VIDEO: ಉದ್ಘಾಟಿಸಿದ ಮರುಕ್ಷಣವೇ ಕುಸಿದ ಸೇತುವೆ! ಮೇಯರ್​ ಸೇರಿ 8 ಮಂದಿಗೆ ಗಾಯ

Bridge
Published on

ಮೆಕ್ಸಿಕೋ: ಕಾಮಗಾರಿ ಮುಗಿದ ಸೇತುವೆಯ ಉದ್ಘಾಟನೆಗೆಂದು ಅಲ್ಲಿನ ಮೇಯರ್​​ನನ್ನು ಕರೆಯಲಾಗಿತ್ತು. ಅಂತೆಯೇ ಬಂದ ಮೇಯರ್​ ಸೇತುವೆಯನ್ನು ಉದ್ಘಾಟಿಸಿದರೂ ಕೂಡ. ಈ ಬಳಿಕ ಕೆಲವೇ ಕ್ಷಣಗಳಲ್ಲಿ ಇಲ್ಲಿನ ಚಿತ್ರಣವೇ ಬದಲಾಯಿತು.

ಮೆಕ್ಸಿಕೋದ ನಗರವೊಂದರಲ್ಲಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಮಾಡಲಾಗಿತ್ತು. ಸೇತುವೆ ಉದ್ಘಾಟನೆಗೆ ಆಗಮಿಸಿದ ಮೇಯರ್​​ ಕೂಡ ಉದ್ಘಾಟನೆಯನ್ನೂ ಮಾಡಿ, ಕೆಲವರೊಂದಿಗೆ ಸೇತುವೆ ವೀಕ್ಷಣೆಗೆ ಸ್ವಲ್ಪ ದೂರ ನಡೆದಾಡಿದ್ದಾರೆ. ಆ ಕ್ಷಣವೇ ಭಾರ ತಾಳದೇ ಸೇತುವೆ ಕುಸಿದುಬಿದ್ದಿದೆ.

ನೋಡ ನೋಡುತ್ತಿದ್ದಂತೆ ಮೇಯರ್ ಸೇರಿ 20 ಮಂದಿ ನದಿಯಲ್ಲಿ ಬಿದ್ದಿದ್ದು, ಅದರಲ್ಲಿ 8 ಮಂದಿ ಗಾಯಗೊಂಡಿದ್ದಾರೆ. ಮೇಯರ್​ ಸೇರಿ ಗಾಯಗೊಂಡವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

ಮೇಯರ್​ ಪತ್ನಿಯೂ ಸೇರಿದಂತೆ 10 ಅಡಿ ಆಳದಲ್ಲಿ ಬಿದ್ದಿದ್ದಾರೆ.ದಕ್ಷಿಣ ಮೆಕ್ಸಿಕೋದ ನಗರದಲ್ಲಿ ಈ ಸೇತುವೆಯನ್ನು ನಿರ್ಮಿಸಲಾಗಿತ್ತು. ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಸ್ಥಳವಾಗಿದ್ದರಿಂದ ಸೇತುವೆ ನಿರ್ಮಾಣ ಮಾಡಲಾಗಿತ್ತು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net