ನಿಮ್ಮ ಪಾಸ್​ವರ್ಡ್​ ದುರ್ಬಳಕೆ ಆದ್ರೆ ಇನ್ನು ನಿಮಗೆ ಅಲರ್ಟ್ ಬರುತ್ತೆ; ಶೀಘ್ರದಲ್ಲೇ ಆ್ಯಂಡ್ರಾಯ್ಡ್ ಸ್ಮಾರ್ಟ್​ಫೋನ್​ನಲ್ಲಿ ಹೊಸ ಅಪ್​ಡೇಟ್​

Untitled-1
Published on

ನವದೆಹಲಿ: ಸ್ಮಾರ್ಟ್​​ಫೋನ್​ ಬಳಕೆದಾರರನ್ನು ಈಗ ಕಾಡುತ್ತಿರುವ ದೊಡ್ಡ ಭಯ ಎಂದರೆ ಹ್ಯಾಕ್​ನದ್ದು. ಯಾರಿಗಾದರೂ ತಮ್ಮ ಪಾಸ್​ವರ್ಡ್ ಗೊತ್ತಾಗಿ ದುರ್ಬಳಕೆ ಮಾಡಿಕೊಂಡರೆ ಎಂಬ ಆತಂಕ ಒಂದಲ್ಲ ಒಂದು ಸಲ ಕೆಲವರಿಗಾದರೂ ಆಗಿಯೇ ಇರುತ್ತದೆ. ಅಂಥ ಆತಂಕಗಳಿಗೆಲ್ಲ ಪರಿಹಾರ ಎಂಬಂತೆ ಈಗ ಗೂಗಲ್​ ಹೊಸ ಫೀಚರ್ ತರಲು ಮುಂದಾಗಿದೆ. ಇದು ಆ್ಯಂಡ್ರಾಯ್ಡ್​ ಸ್ಮಾರ್ಟ್​ಫೋನ್​ ಬಳಕೆದಾರರಿಗೆ ಶೀಘ್ರದಲ್ಲೇ ಲಭಿಸಲಿದೆ.

ಪಾಸ್​ವರ್ಡ್​ ಚೆಕಪ್​ ಟೂಲ್​ ಎಂದು ಕರೆಯಲಾಗುವ ಈ ಫೀಚರ್​, ಆ್ಯಂಡ್ರಾಯ್ಡ್​ 9 ಹಾಗೂ ಅದಕ್ಕೂ ಮೇಲ್ಪಟ್ಟ ವರ್ಷನ್​ನ ಬಳಕೆದಾರರಿಗೆ ಆಟೋಮ್ಯಾಟಿಕ್​ ಆಗಿ ಲಭಿಸಲಿದೆ. ಇದರಿಂದ ಆ್ಯಂಡ್ರಾಯ್ಡ್ ಸ್ಮಾರ್ಟ್​ಫೋನ್​ ಬಳಕೆದಾರರಿಗೆ ಹ್ಯಾಕ್​ನಿಂದ ಹೆಚ್ಚಿನ ಸುರಕ್ಷತೆ ಲಭಿಸಲಿದೆ. ಈ ಸೌಲಭ್ಯದ ಪ್ರಯೋಜನ ಪಡೆಯಲು ಬಳಕೆದಾರರು ಪಾಸ್​ವರ್ಡ್​ ಬಳಸುವಾಗ ಆಟೋಫಿಲ್​ ಆಯ್ಕೆ ಮಾಡಿಕೊಳ್ಳಬೇಕು. ಇದು​ ಪಾಸ್​ವರ್ಡ್ ಬೇರೆ ಯಾರಿಗಾದರೂ ಗೊತ್ತಾಗಿದ್ದರೆ ಅಲರ್ಟ್​ ನೀಡುತ್ತದೆ.

ಈ ಹೊಸ ಫೀಚರ್ ಎನೇಬಲ್ ಮಾಡಿಕೊಳ್ಳಲು ಈ ಎಲ್ಲ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. Go to your phone Settings > System > Languages & Input > Advanced, the tap Autofill. Tap Google to ensure the setting is enabled. ಗೂಗಲ್​ ಅಕೌಂಟ್​​ನಲ್ಲಿ ಸೇವ್​ ಆಗಿರುವ ಪಾಸ್​ವರ್ಡ್​ಗಳು ಬೇರೆಯವರಿಗೆ ಎಕ್ಸ್​ಪೋಸ್​ ಆಗಿದ್ದರೆ, ದುರ್ಬಲವಾಗಿದ್ದರೆ ಅಥವಾ ಇತರ ಖಾತೆಗಳಲ್ಲಿ ಬಳಕೆ ಆಗುತ್ತಿದ್ದರೆ ಎಚ್ಚರಿಕೆ ನೀಡುತ್ತದೆ. ಇನ್ನು ಗೂಗಲ್​ ಐಡಿ ಮೂಲಕ ಈ ಮುಂದಿನ https://passwords.google.com/ ಲಿಂಕ್​ಗೆ ಲಾಗಿನ್​ ಆಗಿ ಕೂಡ ಪಾಸ್​ವರ್ಡ್​ ಸುರಕ್ಷತೆಯನ್ನು ಪರಿಶೀಲಿಸಬಹುದು. ಲಾಗಿನ್ ಬಳಿಕ ಪಾಸ್​ವರ್ಡ್ ಚೆಕಪ್​ ಟೂಲ್​ ಬಳಸಿದರೆ ಅದು ಪಾಸ್​ವರ್ಡ್ ಸುರಕ್ಷತೆಯ ಮಾಹಿತಿ ನೀಡುತ್ತದೆ. ಸುರಕ್ಷಿತವಲ್ಲ ಎಂದಾಗಿದ್ದರೆ ಪಾಸ್​ವರ್ಡ್​ ಬದಲಿಸುವಂತೆ ಸೂಚನೆಯನ್ನೂ ನೀಡುತ್ತದೆ. (ಏಜೆನ್ಸೀಸ್)

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net