ನಾನು ಕಾಂಗ್ರೆಸ್​ ತೊರೆದು ಬಿಜೆಪಿ ಸೇರುತ್ತೇನೆ ಎಂದು ಊಹಿಸಿರಲಿಲ್ಲ: ಕಿರಣ್​ ಕುಮಾರ್​​ ರೆಡ್ಡಿ

Kiran Kumar Reddy
Published on

ನವದೆಹಲಿ: ಅವಿಭಜಿತ ಆಂಧ್ರಪ್ರದೇಶದ ಕೊನೆಯ ಮುಖ್ಯಮಂತ್ರಿ ಹಿರಿಯ ಕಾಂಗ್ರೆಸ್​ ನಾಯಕ ಕಿರಣ್​ ಕುಮಾರ್​ ರೆಡ್ಡಿ ಶುಕ್ರವಾರ ಬಿಜೆಪಿ ಸೇರ್ಪಡೆಯಾಗಿದ್ಧಾರೆ.

ಪಕ್ಷದ ನಾಯಕತ್ವದ ಕುರಿತು ಭಿನ್ನಾಭಿಪ್ರಾಯವನ್ನು ಹೊಂದಿದ್ದ ಕಿರಣ್​ ಈ ವರ್ಷ್​​ ಮಾರ್ಚ್​ನಲ್ಲಿ ಕಾಂಗ್ರೆಸ್​ ತೊರೆದು ಬಿಜೆಪಿ ಸೇರುವುದಾಗಿ ಘೋಷಿಸಿದ್ದರು.

ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿರುವ ಆಂಧ್ರಪ್ರದೇಶದಲ್ಲಿ ಆಡಳಿತರೂಢ YSRCP ಹಾಗೂ TDP ನಡುವೆ ಅಧಿಕಾರಕ್ಕಾಗಿ ಪೈಪೋಟಿ ಏರ್ಪಟ್ಟಿದು. ಕಿರಣ್​ ಕುಮಾರ್​ ಸೇರ್ಪಡೆ ಇಂದ ಆಂಧ್ರಪ್ರದೇಶದಲ್ಲಿ ತನ್ನ ನೆಲೆಯನ್ನು ವಿಸ್ತರಿಸಲು ಬಿಜೆಪಿ ಯೋಜನೆ ಹಾಕಿಕೊಂಡಿದೆ.

2014ರಲ್ಲಿ ಆಂಧ್ರಪ್ರದೇಶ-ತೆಲಂಗಾಣ ವಿಭಜನೆಯ ನಂತರ ಕಾಂಗ್ರೆಸ್​ಗೆ ರಾಜೀನಾಮೆ ನೀಡಿ ಜೈ ಸಮೈಕಾಂರ್ಧರ ಪಕ್ಷ ಸ್ಥಾಪಿಸಿದ್ದ ಕಿರಣ್​ 2018ರಲ್ಲಿ ಪುನಃ ಕಾಂಗ್ರೆಸ್​ಗೆ ಮರಳಿದ್ದರು.

ಬಿಜೆಪಿ ಸೇರ್ಪಡೆ ನಂತರ ಮಾತನಾಡಿದ ಕಿರಣ್​ ನಮ್ಮ ಕುಟುಂಬ ಃಆಗೂ ಕಾಂಗ್ರೆಸ್​ ಪಕ್ಷದ ಜೊತೆಗೆ ಆರು ದಶಕಗಳ ನಂಟಿದೆ. ನಾನು ಕಾಂಗ್ರೆಸ್​ ತೊರೆದು ಬಿಜೆಪಿ ಸೇರುತ್ತೇನೆ ಎಂದು ಊಹಿಸಿರಲಿಲ್ಲ. ಅವರು(ಕಾಂಗ್ರೆಸ್​) ಜನಾದೇಶಕ್ಕೆ ಬೆಲೆ ಕೊಟ್ಟು ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳುವುದಿಲ್ಲ ಬದಲಾಗಿ ಜನರನ್ನು ದೂಷಿಸುತ್ತಾರೆ.

ಕಾಂಗ್ರೆಸ್​ ಪಕ್ಷದಲ್ಲಿ ಎಲ್ಲರಿಗೂ ಅಧಿಕಾರ ಬೇಕು ಆದರೆ, ಯಾರೂ ಕಷ್ಟ ಪಡಲು ಮುಂದಾಗುವುದಿಲ್ಲ. ಎಲ್ಲಾ ರಾಜ್ಯಗಳಲ್ಲೂ ಕಾಂಗ್ರೆಸ್​ ಪಕ್ಷ ನೆಲ ಕಚ್ಚಿದೆ ಈ ಬಗ್ಗೆ ಕಾರ್ಯಕರ್ತರು ಹಾಗೂ ಮುಖಂಡರ ಜೊತೆ ಮಾತನಾಡುವುದಿಲ್ಲ ಎಂದು ದೂಷಿಸಿದ್ದಾರೆ.

ಪ್ರಧಾನಿ ನರೇಂದ್ರ ಅವರು ರಾಷ್ಟ್ರದ ಬಗ್ಗೆ ಕಾಳಕಿ, ಬದ್ಧತೆಯನ್ನು ಹೊಂದಿದ್ಧಾರೆ. ಅವರ ತೆಗೆದುಕೊಳ್ಳುವ ಕಠಿಣವಾದ ನಿರ್ಧಾರಗಳನ್ನು ಜನತೆ ಸ್ವಾಗತಿಸಿದ್ಧಾರೆ ಎಂದು ಬಿಜೆಪಿ ಸೇರ್ಪಡೆ ನಂತರ ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಿರಣ್​ ಕುಮಾರ್​ ರೆಡ್ಡಿ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net