದ ತೀರ್ಪಿನ ಜಾರಿಗೆ ಏಕೆ ಹಿಂದೇಟು? ಅಪರಾಧಿಗಳನ್ನು ಬೆಂಬಲಿಸುತ್ತಿದೆ ಇಡೀ ವ್ಯವಸ್ಥೆ; ನಿರ್ಭಯಾ ತಾಯಿ ಆಶಾದೇವಿ

ASHA DEVI
Published on

ನವದೆಹಲಿ: ತಾನೇ ನೀಡಿದ ತೀರ್ಪಿನ ಜಾರಿಗೆ ನ್ಯಾಯಾಲಯ ಏಕೆ ಹಿಂದೇಟು ಹಾಕುತ್ತಿದೆ ಎಂದು ನಿರ್ಭಯಾ ತಾಯಿ ಆಶಾದೇವಿ ಬೇಸರ ಹೊರಹಾಕಿದ್ದಾರೆ.

ಪದೇಪದೆ ಮರಣದಂಡನೆ ಮುಂದೂಡುತ್ತಿರುವುದು ಏಕೆ? ಇದು ನಮ್ಮ ನ್ಯಾಯಾಂಗದ ಸೋಲು ಅಲ್ಲವೆ ಎಂದು ಪ್ರಶ್ನಿಸಿದ್ದಾರೆ. ನಮ್ಮ ಇಡೀ ವ್ಯವಸ್ಥೆ ಅಪರಾಧಿಗಳನ್ನು ಬೆಂಬಲಿಸುತ್ತಲಿದೆ ಎಂದು ಆತಂಕ ವ್ಯಕ್ತ ಪಡಿಸಿದ್ದಾರೆ.

ಕಳೆದ ಕೆಲ ದಿನಗಳ ಹಿಂದೆ ದೆಹಲಿ ಕೋರ್ಟ್​ ನೀಡಿದ್ದ ಡೆತ್​ ವಾರೆಂಟ್​​ನಂತೆ ನಾಳೆ ಬೆಳಗ್ಗೆ 6 ಗಂಟೆಗೆ ನಾಲ್ವರೂ ಗಲ್ಲಿಗೇರಬೇಕಿತ್ತು. ಆದರೆ ಇಂದು (ಮಾ.2) ಮತ್ತೊಮ್ಮೆ ದೆಹಲಿ ಪಟಿಯಾಲಾ ನ್ಯಾಯಾಲಯ ಮರಣದಂಡನೆಯನ್ನು ಮುಂದೂಡಿದೆ.

ದೆಹಲಿ ಪಟಿಯಾಲಾ ಹೌಸ್​ ಕೋರ್ಟ್​ನ ಅಡಿಷನಲ್​ ಸೆಷನ್ಸ್​ ನ್ಯಾಯಾಧೀಶ ಧರ್ಮೇಂದ್ರ ರಾಣಾ ಅವರು ಪವನ್​ ಕುಮಾರ್​ ಅರ್ಜಿ ವಿಚಾರಣೆಯನ್ನು ಮುಂದೂಡುವ ಜತೆಗೆ, ಗಲ್ಲಿಗೇರಿಸುವ ದಿನವನ್ನೂ ಮುಂದೂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net