ಬಾಂಬ್​ನಂತೆ ಸ್ಫೋಟಗೊಂಡ ಬೇಯಿಸಿದ ಮೊಟ್ಟೆ: ಕಾರಣ ಕೇಳಿದ್ರೆ ನಿಮ್ಮ ಹುಬ್ಬೇರೋದು ಖಚಿತ! Boiled Egg

Boiled Egg
Published on

Boiled Egg : ಅಡುಗೆಮನೆಯಲ್ಲಿ ನಾವು ಮಾಡುವ ಒಂದು ಸಣ್ಣ ತಪ್ಪು ದೊಡ್ಡ ಅಪಘಾತಕ್ಕೆ ಕಾರಣವಾಗಬಹುದು. ಇತ್ತೀಚೆಗೆ, ಇಂತಹ ಅನೇಕ ಘಟನೆಗಳು ನಡೆದಿವೆ. ಹಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಮತ್ತೆ ವೈರಲ್ ಆಗುತ್ತಿದೆ. ಆ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಬೇಯಿಸಿದ ಮೊಟ್ಟೆಯನ್ನು ಕತ್ತರಿಸಲು ಪ್ರಯತ್ನಿಸುತ್ತಿರುವುದನ್ನು ತೋರಿಸಲಾಗಿದೆ ಆದರೆ, ಅದು ಸಣ್ಣ ಬಾಂಬ್‌ನಂತೆ ಸ್ಫೋಟಗೊಳ್ಳುತ್ತದೆ. ಇದನ್ನು ನೋಡಿದ ಅನೇಕ ಜನರು ಇದಕ್ಕೆ ಕಾರಣವೇನೆಂದು ತಿಳಿಯುವ ಪ್ರಯತ್ನ ಮಾಡುತ್ತಿದ್ದಾರೆ.

ಅಂದಹಾಗೆ, ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಬಿಸಿ ನೀರಿನಲ್ಲಿ ಮೊಟ್ಟೆಯನ್ನು ಬೇಯಿಸುತ್ತಿದ್ದಾನೆ. ಸಮಯ ಮುಗಿದ ನಂತರ, ಆತ ಬೇಯಿಸಿದ ಮೊಟ್ಟೆಯ ಚಿಪ್ಪನ್ನು ತೆಗೆದು ಮೈಕ್ರೊವೇವ್‌ನಲ್ಲಿ ತಾಪಮಾನ ಮತ್ತು ಸಮಯವನ್ನು ಸರಿಹೊಂದಿಸುವ ಮೂಲಕ ಮತ್ತೆ ಬಿಸಿ ಮಾಡುವುದನ್ನು ಕಾಣಬಹುದು. ನಂತರ, ಆತ ಚಾಕುವಿನಿಂದ ಮೊಟ್ಟೆಯನ್ನು ಕತ್ತರಿಸಲು ಪ್ರಯತ್ನಿಸಿದಾಗ, ಅದು ಸ್ಫೋಟಗೊಳ್ಳುತ್ತದೆ.

ಇನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿರುವ ವಿಡಿಯೋ ನಕಲಿ ಎಂದು ಅನೇಕರು ಕಾಮೆಂಟ್ ಮಾಡುತ್ತಿದ್ದಾರೆ. ಆದಾಗ್ಯೂ, ಕೆಲವರು ಅದರ ಹಿಂದಿನ ವೈಜ್ಞಾನಿಕ ಕಾರಣಗಳನ್ನು ಸಹ ವಿವರಿಸಿದ್ದಾರೆ.

ಬೇಯಿಸಿದ ಮೊಟ್ಟೆಯನ್ನು ಮತ್ತೆ ಬಿಸಿ ಮಾಡಿದಾಗ, ಅದರೊಳಗಿನ ನೀರು ಆವಿಯಾಗುತ್ತದೆ. ಮೈಕ್ರೋವೇವ್ ಮಾಡಿದಾಗ ಈ ಪ್ರಕ್ರಿಯೆಯು ವೇಗಗೊಳ್ಳುತ್ತದೆ. ಅಲ್ಲದೆ, ಮೊಟ್ಟೆಯ ಹೊರ ಕವಚವು ಈ ಆವಿಯನ್ನು ತಡೆಯಬಹುದು. ಅದರಿಂದ ಅದರೊಳಗಿನ ಒತ್ತಡವು ಹೆಚ್ಚುತ್ತಲೇ ಇರುತ್ತದೆ. ಇದು ಮೊಟ್ಟೆಯ ಹೊರ ಕವಚವನ್ನು ದುರ್ಬಲಗೊಳಿಸುತ್ತದೆ. ಈ ವೇಳೆ ಮೊಟ್ಟೆಯನ್ನು ಕತ್ತರಿಸಿದಾಗ, ಒತ್ತಡವು ಬಲದಿಂದ ಬಿಡುಗಡೆಯಾಗುತ್ತದೆ ಮತ್ತು ಅದು ಸ್ಫೋಟಗೊಳ್ಳುತ್ತದೆ.

ಅಮೇರಿಕನ್ ಅಕಾಡೆಮಿ ಆಫ್ ನೇತ್ರಶಾಸ್ತ್ರ ಬಿಡುಗಡೆ ಮಾಡಿದ ವರದಿಯ ಪ್ರಕಾರ, ಇಂತಹ ಸ್ಫೋಟಗಳು ಹತ್ತಿರದ ವ್ಯಕ್ತಿಯ ಕಾರ್ನಿಯಾವನ್ನು ಸುಡುವ ಸಾಮರ್ಥ್ಯವನ್ನು ಹೊಂದಿವೆ. ಇದು ದೃಷ್ಟಿಯ ಮೇಲೆ ಪರಿಣಾಮ ಬೀರುತ್ತದೆ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net