

ಬೆಂಗಳೂರು: ಸ್ನೇಹಿತೆ ಪವಿತ್ರಾ ಗೌಡ ಅವರಿಗೆ ಅಶ್ಲೀಲ ಸಂದೇಶ ಕಳುಹಿಸಿದ್ದಾನೆ ಎನ್ನುವ ಹಿನ್ನೆಲೆಯಲ್ಲಿ ನಟ ದರ್ಶನ್ ಸೇರಿದಂತೆ 7 ಮಂದಿ ಸೇರಿ ಚಿತ್ರದುರ್ಗದ ನಿವಾಸಿಯಾಗಿರುವ ರೇಣುಕಾಸ್ವಾಮಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದರು. ಈ ಪ್ರಕರಣದ ಹಿನ್ನೆಲೆಯಲ್ಲಿ ಜಾಮೀನು ರದ್ದಾಗಿ ದರ್ಶನ್ ಮತ್ತೆ ಜೈಲು ಸೇರಿದ್ದಾರೆ.
ಇತ್ತೀಚೆಗೆ ನಟ ದರ್ಶನ್ ಅಭಿನಯದ 'ಡೆವಿಲ್' ಸಿನಿಮಾದ ಸಾಂಗ್ ಆದಂತಹ ‘ಇದ್ರೆ ನೆಮ್ಮದಿಯಾಗಿರ್ಬೇಕುʼ ಸಾಂಗ್ ರಿಲೀಸ್ ಡೇಟ್ ಅನೌನ್ಸ್ ಆಗಿತ್ತು. ಸಿನಿಮಾದ ಮೊದಲ ಲಿರಿಕಲ್ ಸಾಂಗ್ ಬಿಡುಗಡೆಗೆ ಸಜ್ಜಾಗಿದ್ದು, ಆಗಸ್ಟ್ 15ರಂದು ಡೆವಿಲ್ ಚಿತ್ರದ ಮೊದಲ ಹಾಡು ರಿಲೀಸ್ ಆಗಬೇಕಿತ್ತು. ಆದರೆ ದರ್ಶನ್ ಜಾಮೀನು ರದ್ದಾಗಿ ಮತ್ತೆ ಜೈಲುಪಾಲಾದ ಹಿನ್ನೆಲೆ ಹಾಡಿನ ರಿಲೀಸ್ ಡೇಟ್ಅನ್ನು ಮುಂದೂಡಲಾಯ್ತು.
ಇದೀಗ 'ಇದ್ರೆ ನೆಮ್ಮದಿಯಾಗಿರ್ಬೇಕು' ಹಾಡು ರಿಲೀಸ್ಗೆ ಹೊಸ ಡೇಟ್ ಫಿಕ್ಸ್ ಮಾಡಲಾಗಿದೆ. ಆಗಸ್ಟ್ 24 ರ ಭಾನುವಾರ ಬೆಳಗ್ಗೆ 10-05 ಕ್ಕೆ ಡೆವಿಲ್ ಚಿತ್ರದ ಮೊದಲನೆ ಹಾಡು ಬಿಡುಗಡೆಯಾಗಲಿದೆ ಎಂದು ದರ್ಶನ್ ಅವರ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಲಾಗಿದೆ. ದರ್ಶನ್ ಅವರ ಬಾಯಿಂದ ಉದುರಿದ ಡೈಲಾಗ್ಅನ್ನೇ ಈ ಸಿನಿಮಾದಲ್ಲಿ ಸಾಂಗ್ ಮಾಡಲಾಗಿದ್ದು, ಅಭಿಮಾನಿಗಳಲ್ಲಿನ ಆಸಕ್ತಿ ಮತ್ತಷ್ಟು ಹೆಚ್ಚಾಗಿದೆ.
(ಏಜೆನ್ಸೀಸ್)
ಜೈಲಿಗೆ ಹೋಗುವುದಕ್ಕೂ ಮುನ್ನ ದರ್ಶನ್ ‘ದಿ ಡಿವಿಲ್’ ಚಿತ್ರದ ಶೂಟಿಂಗ್ ಮುಗಿಸಿ ಹೋಗಿದ್ದಾರೆ. ಇನ್ನೇನೊ ಸಿನಿಮಾದ ಪ್ರಚಾರ ಶುರುಮಾಡಬೇಕು ಅನ್ನುವಷ್ಟರಲ್ಲಿ ಅವರ ಜಾಮೀನು ರದ್ದಾಗಿ, ಮತ್ತೆ ಜೈಲಿಗೆ ಹೋಗುವ ಪರಿಸ್ಥಿತಿ ಎದುರಾಯ್ತು. ಈ ಬೆನ್ನಲ್ಲೇ ದರ್ಶನ್ ಪರವಾಗಿ ಪತ್ನಿ ವಿಜಯಲಕ್ಷ್ಮಿ ‘ದಿ ಡೆವಿಲ್’ ಸಿನಿಮಾದ ಪ್ರಮೋಷನ್ ಕೆಲಸದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಸಿನಿಮಾಗೆ ಯಾವುದೇ ತೊಂದರೆ ಆಗದಂತೆ ಕೆಲಸ ಮುಂದುವರಿಸುವಂತೆ ನಟ ದರ್ಶನ್ ತಿಳಿಸಿದ್ದಾರೆ. ಹಾಗಾಗಿ ಡೆವಿಲ್ ಚಿತ್ರಕ್ಕೆ ಸಂಬಂಧಿಸಿದ ಎಲ್ಲಾ ಪ್ರಚಾರ ಕೆಲಸಗಳಲ್ಲಿ ಅವರ ಪತ್ನಿ ವಿಜಯಲಕ್ಷ್ಮಿ ಅವರು ಭಾಗಿಯಾಗುತ್ತಿದ್ದಾರೆ.