ನೆಟ್ಟಕಲ್ಲಪ್ಪ, ಬಸವನಗುಡಿ ಈಜು ಕೇಂದ್ರಕ್ಕೆ ವಾಟರ್​ಪೋಲೋ ಪ್ರಶಸ್ತಿ

ನೆಟ್ಟಕಲ್ಲಪ್ಪ, ಬಸವನಗುಡಿ ಈಜು ಕೇಂದ್ರಕ್ಕೆ ವಾಟರ್​ಪೋಲೋ ಪ್ರಶಸ್ತಿ
ನೆಟ್ಟಕಲ್ಲಪ್ಪ, ಬಸವನಗುಡಿ ಈಜು ಕೇಂದ್ರಕ್ಕೆ ವಾಟರ್​ಪೋಲೋ ಪ್ರಶಸ್ತಿ
Published on
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ನೆಟ್ಟಕಲ್ಲಪ್ಪ ಮತ್ತು ಬಸವನಗುಡಿ ಈಜು ಕೇಂದ್ರದ ತಂಡಗಳು ರಾಜ್ಯ ಸೀನಿಯರ್​ ವಾಟರ್​ಪೋಲೋ (water polo) ಚಾಂಪಿಯನ್​ಷಿಪ್​ನಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳಾ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡಿವೆ.

ಬಿಸಿಯು ಬೇಸ್​ಕ್ಯಾಂಪ್​ನಲ್ಲಿ ಶುಕ್ರವಾರ&ಶನಿವಾರ ನಡೆದ ಕೂಟದಲ್ಲಿ ಬಾಲಕರ ವಿಭಾಗದ ಫೈನಲ್​ನಲ್ಲಿ ನೆಟ್ಟಕಲ್ಲಪ್ಪ ಈಜು ಕೇಂದ್ರ (ಎನ್​ಎಸಿ) ತಂಡ ಸ್ವಿಮ್​ಲೈಫ್​ ತಂಡವನ್ನು 18-9 ಅಂತರದಿಂದ ಮಣಿಸಿ ಚಾಂಪಿಯನ್​ ಪಟ್ಟವೇರಿತು. ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಬಸವನಗುಡಿ ಈಜು ಕೇಂದ್ರದ (ಬಿಎಸಿ) ತಂಡ ಸ್ಟಾರ್​ ಅಕ್ವಟಿಕ್ಸ್​ ವಿರುದ್ಧ 14-9ರಿಂದ ಜಯಿಸಿತು.

ಮಹಿಳೆಯರ ವಿಭಾಗದ ಫೈನಲ್​ನಲ್ಲಿ ಬಿಎಸಿ ತಂಡ ಎನ್​ಎಸಿ ವಿರುದ್ಧ 24-12ರಿಂದ ಗೆಲುವು ಸಾಧಿಸಿತು. ಕಂಚಿನ ಪದಕದ ಹೋರಾಟದಲ್ಲಿ ಸ್ಟಾರ್​ ಅಕ್ವಟಿಕ್ಸ್​ ತಂಡ ಮೈಸೂರು ಸ್ವಿಮ್ಮರ್ಸ್​ ತಂಡವನ್ನು 17-7ರಿಂದ ಮಣಿಸಿತು.
ಪುರುಷರ ವಿಭಾಗದಲ್ಲಿ ಸ್ವಿಮ್​ಲೈಫ್​ನ ವಿಶ್ರುತ್​ ಚಕ್ರವರ್ತಿ ಮತ್ತು ಮಹಿಳೆಯರ ವಿಭಾಗದಲ್ಲಿ ಎನ್​ಎಸಿಯ ಪ್ರವ್ದ ಮಾಲತೇಶ್​ ಅತ್ಯುತ್ತಮ ಗೋಲು ಕೀಪರ್​ ಪ್ರಶಸ್ತಿ ಪಡೆದರು. ಎನ್​ಎಸಿಯ ಹರ್ಷಿತ್​ ಬಿ. ಮತ್ತು ಪ್ರಚೇತಾ ಆರ್​. ರಾವ್​ ಕ್ರಮವಾಗಿ ಪುರುಷ-ಮಹಿಳಾ ವಿಭಾಗದಲ್ಲಿ ಅತ್ಯುತ್ತಮ ಆಟಗಾರ-ಆಟಗಾರ್ತಿ ಪ್ರಶಸ್ತಿ ಗೆದ್ದುಕೊಂಡರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net